ADVERTISEMENT

‘ಧರ್ಮ, ಸಂಸ್ಕಾರ ಅರಿವಿನ ಕೊರತೆಳ: ರಾಮಸ್ವಾಮಿ ಭಟ್ಟಾಚಾರ್ಯ

​ಪ್ರಜಾವಾಣಿ ವಾರ್ತೆ
Published 17 ಮೇ 2019, 13:32 IST
Last Updated 17 ಮೇ 2019, 13:32 IST
ಕಾರ್ಯಕ್ರಮವನ್ನು ಮುಖಂಡರು ಉದ್ಘಾಟನೆ ಮಾಡಿದರು
ಕಾರ್ಯಕ್ರಮವನ್ನು ಮುಖಂಡರು ಉದ್ಘಾಟನೆ ಮಾಡಿದರು   

ವಿಜಯಪುರ: ‘ಧರ್ಮ, ಸಂಸ್ಕೃತಿ, ಉತ್ತಮ ಪರಂಪರೆಯ ಉಳಿವಿಗೆ ಯುವಜನರ ಮೇಲೆ ಸಮೂಹ ಮಾಧ್ಯಮಗಳು ಬೀರುತ್ತಿರುವ ಕೆಟ್ಟ ಪ್ರಭಾವವನ್ನು ತಡೆಗಟ್ಟುವುದು ಅನಿವಾರ್ಯವಾಗಿದೆ’ ಎಂದು ಜೆಸಿಐ ಉಪಾಧ್ಯಕ್ಷ ರಾಮಸ್ವಾಮಿ ಭಟ್ಟಾಚಾರ್ಯ ಹೇಳಿದರು.

ಇಲ್ಲಿನ ರಾಯಲ್ ಪಬ್ಲಿಕ್ ಶಾಲೆಯ ಆವರಣದಲ್ಲಿ ಶ್ರೀ ಕೃಷ್ಣ ಯತೀಂದ್ರ ಸತ್ಸಂಗ ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ ಶ್ರೀಮದ್ ಭಗವದ್ಗೀತಾ ಪಾರಾಯಣ, ಶ್ರೀ ಕೈವಾರಯೋಗಿ ನಾರೇಯಣ ಯತೀಂದ್ರ ಹಾಗೂ ಕನಕ, ಪುರಂದರ ಗೀತತತ್ವಾಮೃತ ರಸಧಾರೆಯ 167ನೇ ಮತ್ತು ಶ್ರೀಕೃಷ್ಣ ಮಾಸಿಕ ದ್ವಾದಶಿ ವಿಚಾರಗೋಷ್ಠಿಯ 118ನೇ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

‘ಯುವಜನರಲ್ಲಿ ಧರ್ಮ ಸಂಸ್ಕಾರ ಕಡಿಮೆಯಾಗುತ್ತಿದೆ. ಆದ್ದರಿಂದಲೇ ಸಮಾಜದಲ್ಲಿ ಸಾಕಷ್ಟು ಅನಾಹುತಗಳು ಸಂಭವಿಸಲಿಕ್ಕೆ ಕಾರಣವಾಗುತ್ತಿದೆ. ಸತ್ಯ, ಧರ್ಮ, ನ್ಯಾಯ ಮತ್ತು ಸಮಾನತೆಯ ನೆಲೆಯಲ್ಲಿ ಜಾತಿ-ಮತ ಭೇದ ನಿವಾರಿಸಿ ಸಮಾನತೆಯನ್ನು ಸಾಧಿಸಿದ ಸಾಧು ಸಂತರ ಜೀವನ ಸಂದೇಶ ಸಾರ್ವಕಾಲಿಕವಾಗಿದೆ’ ಎಂದು ಹೇಳಿದರು.

ADVERTISEMENT

‘ಎಲ್ಲ ಧರ್ಮಗಳ ಸಾರ ಮಾನವ ಕಲ್ಯಾಣವೇ ಆಗಿದೆ. ಎಲ್ಲ ರೀತಿಯ ಅಂತರಗಳ ನಿವಾರಣೆಯಾಗಿ ಸಮಾನತೆ ಸಾಧಿಸಿದಾಗ ರಾಮರಾಜ್ಯದ ಕನಸು ನನಸಾಗುತ್ತದೆ. ಸಮಾಜದಲ್ಲಿ ಜಾತಿ-ಮತ, ಭೇಧ ನಿವಾರಣೆಯಾಗಿ ಭಕ್ತಿ, ಧರ್ಮದ ಮೂಲಕ ಯುವಜನತೆ ಸಂಘಟಿತರಾಗಬೇಕು. ಅವರಿಗೆ ಉತ್ತಮ ಮಾರ್ಗದರ್ಶನ ಸಿಗಬೇಕು’ ಎಂದರು.

ಶ್ರೀ ಕೃಷ್ಣ ಯತೀಂದ್ರ ಸತ್ಸಂಗ ಸೇವಾ ಸಮಿತಿ ಅಧ್ಯಕ್ಷ ಜೆ.ಎಸ್.ರಾಮಚಂದ್ರಪ್ಪ ಮಾತನಾಡಿ ‘ಸನಾತನ ಧರ್ಮ ಮತ್ತು ಧಾರ್ಮಿಕ ಮೌಲ್ಯಗಳು ಕುಸಿಯುತ್ತಿರುವ ಈ ಸಂದರ್ಭದಲ್ಲಿ ಪ್ರತಿಯೊಬ್ಬರೂ ತಮ್ಮ ಸಾಮಾಜಿಕ ಬದುಕಿನಲ್ಲಿ ಧಾರ್ಮಿಕ ಆಚರಣೆಗಳನ್ನು ಅಳವಡಿಸಿಕೊಂಡಾಗ ಮಾತ್ರ ಸುಸಂಸ್ಕೃತ ಸಮಾಜದ ನಿರ್ಮಾಣ ಸಾಧ್ಯವಾಗುತ್ತದೆ’ ಎಂದರು.

ಭಗವದ್ಗೀತಾ ಪ್ರವಚಕ ವಿದ್ವಾನ್‌ ಕೇಶವಭಟ್ಟಾಚಾರ್ಯ, ಶ್ರೀ ಕೃಷ್ಣ ಯತೀಂದ್ರ ಸತ್ಸಂಗ ಸೇವಾ ಸಮಿತಿಯ ಉಪಾಧ್ಯಕ್ಷ ಪಿ.ನಾರಾಯಣಪ್ಪ, ಕಾರ್ಯದರ್ಶಿ ವಿ.ಕೃಷ್ಣಪ್ಪ, ಖಜಾಂಚಿ ಆಂಜಿನಪ್ಪ, ಸಂಚಾಲಕ ವಿ.ಎನ್.ವೆಂಕಟೇಶ್, ಸಹಕಾರ್ಯದರ್ಶಿ ಮುನಿರಾಜು, ನಾಗಯ್ಯ, ಸೀನಿಯರ್ ಛೇಂಬರ್ ಲೀಜನ್ ಅಧ್ಯಕ್ಷ ಎನ್.ಸುಬ್ರಮಣಿ, ಸಾಹಿತಿ ಡಾ.ವಿ.ಎನ್.ರಮೇಶ್, ಸೇವಾಕರ್ತರಾದ ಪದ್ಮಾವತಿ ಜಿ.ನಾರಾಯಣಪ್ಪ, ಶಶಿಕಲಾ ಜಿ. ನಾಗರಾಜ್, ಲಕ್ಷ್ಮೀ ಜಿ.ರಾಮ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.