ADVERTISEMENT

ಮಂಚನಹಳ್ಳಿಯಲ್ಲಿ ಜೋಡಿ ಕರಗದ ವೈಭವ

​ಪ್ರಜಾವಾಣಿ ವಾರ್ತೆ
Published 16 ಮೇ 2024, 6:32 IST
Last Updated 16 ಮೇ 2024, 6:32 IST
ಆನೇಕಲ್‌ ತಾಲ್ಲೂಕಿನ ಮಂಚನಹಳ್ಳಿಯಲ್ಲಿ ಜೋಡಿ ಕರಗ ವೀಕ್ಷಿಸಲು ಸೇರಿದ್ದ ಭಾರಿ ಜನಸ್ತೋಮ
ಆನೇಕಲ್‌ ತಾಲ್ಲೂಕಿನ ಮಂಚನಹಳ್ಳಿಯಲ್ಲಿ ಜೋಡಿ ಕರಗ ವೀಕ್ಷಿಸಲು ಸೇರಿದ್ದ ಭಾರಿ ಜನಸ್ತೋಮ   

ಆನೇಕಲ್: ತಾಲ್ಲೂಕಿನ ಮಂಚನಹಳ್ಳಿಯಲ್ಲಿ ಊರಹಬ್ಬದ ಪ್ರಯುಕ್ತ ಮಂಗಳವಾರ ರಾತ್ರಿ ಜೋಡಿ ಕರಗ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು. ಸುತ್ತಮುತ್ತಲ ಗ್ರಾಮಗಳ ಸಹಸ್ರಾರು ಭಕ್ತರು ವೈಭವದ ಜೋಡಿ ಕರಗಕ್ಕೆ ಸಾಕ್ಷಿಯಾದರು.

ಆನೇಕಲ್‌ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕರಗ ಮಹೋತ್ಸವ ನಡೆಯುವುದು ವಾಡಿಕೆಯಾಗಿದೆ. ಆದರೆ ಮಂಚನಹಳ್ಳಿಯಲ್ಲಿ ಜೋಡಿ ಕರಗ ನಡೆಯುವುದು ವಿಶೇಷ.

ಗಳವಾರ ರಾತ್ರಿ 12ರ ಸುಮಾರಿಗೆ ಜೋಡಿ ಕರಗ ದೇವಾಲಯದಿಂದ ಹೊರ ಬಂದಿತು. ವೀರಕುಮಾರರು ಅಲಗು ಸೇವೆ ಮಾಡಿ ಕರಗ ಬರಮಾಡಿಕೊಂಡರು. ಗ್ರಾಮದ ವಿವಿಧ ಬೀದಿಗಳಲ್ಲಿ ವಾಧ್ಯದ ವಾದನಕ್ಕೆ ನರ್ತನ ಮಾಡುತ್ತಾ ಕರಗ ಸಂಚರಿಸಿತು.

ADVERTISEMENT

ಬಸವೇಶ್ವರ ದೇವಾಲಯದ ಮುಂಭಾಗದಲ್ಲಿ ಪಲ್ಲಕ್ಕಿ ಮುಂದೆ ಕರಗವು ನೃತ್ಯ ಮಾಡಿತು. ಮೇ 8ರಂದು ಕಂಬದದರಾಯನ ಪ್ರತಿಷ್ಠಾಪನೆಯೊಂದಿಗೆ ಪ್ರಾರಂಭವಾದ ಧಾರ್ಮಿಕ ಕಾರ್ಯಕ್ರಮಗಳು ಜೋಡಿ ಕರಗ ಮಹೋತ್ಸವದೊಂದಿಗೆ ಮುಕ್ತಾಯವಾದವು. ಮಾರಮ್ಮ ದೇವಿ, ಲಗುಮ್ಮಮ್ಮ ದೇವಿ, ಮುತ್ಯಾಲಮ್ಮ ದೇವಿ, ಸೊಪ್ಪಳ್ಳಿ ಯಲ್ಲಮ್ಮ ದೇವಿ, ಸಫಲಮ್ಮ ದೇವಿ, ಕರಗದಮ್ಮ ದೇವಿ ಪಲ್ಲಕ್ಕಿಗಳ ಉತ್ಸವ ಗ್ರಾಮದಲ್ಲಿ ನಡೆಯಿತು.

ಊರಹಬ್ಬದ ಅಂಗವಾಗಿ ಲಘುಮಮ್ಮ ದೇವಿ ತಂಡದಿಂದ ಕಾಲಾಟ ಮತ್ತು ಕೀಲು ಕುದುರೆ ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾತಂಡ ಪ್ರದರ್ಶನ ನೀಡಿದವು. ವೀರಗಾಸೆ, ನಂದಿಧ್ವಜ ಕುಣಿತ ನಡೆಯಿತು. ಗ್ರಾಮದ ಮನೆ ಮನೆಗಳ ಮೇಲೆ ನಿಂತು ಜೋಡಿ ಕರಗವನ್ನು ಕಣ್ತುಂಬಿಕೊಂಡರು. ಕರಗಕ್ಕೆ ಮಲ್ಲಿಗೆ ಹೂವುಗಳನ್ನು ಎಸೆಯುವ ಮೂಲಕ ಭಕ್ತರು ತಮ್ಮ ಭಕ್ತಿಯನ್ನು ಸಮರ್ಪಿಸಿದರು.

ಮಂಚನಹಳ್ಳಿಯ ಜೋಡಿ ಕರಗದ ಆಕರ್ಷಕ ನೋಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.