ADVERTISEMENT

‘ಅಪರಾಧ ಜಗತ್ತಿನಿಂದ ದೂರವಿರಿ’

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2019, 14:36 IST
Last Updated 17 ಮಾರ್ಚ್ 2019, 14:36 IST
ಕಾರ್ಯಕ್ರಮದಲ್ಲಿ ಮಾತನಾಡುತ್ತಿರುವ ಲೇಖಕ ಜಿ.ಯಲ್ಲಪ್ಪ, ಇತರೆ ಗಣ್ಯರು ಇದ್ದರು
ಕಾರ್ಯಕ್ರಮದಲ್ಲಿ ಮಾತನಾಡುತ್ತಿರುವ ಲೇಖಕ ಜಿ.ಯಲ್ಲಪ್ಪ, ಇತರೆ ಗಣ್ಯರು ಇದ್ದರು   

ದೊಡ್ಡಬಳ್ಳಾಪುರ: ‘ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಯುವ ಸಮುದಾಯ ಅಪರಾಧ ಜಗತ್ತಿನತ್ತ ಬಹು ಬೇಗನೆ ಆಕರ್ಷಿತರಾಗುತ್ತಾರೆ. ಪೋಷಕರು ಹಾಗೂ ಉಪನ್ಯಾಸಕರು ವಿದ್ಯಾರ್ಥಿಗಳ ಮೇಲೆ ಗಮನಹರಿಸಿ ಸರಿ ದಾರಿಗೆ ತರಬೇಕು’ ಎಂದು ಲೇಖಕ ಜಿ.ಯಲ್ಲಪ್ಪ ಹೇಳಿದರು.

ತಾಲ್ಲೂಕಿನ ದೊಡ್ಡತಿಮ್ಮನಹಳ್ಳಿಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯ, ದೇವರಾಜ ಅರಸು ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದ ವತಿಯಿಂದ ಆಯೋಜಿಸಿದ್ದ ’ಯುವ ಸೇವಾ ಶಿಬಿರ’ದಲ್ಲಿ ಅಪರಾಧ ಜಗತ್ತು ಕುರಿತು ಅವರು ಮಾತನಾಡಿದರು.

‘ವಯಸ್ಕರಿಗೆತರೇವಾರಿ ಬೈಕ್‌, ಮೊಬೈಲ್‌ಗಳ ಆಕರ್ಷಣೆ ಸಹಜ. ಆದರೆಸೂಕ್ತ ದಾಖಲಾತಿ ಇಲ್ಲದೆ ಕಡಿಮೆ ಬೈಕ್‌ ಖರೀದಿಸುವುದು ತಪ್ಪು. ಯಾರನ್ನೋ ತೃಪ್ತಿಪಡಿಸಲು ಹೋಗಿ ಕಷ್ಟಕ್ಕೆ ಸಿಲುಕಿ ಜೈಲು ಸೇರುತ್ತಿರುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿವೆ’ ಎಂದರು.

ADVERTISEMENT

‘ಸಿನಿಮಾದಲ್ಲಿ ತೋರಿಸುವ ಗೂಂಡಾಗಿರಿಗೂ ವಾಸ್ತವ ಬದುಕಿಗೂ ಸಾಕಷ್ಟು ವ್ಯತ್ಯಾಸಗಳಿವೆ. ಅಪರಾಧ ಜಗತ್ತಿನತ್ತ ಒಮ್ಮೆ ಒಲವು ತೋರಿದರೆ ಅದರಿಂದ ಮತ್ತೆ ಹೊರಬರಲು ಸಾಕಷ್ಟು ಕಷ್ಟಪಡಬೇಕು. ಅಪರಾಧ ಜಗತ್ತಿನಲ್ಲಿ ಗುರುತಿಸಿಕೊಂಡಿರುವ ಬಹುತೇಕರ ಬದುಕು ದುರಂತದಲ್ಲಿಯೇ ಅಂತ್ಯವಾಗಿರುವುದು ಇತಿಹಾಸದುದ್ದಕ್ಕೂ ಕಾಣುತ್ತೇವೆ. ಹಾಗಾಗಿ ಯುವ ಸಮುದಾಯದ ಸರಿದಾರಿಯಲ್ಲಿ ನಡೆಯಬೇಕು’ ಎಂದು ಕಿವಿಮಾತು ಹೇಳಿದರು.

ಸಭೆಯಲ್ಲಿ ಎನ್‌.ಎಸ್.ಎಸ್‌. ಶಿಬಿರಾಧಿಕಾರಿ ಡಾ.ಎಂ.ಚಿಕ್ಕಣ್ಣ, ಸಹ ಶಿಬಿರಾಧಿಕಾರಿ ಶ್ರುತಿ, ಚಿತ್ರ ನಟ ಕೃಷ್ಣಪ್ರಸಾದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.