ADVERTISEMENT

ನಾರಿ ಸುವರ್ಣ ಟಗರುಗಳ ವಿತರಣೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2019, 5:23 IST
Last Updated 20 ಸೆಪ್ಟೆಂಬರ್ 2019, 5:23 IST
ಸೂಲಿಬೆಲೆ ಪಶು ಆಸ್ಪತ್ರೆ ಆವರಣದಲ್ಲಿ ತಳಿ ಸಂವರ್ಧನೆಗಾಗಿ ನಾರಿ ಸುವರ್ಣ ತಳಿಯ ಕುರಿಗಳನ್ನು ವಿತರಣೆ ಮಾಡಲಾಯಿತು
ಸೂಲಿಬೆಲೆ ಪಶು ಆಸ್ಪತ್ರೆ ಆವರಣದಲ್ಲಿ ತಳಿ ಸಂವರ್ಧನೆಗಾಗಿ ನಾರಿ ಸುವರ್ಣ ತಳಿಯ ಕುರಿಗಳನ್ನು ವಿತರಣೆ ಮಾಡಲಾಯಿತು   

ಸೂಲಿಬೆಲೆ: ಹೊಸಕೋಟೆ ತಾಲ್ಲೂಕಿನ ಕುರಿ ಮತ್ತು ಉಣ್ಣೆ ಉತ್ಪಾದಕರಿಗೆ ಹಾಗೂ ಪ್ರಗತಿಪರ ಕುರಿಗಾಹಿಗಳಿಗೆ ತಳಿ ಸಂವರ್ಧನೆಗಾಗಿ ನಾರಿ ಸುವರ್ಣಹೆಸರಿನ ಟಗರುಗಳನ್ನು ರಿಯಾಯಿತಿ ದರದಲ್ಲಿ ವಿತರಿಸಲಾಯಿತು.

ಸೂಲಿಬೆಲೆ ಪಶು ಆಸ್ಪತ್ರೆ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಟಗರುಗಳನ್ನು ವಿತರಿಸಿ ಪಶು ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಡಾ.ಜಿ.ಎಂ.ನಾಗರಾಜ್ ಮಾತನಾಡಿ, ‘ಹೊಸಕೋಟೆ ತಾಲ್ಲೂಕಿನ ಕುರಿ ಮತ್ತು ಉಣ್ಣೆ ಉತ್ಪಾದಕರಿಗೆ ಹಾಗೂ ಪ್ರಗತಿಪರ ಕುರಿಗಾಹಿಗಳಿಗೆ ತಳಿ ಸಂವರ್ಧನೆಗಾಗಿ ಅವಳಿ, ತ್ರಿವಳಿ ಮರಿಗಳನ್ನು ನೀಡಬಲ್ಲ ನಾರಿ ಸುವರ್ಣ ಕುರಿ ತಳಿಯ ಟಗರುಗಳನ್ನು ರಿಯಾಯಿತಿ ದರದಲ್ಲಿ ಕರ್ನಾಟಕ ಉಣ್ಣೆ ಅಭಿವೃದ್ಧಿ ನಿಗಮದಿಂದ ನೀಡಲಾಗಿದೆ. ಭಾರತದ ಎಲ್ಲ ತಳಿಯ ಕುರಿಗಳು ಒಂದು ಮರಿ ಮಾತ್ರ ಜನ್ಮ ನೀಡುತ್ತಿದ್ದು, ನಾರಿ ಸುವರ್ಣ ತಳಿಯ ಕುರಿಗಳು ಶೇ 65ರಷ್ಟು ಅವಳಿ ಮರಿಗಳನ್ನು ಶೇ 15ರಷ್ಟು ತ್ರಿವಳಿ ಮರಿಗಳನ್ನು ನೀಡುತ್ತದೆ. ಈ ತಳಿಯ ಟಗರುಗಳನ್ನು ಸ್ಥಳೀಯ ಹೆಣ್ಣು ಕುರಿಗಳೊಂದಿಗೆ ಸಂಕಲನಗೊಳಿಸಿದ್ದಲ್ಲಿ ಎರಡನೇ ತಲೆಮಾರಿನಿಂದ ಈ ಕುರಿಗಳಲ್ಲೂ ಸಹ ಅವಳಿ ಮರಿಗಳನ್ನು ಪಡೆಯಬಹುದಾಗಿದ್ದು ಕುರಿಗಾಹಿಗಳು ಆಸಕ್ತಿ ವಹಿಸಿ ಉತ್ತಮ ರೀತಿಯಲ್ಲಿ ಸಾಕಣೆ ಮಾಡಿ ಹೆಚ್ಚಿನ ಲಾಭ ಪಡೆಯುವಂತಾಗಲಿ’ ಎಂದರು.

ಪಶು ಇಲಾಖೆ ಸಹಾಯಕ ನಿರ್ದೇಶಕ ಆರ್.ಮಂಜುನಾಥ್, ಸೂಲಿಬೆಲೆ ಪಶು ವೈದ್ಯಾಧಿಕಾರಿ ಡಾ.ಎಂ.ಕೆ.ಮಂಜುನಾಥ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಮರವೆ ಕೃಷ್ಣಪ್ಪ, ಕರ್ನಾಟಕ ಕುರಿ ಮೇಕೆ ಸಾಕಾಣೆಕೆದಾರರ ಸಂಘದ ನಿರ್ದೇಶಕ ಹನುಮಂತೇಗೌಡ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.