
ಹೊಸಕೋಟೆ: ವಿವಿಧ ಸಂಘಟನೆಗಳು ನಗರದಲ್ಲಿ ಜನವರಿ 30ರಂದು ಗಾಂಧೀಜಿ ಹುತಾತ್ಮ ದಿನದ ಪ್ರಯುಕ್ತ ಮಾನವ ಸರಪಳಿ ಹಮ್ಮಿಕೊಂಡಿವೆ.
ನಗರದ ಸಿಐಟಿಯು ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅಖಿಲ ಭಾರತ ವಕೀಲರ ಒಕ್ಕೂಟದ ರಾಜ್ಯಾಧ್ಯಕ್ಷ ಹರಿಂದ್ರ, ದೇಶದ ಐಕ್ಯತೆ ಮತ್ತು ಕೋಮು ಸೌಹಾರ್ದ ಪರಂಪರೆ ಉಳಿಸುವ ನಿಟ್ಟಿನಲ್ಲಿ ಸೌಹಾರ್ದ ಮಾನವ ಸರಪಳಿ ರಚಿಸಲಾಗುತ್ತಿದೆ. ತಾಲ್ಲೂಕಿ ಕೆಇಬಿ ಸರ್ಕಲ್ ನಿಂದ ತಾಲ್ಲೂಕು ಕಚೇರಿ ಆವರಣದಲ್ಲಿರುವ ಮಹಾತ್ಮ ಗಾಂಧಿ ಪುತ್ಥಳಿ ವರೆಗೂ ಮಾನವ ಸರಪಳಿ ರಚಿಸಲಾಗುತ್ತಿದೆ. ತಾಲ್ಲೂಕಿನ ಎಲ್ಲಾ ಪ್ರಗತಿಪರ ಚಿಂತಕರು, ವಿದ್ಯಾರ್ಥಿಗಳು, ಸಾರ್ವಜನಿಕರು ಪಾಲ್ಗೊಳ್ಳಬೇಕೆಂದು ಕೋರಿದರು.
ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್, ಕರ್ನಾಟಕ ಪ್ರಾಂತ್ಯ ರೈತ ಸಂಘಟನೆ, ದಲಿತ ಹಕ್ಕುಗಳ ಸಮಿತಿ, ಭಾರತ ಪ್ರಜಾಸಾತ್ಮಕ ಯುವಜನ ಪೇಡರೇಷನ್, ಭಾರತ ವಿದ್ಯಾರ್ಥಿ ಪೇಡರೇಷನ್, ತಾಲ್ಲೂಕು ಕ್ರಿಶ್ಚಿಯನ್ ಸಮುದಾಯ, ತಾಲ್ಲೂಕು ಅಂಗನವಾಡಿ ಕಾರ್ಯಕರ್ತರು, ತಾಲ್ಲೂಕು ವಕೀಲರ ಸಂಘ, ಅಲ್ ಇಂಡಿಯಾ ಲಾಯರ್ ಯೂನಿಯನ್, ಭೀಮ್ ಸೇವಾ ಸಮಿತಿ, ತಾಲ್ಲೂಕು ದಲಿತ ಸಂಘರ್ಷ ಸಮಿತಿ, ತಾಲ್ಲೂಕು ಅಂಬೇಡ್ಕರ್ ವಾದ, ತಾಲ್ಲೂಕು ದಲಿತ ಸಂಘರ್ಷ ಸೇನೆ, ಬಹುಜನ ಸಮಾಜವಾದಿ ಪಕ್ಷದ ತಾಲ್ಲೂಕು ಘಟಕ, ಭಾರತೀಯ ಅಂಬೇಡ್ಕರ್ ಸೇನೆ, ಮೊದಲಾದ ಸಂಘಟನೆಗಳ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದೆ.
ದಲಿತ ಹಕ್ಕುಗಳ ಹೋರಾಟ ಸಮಿತಿಯ ತಾಲ್ಲೂಕು ಅಧ್ಯಕ್ಷ ವೆಂಕಟರಾಜು, ಕಾರ್ಯದರ್ಶಿ ಮುನಿರಾಜು, ಭೀಮ್ ಸೇನಾ ಸಮಿತಿ ಸಂಸ್ಥಾಪಕ ಅಧ್ಯಕ್ಷ ಶ್ರೀಕಾಂತ್ ರಾವಾಣ್, ದಲಿತ ಸೇವಾ ಸಮಿತಿಯ ರಾಜಾಧ್ಯಕ್ಷ ಶಿವಕುಮಾರ್, ಡಿವೈಎಫ್‌ಐ ಮುಖಂಡ ಮೋಹನ್ ಬಾಬು, ಎಸ್‌ಎಫ್‌ಐ ಮಾಜಿ ಅಧ್ಯಕ್ಷ ಎಂ.ಗಣೇಶ್, ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಮುಖಂಡ ಚಂದ್ರಪ್ಪ, ಹಸಿರು ಸೇನೆ ತಾಲ್ಲೂಕು ಮುಖಂಡ ಮುನಿರಾಜು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.