ADVERTISEMENT

ಅಂಬೇಡ್ಕರ್‌ಗೆ ಅವಮಾನ: ಸಹಿಸಲ್ಲ

​ಪ್ರಜಾವಾಣಿ ವಾರ್ತೆ
Published 24 ಜನವರಿ 2025, 14:13 IST
Last Updated 24 ಜನವರಿ 2025, 14:13 IST
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಗೆ ಹೊಸಕೋಟೆ ತಾಲ್ಲೂಕಿನ ನಡವತ್ತಿ ಗ್ರಾಮದಿಂದ ತೆರಳಿದ ಕಾರ್ಯಕರ್ತರು
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಗೆ ಹೊಸಕೋಟೆ ತಾಲ್ಲೂಕಿನ ನಡವತ್ತಿ ಗ್ರಾಮದಿಂದ ತೆರಳಿದ ಕಾರ್ಯಕರ್ತರು   

ಹೊಸಕೋಟೆ: ‘ಅಂಬೇಡ್ಕರ್ ಆಶಯಗಳಿಗೆ ಬಿಜೆಪಿ ಎಂದೆಂದಿಗೂ ವಿರೋಧಿಯೇ. ಈ ದೇಶದ ತಾರತಮ್ಯ ಮತ್ತು ಶೋಷಣೆ ನಿವಾರಣೆಗೆ ಅಂಬೇಡ್ಕರ್ ಅವರ ಚಿಂತನೆಗಳೇ ಮದ್ದು ಎಂದು ನಂಬಿರುವ ನಾವು ಅಂಬೇಡ್ಕರ್ ವಿರೋಧಿಗಳನ್ನು ಎಂದಿಗೂ ಕ್ಷಮಿಸುವುದಿಲ್ಲ’ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಅಂಬೇಡ್ಕರ್ ವಾದ ಜಿಲ್ಲಾ ಸಮಿತಿ ಸದಸ್ಯ ನಡವತ್ತಿ ಲಕ್ಷ್ಮಣ್‌ ಅಭಿಪ್ರಾಯಪಟ್ಟರು.

ಅಂಬೇಡ್ಕರ್ ಕುರಿತು ಅಮಿತ್‌ ಶಾ ಅವರ ಹೇಳಿಕೆ ಖಂಡಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ತಾಲ್ಲೂಕಿನ ನಡವತ್ತಿ ಗ್ರಾಮದಿಂದ ತೆರಳುವ ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದರು.

ಅಂಬೇಡ್ಕರ್ ಪರ ಎಂದು ತೋರ್ಪಡಿಕೆಯ ಹೇಳಿಕೆಗಳನ್ನು ನೀಡುವ ಬಿಜೆಪಿ, ಅಮಿತ್ ಶಾ ವಿರುದ್ಧ ದೇಶದಾದ್ಯಂತ ದೊಡ್ಡಮಟ್ಟದ ವಿರೋಧ, ಪ್ರತಿಭಟನೆಗಳು ನಡೆಯುತ್ತಿದ್ದರೂ ಈವರೆಗೆ ಸಂಪುಟದಿಂದ ಕೈ ಬಿಟ್ಟಿಲ್ಲ. ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿಯಲ್ಲಿರುವ ದಲಿತ ನಾಯಕರು ಮೂಲಕ ಸಲ್ಲದ ಆರೋಪಗಳನ್ನು ಮಾಡಿ ತೇಜೇವಧೆ ಮುಂದಾಗಿರುವುದು ಹೇಯಕೃತ್ಯ ಎಂದರು.

ADVERTISEMENT

ದಲಿತ ಸಂಘರ್ಷ ಸಮಿತಿ ಕಸಬಾ ಹೋಬಳಿ ಸಂಘಟನಾ ಸಂಚಾಲಕ ಜ್ಯೋತೀಶ್, ಕಾಂತಮ್ಮ, ಪವಿತ್ರಾ, ಮುನಿಕೃಷ್ಣ, ಸತೀಶ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.