ADVERTISEMENT

ದೇವನಹಳ್ಳಿ | 'ಅನ್ಯ ಭಾಷಿಕರಿಗೆ ಕನ್ನಡ ಕಲಿಸೋಣ'

ವಿಜಯಪುರದಲ್ಲಿ ಜೈ ಗಣೇಶ ಬಳಗದಿಂದ ರಾಜ್ಯೋತ್ಸವ 

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2025, 2:21 IST
Last Updated 17 ನವೆಂಬರ್ 2025, 2:21 IST
ವಿಜಯಪುರದಲ್ಲಿ ಜೈ ಗಣೇಶ ಬಳಗದ ವತಿಯಿಂದ ರಾಜ್ಯೋತ್ಸವ ಆಚರಿಸಲಾಯಿತು
ವಿಜಯಪುರದಲ್ಲಿ ಜೈ ಗಣೇಶ ಬಳಗದ ವತಿಯಿಂದ ರಾಜ್ಯೋತ್ಸವ ಆಚರಿಸಲಾಯಿತು   

ವಿಜಯಪುರ (ದೇವನಹಳ್ಳಿ): ಪಟ್ಟಣದ 8 ವಾರ್ಡ್‌ ಒಕ್ಕಲಿಗರ ಬೀದಿಯಲ್ಲಿ ಜೈ ಗಣೇಶ ಬಳಗದಿಂದ ಭಾನುವಾರ ರಾಜ್ಯೋತ್ಸವ ನಡೆಯಿತು. ನಾಡದೇವತೆ ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸಲಾಯಿತು.

ಕನ್ನಡ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದ ಪುರಸಭೆ ಸದಸ್ಯ ಸಿ.ಎಂ.ರಾಮು, ‘ಇಂದಿನ ಮಕ್ಕಳು ಕವಿಗಳ ಸಾಹಿತ್ಯ ರಚನೆಯ ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಹೊರ ರಾಜ್ಯದಿಂದ ನಮ್ಮ ರಾಜ್ಯಕ್ಕೆ ಬಂದಂತಹ ಕೂಲಿ ಕಾರ್ಮಿಕರಿಗೆ ನಾವು ಕನ್ನಡ ಕಲಿಸಬೇಕು ಎಂದು ಹೇಳಿದರು. 

ನಮ್ಮ ನಿತ್ಯ ಜೀವನದ ಕನ್ನಡವನ್ನು ಉಳಿಸಿ, ಬೆಳೆಸುವ ಕಾರ್ಯ ಪ್ರತಿಯೊಬ್ಬರ ಮೇಲಿದೆ. ಕನ್ನಡ ಭಾಷಾಭಿಮಾನವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ADVERTISEMENT

ಕನ್ನಡ ನಾಡು, ನುಡಿ, ಭಾಷೆ, ಗಾಳಿ, ನೀರು, ನೆಲದಲ್ಲಿ ವಾಸಿಸುವ ಪ್ರತಿಯೊಬ್ಬರ ಉಸಿರು ಕನ್ನಡ ಆಗಬೇಕು. ಆಗ ಮಾತ್ರ ಕನ್ನಡ ನೆಲದಲ್ಲಿ ಜನಿಸಿದ ನಾವೆಲ್ಲರೂ ಸಾರ್ಥಕ ಬದುಕು ಕಟ್ಟಿಕೊಳ್ಳಲು ಸಾಧ್ಯ. ಹೆತ್ತ ತಂದೆ, ತಾಯಿಯ ಮೇಲಿರುವಷ್ಟು ಪ್ರೀತಿ, ಅಭಿಮಾನ ಕನ್ನಡ ಭಾಷೆಯ ಮೇಲೆ ಕೂಡ ಇರಬೇಕು ಎಂದರು.

ಇದೇ ವೇಳೆ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಮಾಡಲಾಯಿತು.

ಜೈ ಗಣೇಶ ಬಳಗದ ಮಂಜುನಾಥ್, ಮಧು, ಭಾಸ್ಕರ್‍ಮ, ಮುಖಂಡ ಕನಕರಾಜು, ಶ್ರೀಮಹರ್ಷಿ ವಾಲ್ಮೀಕಿ ನಾಯಕ ಸಂಘದ ಮಾಜಿ ಅಧ್ಯಕ್ಷ ರಮೇಶ್, ವಿಜಯ್ ಕುಮಾರ್, ಗಿರೀಶ್, ರಜನಿ ಕನಕರಾಜ್, ನಲ್ಲೂರಮ್ಮ, ಅಶ್ವಿನಿ ಮಂಜುನಾಥ್, ಸ್ಥಳೀಯರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.