ದೊಡ್ಡಬಳ್ಳಾಪುರ: ನಗರದಲ್ಲಿ ವಾರದಿಂದಲೂ ಸುರಿಯುತ್ತಿರುವ ಮಳೆಯಿಂದ ಒಳಚರಂಡಿಗಳಲ್ಲಿ ನೀರಿನ ಅರಿವು ಹೆಚ್ಚಾಗಿದ್ದು, ಕಸ ಕಟ್ಟಿಕೊಂಡು ಬಂದ್ ಆಗಿ ಚರಂಡಿ ನೀರು ರಸ್ತೆಗೆ ನುಗ್ಗುತ್ತಿದೆ. ಕೊಚ್ಚೆ ನೀರಿನ ದುರ್ನಾತ ವಹಿಸಿಕೊಂಡು ಜನ ಓಡಾಡುತ್ತಿದ್ದಾರೆ.
ನಗರದ ಇಸ್ಲಾಂಪುರ, ಮಾರುತಿನಗರ, ಕಚೇರಿಪಾಳ್ಯ, ತೇರಿನಬೀದಿ ಸೇರಿದಂತೆ ಹಲವು ತಗ್ಗು ಪ್ರದೇಶದ ಕಡೆಗಳಲ್ಲಿ ಒಳಚರಂಡಿ ಮ್ಯಾನ್‌ಹೋಲ್ ಬಂದ್ ಆಗಿ ಕೊಚ್ಚೆ ರಸ್ತೆಯಲ್ಲಿ ಹರಿಯುತ್ತಿವೆ. ನಗರಸಭೆ ಸಿಬ್ಬಂದಿ ಜೋರು ಮಳೆಯಲ್ಲೇ ಯಂತ್ರದ ಮೂಲಕ ಒಳಚರಂಡಿಯಲ್ಲಿ ನೀರು ಸರಾಗವಾಗಿ ಹರಿಯುವಂತೆ ಮಾಡಲು ಹರಸಾಹಸ ಮಾಡುತ್ತಿದ್ದಾರೆ.
ಸಾರ್ವಜನಿಕರು ಕೆಲವು ಕಡೆ ಮಳೆ ನೀರು ಒಳಚರಂಡಿಗೆ ಹರಿಯದಂತೆ ಮಾಡುತ್ತಿದ್ದಾರೆ. ಬಳಸಿದ ಪ್ಯಾಡ್, ಹಳೆ ಬಟ್ಟೆಗಳನ್ನು ಒಳಚರಂಡಿ ಪೈಪ್‌ಲೈನ್ ಸೇರದಂತೆ ಎಚ್ಚರ ವಹಿಸುತ್ತಿಲ್ಲ. ಇದರಿಂದ ಮಳೆ ಹೆಚ್ಚಾದಾಗ ಒಳಚರಂಡಿ ಮ್ಯಾನ್‌ಹೋಲ್ ಬಂದ್ ಆಗಿ ರಸ್ತೆಗೆ ಕೊಚ್ಚೆ ನೀರು ಹರಿಯುತ್ತಿದೆ’ ಎಂದು ಒಳಚರಂಡಿ ದುರಸ್ತಿ ನಿರತ ಕಾರ್ಮಿಕರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.