ಹೊಸಕೋಟೆ: ಇತ್ತೀಚೆಗೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದ 43ನೇ ಮಾಸ್ಟರ್ ಅಥ್ಲೆಟೀಕ್ಸ್ ಕ್ರೀಡಾಕೂಟದಲ್ಲಿ ಹೊಸಕೋಟೆಯ ಸುಶೀಲಾ ಮೂರ್ತಿ ಭಾಗವಹಿಸಿ, ಎರಡು ಪದಕವನ್ನು ಜಯಿಸಿದ್ದಾರೆ.
ಡಿಸ್ಕಸ್ ಥ್ರೋನಲ್ಲಿ ಬೆಳ್ಳಿ, ಶಾಟ್‌ಪುಟ್‌ನಲ್ಲಿ ಕಂಚು ಪದಕ ಗೆದ್ದಿದ್ದಾರೆ.
ಕರ್ನಾಟಕದಿಂದ ಒಟ್ಟು 104 ಹಿರಿಯ ಪುರುಷರು ಮತ್ತು ಹಿರಿಯ ಮಹಿಳೆಯರು ಭಾಗವಹಿಸಿದ್ದರು. ಒಟ್ಟು 80 ಕ್ರೀಡಾಪಟುಗಳು ವಿಜೇತರಾಗಿದ್ದಾರೆ. ರಾಜ್ಯದ ಕ್ರೀಡಾಪಟುಗಳು 27 ಚಿನ್ನ, 28 ಬೆಳ್ಳಿ ಮತ್ತು 25 ಕಂಚು ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ ಎಂದು ಮಾಸ್ಟರ್ ಅಸೋಸಿಯೇಷನ್ ಕಾರ್ಯದರ್ಶಿ ಎಚ್.ಸಿ ಷಣ್ಮುಗಂ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.