ADVERTISEMENT

ದೊಡ್ಡಬಳ್ಳಾಪುರ: ಮೊದಲ ಹಲಸು ಮೇಳಕ್ಕೆ ಉತ್ತಮ ಸ್ಪಂದನೆ

​ಪ್ರಜಾವಾಣಿ ವಾರ್ತೆ
Published 7 ಮೇ 2025, 15:50 IST
Last Updated 7 ಮೇ 2025, 15:50 IST
<div class="paragraphs"><p>ದೊಡ್ಡಬಳ್ಳಾಪುರ ತಾಲ್ಲೂಕಿನ ಘಾಟಿ ಕ್ಷೇತ್ರದಲ್ಲಿ ಬುಧವಾರ ನಡೆದ ಹಲಸು ಮೇಳದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ&nbsp; ನಿರ್ಮಲಾನಂದನಾಥ ಸ್ವಾಮೀಜಿ ಭೇಟಿ ನೀಡಿ ಹಲಸು ಹಣ್ಣಿನ ರುಚಿ ಸವಿದರು</p></div>

ದೊಡ್ಡಬಳ್ಳಾಪುರ ತಾಲ್ಲೂಕಿನ ಘಾಟಿ ಕ್ಷೇತ್ರದಲ್ಲಿ ಬುಧವಾರ ನಡೆದ ಹಲಸು ಮೇಳದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ  ನಿರ್ಮಲಾನಂದನಾಥ ಸ್ವಾಮೀಜಿ ಭೇಟಿ ನೀಡಿ ಹಲಸು ಹಣ್ಣಿನ ರುಚಿ ಸವಿದರು

   

ತೂಬಗೆರೆ(ದೊಡ್ಡಬಳ್ಳಾಪುರ):  ಇದೇ ಮೊದಲ ಬಾರಿಗೆ ತಾಲ್ಲೂಕಿನ ಘಾಟಿ ಸುಬ್ರಹ್ಮಣ್ಯದಲ್ಲಿ ಆಯೋಜಿಸಿದ್ದ ಹಲಸು ಮೇಳಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಘಾಟಿ ಕ್ಷೇತ್ರದಲ್ಲಿ ಬುಧವಾರ ನಡೆದ ಮಾಂಗಲ್ಯ ಭಾಗ್ಯ ಸಾಮೂಹಿಕ ವಿವಾಹ ವೇದಿಕೆ ಸಮೀಪ ತಾಲ್ಲೂಕಿನ ಹಲಸು ಬೆಳೆಗಾರರು ಹಾಗೂ ವ್ಯಾಪಾರಿಗಳಿಂದ ಹಲಸು ಮೇಳ ಆಯೋಜಿಸಲಾಗಿತು.

ADVERTISEMENT

ತಾಲ್ಲೂಕಿನ ವಿವಿಧ ಹೋಬಳಿಗಯ ವಿವಿಧ ಗ್ರಾಮಗಳಿಂದ ಹಳದಿ ಬಣ್ಣದ ಹೆಬ್ಬಲಸು, ಬೇರು ಹಲಸು, ಕೆಂಪು ತೊಳೆಯ ಚಂದ್ರಹಲಸಿನ ಹಣ್ಣುಗಳ ಮಾರಾಟ ಭರ್ಜರಿಯಾಗಿ ನಡೆಯಿತು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಿರ್ಮಲಾನಂದ ನಾಥಸ್ವಾಮೀಜಿ, ಕೆಪಿಸಿಸಿ ಉಪಾಧ್ಯಕ್ಷ ಟಿ.ವೆಂಕಟರಮಣಯ್ಯ, ಜಿಲ್ಲಾಧಿಕಾರಿ ಎ.ಬಿ.ಬಸವರಾಜು, ಉಪವಿಭಾಗಾಧಿಕಾರಿ ಎನ್.ದುರ್ಗಾಶ್ರೀ, ತಹಶೀಲ್ದಾರ್ ವಿಭಾವಿದ್ಯಾ ರಾಥೋಡ್ ಸೇರಿದಂತೆ ಸಾರ್ವಜನಿಕರು ಹಲಸು ಮೇಳಕ್ಕೆ ಭೇಟಿ ನೀಡಿ ಹಲಸಿನ ರುಚಿ ಸವಿದರು.

‘ತೂಬಗೆರೆ ಪ್ರಾಂತ್ಯದ ಹಲಸಿನ ವಿಶೇಷತೆ ಬಗ್ಗೆ ನಾವು ತಿಳಿದುಕೊಂಡಿದ್ದೇವೆ. ಇಲ್ಲಿನ ತಳಿಯ ಹಲಸಿನಲ್ಲಿ ವಿಶೇಷ ರುಚಿಯಿವೆ. ರೈತರಿಗೆ ಹಲಸು ಮೇಳದ ಆಯೋಜನೆಯಿಂದ ಹೆಚ್ಚಿನ ಪ್ರಯೋಜನಗಳಿವೆ’ ಎಂದು ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ತಾಲ್ಲೂಕಿನಲ್ಲಿ ಹಲಸು ಮೇಳೆ ಆಯೋಜಿಸುವಂತೆ ಹಲಸು ಬೆಳೆಗಾರರು ಹಾಗೂ ವ್ಯಾಪಾರಿಗಳ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಅವರು ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಹಲಸು ಮೇಳ ನಡೆಸಲು ಅನುವು ಮಾಡಿಕೊಟ್ಟಿರುವುದು ಸಂತಸದ ವಿಚಾರ. ಹಲಸಿನ ಸುಗ್ಗಿ ಮುಗಿಯುವಷ್ಟರಲ್ಲಿ ಹಿಂದೂಪುರ-ಬೆಂಗಳೂರು ರಸ್ತೆ ಬದಿ ಹಾಗೂ ದೊಡ್ಡಬಳ್ಳಾಪುರ ನಗರದಲ್ಲಿ ಬೃಹತ್ ಹಲಸಿನ ಮೇಳ ನಡೆಸಿದರೆ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಹಲಸು ವ್ಯಾಪಾರಿ ಮಂಜುನಾಥ್ ತಿಳಿಸಿದರು.

ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಎಸ್.ರವಿಕುಮಾರ್, ಹಲಸು ಬೆಳೆಗಾರ ಜಿ.ರಾಜಶೇಖರ್, ಕಸಬಾ ಹೋಬಳಿ ಹಾಗೂ ತೂಬಗೆರೆ ಹೋಬಳಿ ಭಾಗದ ಹಲಸು ಬೆಳೆಗಾರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.