ADVERTISEMENT

ಬೂತಾನಹಳ್ಳಿಯಲ್ಲಿ ಚಿರತೆ ಪ್ರತ್ಯಕ್ಷ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2022, 6:52 IST
Last Updated 11 ಡಿಸೆಂಬರ್ 2022, 6:52 IST
ಬನ್ನೇರುಘಟ್ಟ ಸಮೀಪದ ಬೂತಾನಹಳ್ಳಿಯಲ್ಲಿ ಚಿರತೆಯು ಸಿಸಿಟಿವಿಯಲ್ಲಿ ದಾಖಲಾಗಿರುವುದು
ಬನ್ನೇರುಘಟ್ಟ ಸಮೀಪದ ಬೂತಾನಹಳ್ಳಿಯಲ್ಲಿ ಚಿರತೆಯು ಸಿಸಿಟಿವಿಯಲ್ಲಿ ದಾಖಲಾಗಿರುವುದು   

ಆನೇಕಲ್: ಬನ್ನೇರುಘಟ್ಟ ಸಮೀಪದ ಬೂತಾನಹಳ್ಳಿಯಲ್ಲಿ ಪ್ರಸಾದ್‌ ಎಂಬುವವ ಮನೆಯ ಬಳಿ ಶುಕ್ರವಾರ ರಾತ್ರಿ ಚಿರತೆ ಕಾಣಿಸಿಕೊಂಡಿರುವುದು ಸಿಸಿಟಿವಿಯಲ್ಲಿ ದಾಖಲಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿದೆ.

ಪ್ರಸಾದ್‌ ಅವರ ಮನೆಯ ತಡೆಗೋಡೆ ಜಿಗಿದು ರಾತ್ರಿ 12.10ರ ಸುಮಾರಿನಲ್ಲಿ ಒಳ ಬಂದ ಚಿರತೆ ಮನೆಯ ಆವರಣದಲ್ಲಿ ಓಡಾಡಿದೆ. ಹಸು ಮತ್ತು ನಾಯಿ ಕಟ್ಟಿಹಾಕಲಾಗಿದ್ದ ಶೆಡ್‌ ಸುತ್ತಲೂ ಚಿರತೆ ಓಡಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಡಿ.4ರಂದು ಪ್ರಸಾದ್‌ ಅವರ ಮನೆಯ ಬಳಿ ಬಂದಿದ್ದ ಚಿರತೆ ಸಾಕು ನಾಯಿಯೊಂದನ್ನು ಹೊತ್ತೊಯ್ದಿದೆ. ಒಂದು ವಾರದಲ್ಲಿ ಎರಡನೇ ಬಾರಿ ಚಿರತೆ ಪ್ರತ್ಯಕ್ಷವಾಗಿರುವುದು ಸ್ಥಳೀಯರಲ್ಲಿ ಆತಂಕ ಉಂಟು ಮಾಡಿದೆ. ಕಾಡಿನಂಚಿಗೆ ತೆರಳುವ ಗ್ರಾಮಸ್ಥರಲ್ಲಿ ಚಿರತೆಯ ಓಡಾಟ ಭಯವನ್ನುಂಟು ಮಾಡಿದೆ. ಅರಣ್ಯ ಇಲಾಖೆ ಚಿರತೆ ನ್ನು ಸೆರೆ ಹಿಡಿಯಬೇಕೆಂದು ಸ್ಥಳೀಯರ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT