ದೊಡ್ಡಬಳ್ಳಾಪುರ: ಇಲ್ಲಿನ ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯ,ಲಯನ್ಸ್ ಕ್ಲಬ್ ಆಫ್ ಆರ್‌ಎಲ್‌ಜೆಐ ಸಹಯೋಗದಲ್ಲಿ ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ಅವರ ಜನ್ಮದಿನಾಚರಣೆ ಪ್ರಯುಕ್ತ ಸೋಮವಾರ ರಾಷ್ಟ್ರೀಯ ಎಂಜಿನಿಯರ್ಸ್ ದಿನ ಆಚರಿಸಲಾಯಿತು.
ಶ್ರೀದೇವರಾಜ್ ಅರಸ್ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಜೆ.ರಾಜೇಂದ್ರ ಮಾತನಾಡಿ, ದೂರದೃಷ್ಟಿ ಹಾಗೂ ಜನಸ್ನೇಹಿ ಚಿಂತನೆಗಳಿಂದ ವಿಶ್ವೇಶ್ವರಯ್ಯನವರು ನಾಡಿನ ಎಲ್ಲಾ ವರ್ಗಗಳ ಆಶಾಕಿರಣ ಎನಿಸಿದ್ದಾರೆ. ಮುದ್ದೇನಹಳ್ಳಿಯಲ್ಲಿ ಜನಿಸಿ ಜಗತ್ತೇ ನಿಬ್ಬೆರಗಾಗುವಂತೆ ತಮ್ಮ ಯೋಜನೆಗಳ ಮೂಲಕ ದೇಶ ಸೇವೆಯನ್ನು ಮಾಡಿದ ಅವರ ಬದುಕು ಎಲ್ಲರಿಗೂ ಮಾದರಿಯಾಗಿದೆ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಡಾ.ವಿಜಯ್‌ಕಾರ್ತಿಕ್, ಎಂಜಿನಿಯರ್‌ಗಳಿಗೆ ವಿಶ್ವೇಶ್ವರಯ್ಯ ಮಾದರಿ. ಅವರ ಸಮಯಪ್ರಜ್ಞೆ, ಕಾರ್ಯತಂತ್ರ ಮತ್ತು ಅನುಷ್ಠಾನದ ವೈಖರಿ ಎಲ್ಲಾ ಹಂತಗಳಲ್ಲೂ ಗಮನ ಸೆಳೆಯುತ್ತದೆ ಎಂದರು.
ಇದೇ ವೇಳೆ ಹಿರಿಯ ಎಂಜಿನಿಯರ್ ಐ.ಎಂ.ರಮೇಶ್‌ಕುಮಾರ್, ಯುವ ಎಂಜಿನಿಯರ್ ಮಾರುತಿ ಅವರನ್ನು ಅಭಿನಂದಿಸಲಾಯಿತು.
ಡೀನ್ ಡಾ.ಶ್ರೀನಿವಾಸರೆಡ್ಡಿ, ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ಆರ್.ರವಿಕಿರಣ್, ಕಾಲೇಜಿನ ಮಾನವ ಸಂಪನ್ಮೂಲ ನಿರ್ದೇಶಕ ಎನ್.ಎಸ್.ಬಾಬುರೆಡ್ಡಿ, ಉಪಪ್ರಾಂಶುಪಾಲ ಡಾ.ಶಿವಪ್ರಸಾದ್, ಎಸ್‌ಡಿಯುಐಎಂ ಪ್ರಾಂಶುಪಾಲ ಡಾ.ಗೌರಪ್ಪ, ಪಾಲಿಟೆಕ್ನಿಕ್ ಪ್ರಾಂಶುಪಾಲ ನರಸಿಂಹರೆಡ್ಡಿ, ಐಟಿಐ ಪ್ರಾಂಶುಪಾಲ ರವಿಕುಮಾರ್, ಪ್ರೌಢಶಾಲೆ ಮುಖ್ಯಶಿಕ್ಷಕ ಜಿಯಾವುಲ್ಲಾ ಖಾನ್, ಪಿಯುಸಿಯ ಜೆ.ವಿ.ಚಂದ್ರಶೇಖರ್, ದೈಹಿಕ ಶಿಕ್ಷಣ ನಿರ್ದೇಶಕ ದಾದಾಫೀರ್, ವ್ಯವಸ್ಥಾಪಕ ಎಸ್.ಯತಿನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.