ADVERTISEMENT

ಮಾದನಾಯಕನಹಳ್ಳಿ ಪುರಸಭೆ ಶೀಘ್ರ ಅಸ್ತಿತ್ವಕ್ಕೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2020, 19:32 IST
Last Updated 28 ಜನವರಿ 2020, 19:32 IST
ಪುರಸಭೆಯಾಗಲಿರುವ ಮಾದನಾಯಕನಹಳ್ಳಿಗ್ರಾಮಪಂಚಾಯಿತಿ
ಪುರಸಭೆಯಾಗಲಿರುವ ಮಾದನಾಯಕನಹಳ್ಳಿಗ್ರಾಮಪಂಚಾಯಿತಿ   

ಹೆಸರಘಟ್ಟ:ದಾಸನಪುರ ಹೋಬಳಿಯಲ್ಲಿರುವ ಮಾದನಾಯಕನಹಳ್ಳಿ, ಮಾದಾವರ ಮತ್ತು ಸಿದ್ದನಹೊಸಹಳ್ಳಿ ಗ್ರಾಮ ಪಂಚಾಯಿತಿಗಳನ್ನು ಒಗ್ಗೂಡಿಸಿ‘ಮಾದನಾಯಕನಹಳ್ಳಿ ಪುರಸಭೆ’ ರಚಿಸಲು ರಾಜ್ಯ ಸರ್ಕಾರವು ಅಧಿಸೂಚನೆಯನ್ನು ಹೊರಡಿಸಿದೆ.

ಪುರಸಭೆಗೆ ಒಳಪಡುವ ಪ್ರದೇಶಗಳು: ಮಾದನಾಯಕನಹಳ್ಳಿ ಗ್ರಾಮ, ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರ, ಮಾದಾವರ ಮತ್ತು ಅದರ ಗಡಿ ಭಾಗ, ತೋಟದ ಗುಡ್ಡಹಳ್ಳಿ ಗ್ರಾಮದ ಪಶ್ಚಿಮ ಗಡಿ ಪ್ರದೇಶಗಳು, ಸಿದ್ದನಹೊಸಹಳ್ಳಿ ಗ್ರಾಮ, ಹನುಮಂತಸಾಗರ ಹಾಗೂ ಕುದುರೆಗೆರೆ ಮತ್ತು ಗಡಿಯಂಚಿನ ಪ್ರದೇಶ,
ಮಾಗಡಿ ಮುಖ್ಯರಸ್ತೆಯನ್ನು ಸಂಧಿಸುವ ರಸ್ತೆ ಮತ್ತು ಅಕ್ಕಪಕ್ಕದ ಪ್ರದೇಶಗಳು ಪುರಸಭೆಯ ವ್ಯಾಪ್ತಿಗೆ ಬರಲಿವೆ.

***

ADVERTISEMENT

ಪುರಸಭೆಯಾಗುವುದರಿಂದ ಈ ಭಾಗದಲ್ಲಿ ಮೂಲಸೌಕರ್ಯ ಒದಗಿಸಲು ಅನುಕೂಲವಾಗಲಿದೆ. ಸರ್ಕಾರದ ನಿರ್ಧಾರವನ್ನು ಸ್ವಾಗತಿಸುತ್ತೇವೆ.

ಮೋಹನ್‌ಕುಮಾರ್‌, ಸಿದ್ದನಹೊಸಹಳ್ಳಿ ಗ್ರಾ.ಪಂ. ಉಪಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.