ADVERTISEMENT

ಈಶ್ವರಾಂಭ ಜನ್ಮ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2025, 15:33 IST
Last Updated 8 ಜೂನ್ 2025, 15:33 IST
ದೊಡ್ಡಬಳ್ಳಾಪುರದ ಭಗವಾನ್‌ ಶ್ರೀಸತ್ಯಸಾಯಿ ಸೇವಾ ಸಮಿತಿಯಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು
ದೊಡ್ಡಬಳ್ಳಾಪುರದ ಭಗವಾನ್‌ ಶ್ರೀಸತ್ಯಸಾಯಿ ಸೇವಾ ಸಮಿತಿಯಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು   

ದೊಡ್ಡಬಳ್ಳಾಪುರ: ಇಲ್ಲಿನ ದೇವರಾಜನಗರದ ಭಗವಾನ್‌ ಶ್ರೀಸತ್ಯಸಾಯಿ ಸೇವಾ ಸಮಿತಿ ವತಿಯಿಂದ ದೈವಮಾತೆ ಈಶ್ವರಾಂಭ ಜನ್ಮ ದಿನಾಚರಣೆ ಅಂಗವಾಗಿ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ಹಾಗೂ ಕಲಿಕಾ ಸಾಮಗ್ರಿ ವಿತರಣೆ ನಡೆಯಿತು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿರುವ ಟಿ.ಸಿ.ಹರ್ಷವರ್ಧನ್‌ ಹಾಗೂ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಎಚ್‌.ಆರ್‌.ಭುವನ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಸತ್ಯಸಾಯಿ ಸೇವಾ ಸಂಸ್ಥೆಗಳ ಶ್ರೀಸಾಯಿ ಸೇವಾ ಟ್ರಸ್ಟ್‌ ಸಂಚಾಲಕ ಎಸ್‌.ಎಲ್‌.ರಾಮಚಂದ್ರ, ಸತ್ಯ ಸಾಯಿಬಾಬಾ ಅವರು ಜಗತ್ತಿಗೆ ನೀಡಿರುವ ಕೊಡುಗೆ ದೊಡ್ಡದು. ಧ್ಯಾನ, ಆಧ್ಯಾತ್ಮ ಚಿಂತನೆಗಳು ನಮ್ಮ ಪರಿಪೂರ್ಣ ವ್ಯಕ್ತಿತ್ವಕ್ಕೆ ಪೂರಕವಾಗಿವೆ. ಸಾಯಿ ಮಂದಿರದಲ್ಲಿ ಪ್ರತಿ ಗುರುವಾರ ಹಾಗೂ ಭಾನುವಾರದಂದು ನಡೆಯುವ ಭಜನಾ ಕಾರ್ಯಕ್ರಮಗಳಿಗೆ ಎಲ್ಲರೂ ಭಾಗವಹಿಸಬೇಕು. ಮಕ್ಕಳಿಗೆ ನಮ್ಮ ಸಂಸ್ಕೃತಿ ಪರಂಪರೆಗಳ ಬಗ್ಗೆ ಅರಿವ ಮೂಡಿಸಬೇಕಿದೆ ಎಂದರು.

ADVERTISEMENT

ಸತ್ಯಸಾಯಿ ಸೇವಾ ಸಮಿತಿ ಎಂ.ಕೆ.ವಿಶ್ವನಾಥ್, ಬಿ.ಜೆ.ದೀಪಕ‌ ಹಾಗೂ ಸಮಿತಿಯ ಹಿರಿಯ ಸದಸ್ಯರು ಇದ್ದರು. ಶ್ರೀಸತ್ಯಸಾಯಿ ಸಾಮೂಹಿಕ ಭಜನೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.