ADVERTISEMENT

ದೊಡ್ಡಬಳ್ಳಾಪುರ: ಸೀತಾರಾಮ ಕಲ್ಯಾಣೋತ್ಸವ, ರಥೋತ್ಸವ

ಭಜನೆ, ಮೆರವಣಿಗೆ, ಅನ್ನಸಂತರ್ಪಣೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2025, 8:30 IST
Last Updated 3 ಡಿಸೆಂಬರ್ 2025, 8:30 IST
ದೊಡ್ಡಬಳ್ಳಾಪುರ ರೋಜೀಪುರದಲ್ಲಿನ ಶ್ರೀಪ್ರಸನ್ನ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ಸೀತಾರಾಮ ಕಲ್ಯಾಣೋತ್ಸವ, 4ನೇ ವರ್ಷದ ಸೀತಾರಾಮ ರಥೋತ್ಸವ ನಡೆಯಿತು  
ದೊಡ್ಡಬಳ್ಳಾಪುರ ರೋಜೀಪುರದಲ್ಲಿನ ಶ್ರೀಪ್ರಸನ್ನ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ಸೀತಾರಾಮ ಕಲ್ಯಾಣೋತ್ಸವ, 4ನೇ ವರ್ಷದ ಸೀತಾರಾಮ ರಥೋತ್ಸವ ನಡೆಯಿತು     

ದೊಡ್ಡಬಳ್ಳಾಪುರ: ನಗರ ಹಾಗೂ ಗ್ರಾಮಾಂತರ ಪ್ರದೇಶದ ವಿವಿಧ ಆಂಜನೇಯಸ್ವಾಮಿ ಹಾಗೂ ಶ್ರೀರಾಮ ದೇವಾಲಯಗಳಲ್ಲಿ ಹನುಮ ಜಯಂತಿ ಮಂಗಳವಾರ ಶ್ರದ್ಧಾಭಕ್ತಿಗಳಿಂದ ನಡೆಯಿತು.

ನಗರದ ಗಂಗಾಧರಪುರ, ರೋಜೀಪುರದಲ್ಲಿನ ಪ್ರಸನ್ನ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ಸೀತಾರಾಮ ಕಲ್ಯಾಣೋತ್ಸವ ಹಾಗೂ 4ನೇ ವರ್ಷದ ಸೀತಾರಾಮ ರಥೋತ್ಸವ ನಡೆಯಿತು.

11 ದಿನಗಳಿಂದ ಹನುಮಜಯಂತಿ ಅಂಗವಾಗಿ ವಿವಿಧ ಭಜನಾ ಮಂಡಳಿಗಳಿಂದ ರಾತ್ರಿ ಹಗಲು ನಿರಂತರವಾಗಿ ನಡೆದಿದ್ದ ಭಜನೆಗಳು ಮುಕ್ತಾಯವಾದವು. ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ADVERTISEMENT

ನಗರದ ನೆಲದಾಂಜನೇಯಸ್ವಾಮಿ ದೇವಾಲಯದಲ್ಲಿ ಹನುಮಜಯಂತಿ ಅಂಗವಾಗಿ ದೇವಾಲಯದಲ್ಲಿ ರಾಮತಾರಕ ಹೋಮ, ಪಂಚಾಮೃತ ಅಭಿಷೇಕ, ರಾಮತಾರಕ ಹೋಮ, ವಿಷ್ಣು ಸಹಸ್ರ ನಾಮ ಭಜನೆ ನಡೆಯಿತು. ಸಂಜೆ ನೆಲದಾಂಜನೇಯ ಸ್ವಾಮಿ ಪ್ರಾಕಾರೋತ್ಸವ ವಿಶೇಷ ಅಲಂಕಾರ ಪೂಜಾ ಕಾರ್ಯಗಳು ನಡೆದವು.

