ದೊಡ್ಡಬಳ್ಳಾಪುರ: ನಗರದಲ್ಲಿ ಬಿಸಿಲಿನ ತಾಪ ಹೆಚ್ಚಾಗುತ್ತಿರುವ ಸಂದರ್ಭದಲ್ಲೇ ಜನರು ಬಾಯಾರಿಕೆ ತೀರಿಸಿಕೊಳ್ಳಲು ಎಳನೀರು, ನಿಂಬೆ ಷರಬತ್ತು, ಗೋಲಿ ಸೋಡ ಹಾಗೂ ಇತರೆ ತಂಪುಪಾನೀಯಗಳ ಮೊರೆ ಹೋಗುತ್ತಿದ್ದಾರೆ.
ದಾಹ ನೀಗಿಸಿಕೊಳ್ಳಲು ಥಟ್ಟನೆ ನೆನಪಾಗುವ ಮತ್ತು ಕೈಗೆಟುಕುವ ಬೆಲೆಯಲ್ಲಿ ದೊರೆಯುವ ಗೋಲಿ ಸೋಡ. ಶಾಲಾ,ಕಾಲೇಜುಗಳ ರಸ್ತೆ ಬದಿಯು ಸೇರಿದಂತೆ ಆಯಕಟ್ಟಿನ ವೃತ್ತಗಳಲ್ಲಿ ಈಗ ಗೋಲಿ ಸೋಡು ಕುಡಿಯುತ್ತಾ ಜನ ನಿಂತಿರುತ್ತಾರೆ.
ನಗರದ ಇತರೆಡೆಗಳಲ್ಲಿನ ಗೋಲಿ ಸೋಡ ಮಾರಾಟಗಾರರು ಬೇಸಿಗೆಯಲ್ಲಿ ಮಾತ್ರ ಕಾಣಸಿಗುತ್ತಾರೆ. ಆದರೆ ನಗರದ ಕೊಂಗಾಡಿಯಪ್ಪ ಕಾಲೇಜು, ಸರ್ಕಾರಿ ಜೂನಿಯರ್ ಕಾಲೇಜು ಹಾಗೂ ಆರ್.ಎಲ್.ಜಾಲಪ್ಪ ಕಾಲೇಜು ಸಮೀಪ ಮಾತ್ರ ಮಳೆಗಾಲ, ಚಳಿಗಾಲ ಸೇರಿದಂತೆ ವರ್ಷವಿಡೀ ಸೋಡ ಮಾರಾಟ ಮಾಡುತ್ತಾರೆ.
ಆರ್.ಎಲ್.ಜಾಲಪ್ಪ ಕಾಲೇಜು ಸಮೀಪ ಸುಮಾರು 15 ವರ್ಷಗಳಿಂದಲೂ ಗೋಲಿ ಸೋಡ ಮಾರಾಟದಲ್ಲಿ ತೊಡಗಿಸಿಕೊಂಡಿರುವ ದೇವ್ ಪ್ರಸಾದ್ ಅವರ ಬಳಿ ನಿಂಬೆ ಹಣ್ಣಿನ ಸೋಡದ ಜೊತಗೆ ಕೇರಳ ಫುಲ್‌ಜಾರ್, ಬಟರ್ ಮಿಲ್ಕ್, ಪುಲಿಕ್ ಸೋಡ, ವೈಟ್‌ಸೋಡ, ನೈಸರ್ಗಿಕ ಬಣ್ಣದ ಸೋಡ, ವಿಭಿನ್ನ ರೀತಿಯ ಸೊಪ್ಪಿನಲ್ಲಿ ತಯಾರಿಸಿದ ಸೋಡಗಳು ದೊರೆಯುತ್ತವೆ. ಹೀಗಾಗಿಯೇ ಇಲ್ಲಿ ಸೋಡ ಕುಡಿಯಲು ಸದಾ ಗ್ರಾಹಕರು ಇರುತ್ತಾರೆ. ನಗರದ ವಿವಿಧ ಭಾಗಗಳಿಂದಲು ಸೋಡ ಕುಡಿದು ಹೋಗುವ ಸಲುವಾಗಿಯೇ ಇಲ್ಲಿಗೆ ಕಾರು, ಬೈಕ್‌ಗಳಲ್ಲಿ ಬಂದು ಹೋಗುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.