ADVERTISEMENT

ತಾಟಿನಿಂಗು ಮೊರೆ ಹೋದ ವಿದೇಶಿಯರು

​ಪ್ರಜಾವಾಣಿ ವಾರ್ತೆ
Published 14 ಮೇ 2019, 13:33 IST
Last Updated 14 ಮೇ 2019, 13:33 IST
ವಿಜಯಪುರದಲ್ಲಿ ತಾಟಿನಿಂಗು ಖರೀದಿ ಮಾಡುತ್ತಿದ್ದ ವಿದೇಶಿ ಮಹಿಳೆಯರು
ವಿಜಯಪುರದಲ್ಲಿ ತಾಟಿನಿಂಗು ಖರೀದಿ ಮಾಡುತ್ತಿದ್ದ ವಿದೇಶಿ ಮಹಿಳೆಯರು   

ವಿಜಯಪುರ: ತೀವ್ರವಾದ ಬಿಸಿಲಿನ ತಾಪಮಾನದಿಂದ ಬಸವಳಿದು ಹೋಗುತ್ತಿರುವ ಜನರು ತಂಪು ಪಾನೀಯಗಳು, ಎಳ ನೀರು ಹೀಗೆ ವಿವಿಧ ಬಗೆಯ ಪಾನೀಯಗಳ ಮೊರೆ ಹೋಗುತ್ತಿದ್ದು, ಇದಕ್ಕೆ ವಿದೇಶಿಗರೂ ಹೊರತಾಗಿಲ್ಲ.

ನಗರದಲ್ಲಿ ದಾಖಲಾಗುತ್ತಿರುವ 34 ಡಿಗ್ರಿಯಷ್ಟು ಸುಡು ಬಿಸಿಲಿನಿಂದ ರಕ್ಷಿಸಿಕೊಳ್ಳಲು ವಿದೇಶಿ ಪ್ರಯಾಣಿಕರು, ತಾಟಿನಿಂಗುವಿನ ಮೊರೆ ಹೋದರು. ಯಾವುದೇ ಕಾಲದಲ್ಲಿ ಈ ಭಾಗಕ್ಕೆ ಬಂದರೂ ಸಮಶೀತೋಷ್ಣ ವಲಯವಾಗಿರುವ ಕಾರಣ ಇಲ್ಲಿನ ವಾತಾವರಣ ಉತ್ತಮವಾಗಿರುತ್ತಿತ್ತು. ಆದರೆ, ಈಚೆಗೆ ಇಲ್ಲಿನ ವಾತಾವರಣದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿರುವ ಕಾರಣ ಸ್ಥಳೀಯರು ಕೂಡಾ ತಾಳಿಕೊಳ್ಳಲಾಗದೆ, ಕೂಲರ್‌ಗಳು, ಫ್ಯಾನ್‌ಗಳು, ಹವಾನಿಯಂತ್ರಿತ ಯಂತ್ರಗಳ ಮೊರೆ ಹೋಗುವಂತಾಗಿದೆ.

ವಿದೇಶಿ ಮಹಿಳೆ ಡೋರ್ತಿ ಮಾತನಾಡಿ, ‘ನಾವು ಎರಡು ವರ್ಷಕ್ಕೊಮ್ಮೆಯಾದರೂ ಬೆಂಗಳೂರಿಗೆ ಬರುತ್ತೇವೆ. ಇಲ್ಲಿನ ವಾತಾವರಣ ತುಂಬಾ ಚೆನ್ನಾಗಿರುತಿತ್ತು. ಈ ಬಾರಿ ತುಂಬಾ ಉಷ್ಣಾಂಶವಿದೆ. ನಮಗೂ ಕಷ್ಟವಾಗುತ್ತಿದೆ. ಮೂರು ವರ್ಷಗಳ ಹಿಂದೆ ನಂದಿ ಬೆಟ್ಟಕ್ಕೆ ಬಂದಿದ್ದಾಗ ವಾತಾವರಣ ತುಂಬಾ ಚೆನ್ನಾಗಿತ್ತು. ಈಗ ಅಲ್ಲಿಯೂ ಹೆಚ್ಚು ಬಿಸಿಯಾಗುತ್ತಿದೆ’ ಎಂದರು.

ADVERTISEMENT

‘ಇದು ನಮಗೆ ಹೊಸ ಅನುಭವ, ಸ್ಥಳೀಯರು ಈ ಹಣ್ಣುಗಳನ್ನು ಪರಿಚಯಿಸಿದರು. ಕೊಬ್ಬರಿಯ ಮಾದರಿಯಲ್ಲಿ ತುಂಬಾ ಚೆನ್ನಾಗಿದೆ. ಬಿಸಿಲಿಗೆ ತುಂಬಾ ತಂಪು ಪಾನೀಯಗಳನ್ನು ಕುಡಿದು ಸಾಕಾಗಿತ್ತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.