ADVERTISEMENT

ಹೊಸಕೋಟೆ ಯೋಜನಾ ಪ್ರಾಧಿಕಾರಕ್ಕೆ ಕೇಶವಮೂರ್ತಿ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2024, 3:16 IST
Last Updated 12 ಮಾರ್ಚ್ 2024, 3:16 IST
ಹೊಸಕೋಟೆ ಯೋಜನಾ ಪ್ರಾದಿಕಾರದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕೇಶವಮೂರ್ತಿ, ನಿರ್ದೇಶಕರಾಗಿ ಆಯ್ಕೆಯಾದ ಖಾಜಿಹೊಸಹಳ್ಳಿ ಶಿವಕುಮಾರ್, ಹೊಸಕೋಟೆ ಸುಬ್ಬರಾಜು ಹಾಗು ಕೊರಳೂರು ಸುರೇಶ್ ಅವರು ಸಂಸದ ಬಿ.ಎನ್.ಬಚ್ಚೇಗೌಡ ಅಭಿನಂದಿಸಿದರು
ಹೊಸಕೋಟೆ ಯೋಜನಾ ಪ್ರಾದಿಕಾರದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕೇಶವಮೂರ್ತಿ, ನಿರ್ದೇಶಕರಾಗಿ ಆಯ್ಕೆಯಾದ ಖಾಜಿಹೊಸಹಳ್ಳಿ ಶಿವಕುಮಾರ್, ಹೊಸಕೋಟೆ ಸುಬ್ಬರಾಜು ಹಾಗು ಕೊರಳೂರು ಸುರೇಶ್ ಅವರು ಸಂಸದ ಬಿ.ಎನ್.ಬಚ್ಚೇಗೌಡ ಅಭಿನಂದಿಸಿದರು   

ಹೊಸಕೋಟೆ: ಕಳೆದ 10 ತಿಂಗಳಿಂದ ಖಾಲಿ ಇದ್ದ ಹೊಸಕೋಟೆ ನಗರದ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮತ್ತು ಮೂರು ನಿರ್ದೇಶಕರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಕೇಶವಮೂರ್ತಿ, ನಿರ್ದೇಶಕರಾಗಿ ಖಾಜಿ ಹೊಸಹಳ್ಳಿ ಶಿವಕುಮಾರ್, ಹೊಸಕೋಟೆ ಸುಬ್ಬರಾಜು ಹಾಗೂ ಕೊರಳೂರು ಸುರೇಶ್ ಅವರನ್ನು ನೇಮಿಸಲಾಗಿದೆ.

ನಗರದ ಯೋಜನಾ ಪ್ರಾಧಿಕಾರದ ಕಚೇರಿಯಲ್ಲಿ ನೂತನ ಅಧ್ಯಕ್ಷ ಮತ್ತು ನಿರ್ದೇಶಕರ ಅಧಿಕಾರ ಸ್ವೀಕಾರ ಮಾಡಿದರು.

ADVERTISEMENT

ನೂತನ ಪದಾಧಿಕಾರಿಗಳನ್ನು ಅಭಿನಂದಿಸಿ ಮಾತನಾಡಿದ ಸಂಸದ ಬಿ.ಎನ್.ಬಚ್ಚೇಗೌಡ, 10 ತಿಂಗಳಿಂದ ನಗರದಲ್ಲಿ ಭೂ ಪರಿವರ್ತನೆ ಇಲ್ಲದೆ ಜನ ಕಾಯುತ್ತಿದ್ದಾರೆ. ಇದೀಗ ನೂತನ ಅಧ್ಯಕ್ಷ ಮತ್ತು ನಿರ್ದೇಶಕರನ್ನು ಆಯ್ಕೆ ಮಾಡಿದ್ದು, ಈ ಮೂವರ ಮೇಲೆ ದೊಡ್ಡ ಜವಾಬ್ದಾರಿ ಇದೆ. ಇವರು ಯಾವುದೇ ತೊಡಕುಗಳು ಬಾರದಂತೆ ಯೋಜನಾ ಪ್ರಾಧಿಕಾರವನ್ನು ಮುನ್ನಡೆಸಿಕೊಂಡು ಹೋಗಬೇಕು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.