ಅರಳುಮಲ್ಲಿಗೆ ಬಾಗಿಲು ಸರ್.ಎಂ.ವಿಶ್ವೇಶ್ವರಯ್ಯ ವೃತ್ತದ ಪ್ರಸನ್ನ ಆಂಜಿನೇಯಸ್ವಾಮಿ ದೇವಾಲಯದಲ್ಲಿ ಹನುಮ ಬೆಳಗ್ಗೆ ವಿಷ್ಣು ಸಹಸ್ರ ನಾಮ ಪಾರಾಯಣ, ದೇವರ ನಾಮಗಳ ಗಾಯನ, ಭಜನಾ ಕಾರ್ಯಕ್ರಮ, ನಂತರ ಸಂಜೆ ಆಂಜನೇಯಸ್ವಾಮಿ ಉತ್ಸವ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

ತಾಲ್ಲೂಕಿನ ರಾಜಘಟ್ಟದ ಆಂಜನೇಯಸ್ವಾಮಿ ದೇವಾಲಯದಲ್ಲಿ ಹೂವಿನ ಅಲಂಕಾರ ಮಾಡಲಾಗಿತ್ತು. ನೂರಾರು ಭಕ್ತರು ಸ್ವಾಮಿಯ ದರ್ಶನ ಪಡೆದರು. ತೂಬಗೆರೆ ವೆಂಕಟರಮಣಸ್ವಾಮಿ ದೇವಾಲಯದ ಆವರಣದಲ್ಲಿರುವ ವ್ಯಾಸರಾಯ ಪ್ರತಿಷ್ಠಾಪಿತ ಆಂಜನೇಯಸ್ವಾಮಿ ದೇವಾಲಯದಲ್ಲಿ ಪೂಜಾ ಕೈಂಕರ್ಯಗಳು ಜರುಗಿದವು.

ರೈಲು ನಿಲ್ದಾಣ ಬಳಿಯಿರುವ ಪ್ರಸನ್ನ ಆಂಜನೇಯಸ್ವಾಮಿ ದೇವಾಲಯದಲ್ಲಿ ಅಲಂಕಾರ ಹಾಗೂ ಅನ್ನಸಂತರ್ಪಣೆ ನಡೆಯಿತು. ಸಂಜೆ ವಿವಿಧ ಕಲಾ ತಂಡಗಳೊಂದಿಗೆ ಆಂಜನೇಯಸ್ವಾಮಿ ಉತ್ಸವ ನಡೆಯಿತು. ರಂಗಪ್ಪ ಸರ್ಕಲ್ ರಾಮಣ್ಣ ಬಾವಿ ಬಳಿಯ ಆಲಿಂಗನ ರಾಮಾಂಜನೇಯಸ್ವಾಮಿ ದೇವಾಲಯ, ತಾಲ್ಲೂಕಿನ ಮಜರಾಹೊಸಹಳ್ಳಿಯ ಅಭಯ ಆಂಜನೇಯಸ್ವಾಮಿ ದೇವಾಲಯ, ಕರೇನಹಳ್ಳಿಯಲ್ಲಿನ ವಾಲಿ ದೇವಾಲಯ, ಮಧುರೆ ಕರೆ ಏರಿ ಮೇಲಿನ ಆಂಜನೇಯಸ್ವಾಮಿ, ನಗರದ ಹೊರವಲಯದ ಖಾಸ್ಬಾಗ್ ದರ್ಗಾಪುರದ ಭಕ್ತಾಂಜನೇಯ ದೇವಾಲಯದಲ್ಲಿ ಸ್ವಾಮಿಗೆ ವಿಶೇಷ ಅಲಂಕಾರ, ಉತ್ಸವ ನಡೆಸಲಾಯಿತು.

ತ್ಯಾಗರಾಜ ನಗರದ ಅಭಯ ಆಂಜಿನೇಯ ಸ್ವಾಮಿ ದೇವಾಲಯ, ಸಿದ್ದೇನಾಯಕನ ಹಳ್ಳಿ, ಅರಳುಮಲ್ಲಿಗೆ ಕೆರೆ ಏರಿ ಅಭಯ ಆಂಜನೇಯಸ್ವಾಮಿ,ಶಿವಪುರಗೇಟ್, ನಾಗರಕೆರೆ ಏರಿ ಆಂಜನೇಯಸ್ವಾಮಿ, ರಾಗಿರಾಯನ ಗುಡ್ಡ ಮುಂತಾದ ದಲ್ಲಿ ಅನ್ನ ಸಂತರ್ಪಣೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.