ADVERTISEMENT

ರೈತರ ಬ್ಯಾಂಕ್ ಖಾತೆಗಳಿಗೆ ರಾಗಿ ಹಣ ಜಮೆ

ಪ್ರಜಾವಾಣಿ ವರದಿಯಿಂದ ಎಚ್ಚೆತ್ತ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 4 ಜುಲೈ 2023, 13:15 IST
Last Updated 4 ಜುಲೈ 2023, 13:15 IST

ವಿಜಯಪುರ (ದೇವನಹಳ್ಳಿ): ತಾಲ್ಲೂಕಿನ ರಾಗಿ ಖರೀದಿ ಕೇಂದ್ರದಲ್ಲಿ ರಾಗಿ ಮಾರಾಟ ಮಾಡಿದ್ದ 750 ರೈತರ ಖಾತೆಗಳಿಗೆ ಎರಡು ತಿಂಗಳ ಬಳಿಕ ಹಣ ಸಂದಾಯವಾಗಿದೆ. 

ಈ ಕುರಿತು ಜೂನ್ 29ರ ಸಂಚಿಕೆಯಲ್ಲಿ 750 ರೈತರಿಗೆ ₹2.80 ಕೋಟಿ ಬಾಕಿ, ರಾಗಿ ಹಣ ಬಿಡುಗಡೆಗೆ ಆಗ್ರಹ ಎಂಬ ಶೀರ್ಷಿಕೆಯಲ್ಲಿ ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು. ಈ ಸುದ್ದಿಯಿಂದ ಎಚ್ಚೆತ್ತ ಅಧಿಕಾರಿಗಳು, ರಾಗಿ ಹಣ ಬಾಕಿ ಇದ್ದ ಎಲ್ಲ ರೈತರ ಖಾತೆಗಳಿಗೆ ಹಣ ಜಮೆ ಮಾಡಿದ್ದಾರೆ.

ಈ ಕುರಿತು ರಾಗಿ ಕೇಂದ್ರದ ಅಧಿಕಾರಿ ಅಚ್ಯುತ ಮಾತನಾಡಿ, ‘ರೈತರ ಖಾತೆಗಳಿಗೆ ಜಮೆಯಾಗದೆ ಬಾಕಿ ಉಳಿದಿದ್ದ ಹಣವನ್ನು ಎಲ್ಲ ರೈತರ ಬ್ಯಾಂಕ್ ಖಾತೆಗಳಿಗೆ ಆರ್.ಟಿ.ಜಿ.ಎಸ್ ಮೂಲಕ ಸೋಮವಾರ ಜಮೆ ಮಾಡಲಾಗಿದೆ. ಕೆಲವು ರೈತರು ಕೆವೈಸಿ.ಮಾಡಿಲ್ಲ, ಕೆಲವರು ಮೃತಪಟ್ಟಿದ್ದಾರೆ. ಅಂಥ ರೈತರ ಖಾತೆಗಳಿಗೆ ಹಣ ಜಮೆಯಾಗಿಲ್ಲ. ಇಂಥ ರೈತರಿಗೆ ಸಂಬಂಧಿಸಿದವರು ದಾಖಲೆಗಳನ್ನು ಸರಪಿಡಿಸಿಕೊಳ್ಳಬೇಕು’ ಎಂದು ತಿಳಿಸಿದರು. 

ADVERTISEMENT

ರೈತ ವೆಂಕಟೇಶಪ್ಪ ಮಾತನಾಡಿ, ನಾವು ಎರಡು ತಿಂಗಳಿನಿಂದ ಕಚೇರಿಗೆ ಅಲೆದಾಡುತ್ತಿದ್ದೆವು. ಯಾರೊಬ್ಬರೂ ನಮ್ಮ ಮನವಿಯನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆದರೆ, ಇದೀಗ ಹಣ ಬಿಡುಗಡೆಯಾಗಿದೆ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.