ADVERTISEMENT

ನಂದಿಗಿರಿ ಪ್ರದಕ್ಷಿಣೆ: ಸಾವಿರಾರು ಭಕ್ತರ ಭಾಗಿ

​ಪ್ರಜಾವಾಣಿ ವಾರ್ತೆ
Published 26 ಜುಲೈ 2022, 6:02 IST
Last Updated 26 ಜುಲೈ 2022, 6:02 IST
ದೊಡ್ಡಬಳ್ಳಾಪುರದ ನಂದಿ ಗಿರಿ ಸೇವಾ ಟ್ರಸ್ಟ್ ಆಯೋಜಿಸಿದ್ದ ಗಿರಿ ಪ್ರದಕ್ಷಣೆಗೆ ದಯಾನಂದಪುರಿ ಮಹಾಸ್ವಾಮೀಜಿ ಸೋಮವಾರ ಚಾಲನೆ ನೀಡಿದರು
ದೊಡ್ಡಬಳ್ಳಾಪುರದ ನಂದಿ ಗಿರಿ ಸೇವಾ ಟ್ರಸ್ಟ್ ಆಯೋಜಿಸಿದ್ದ ಗಿರಿ ಪ್ರದಕ್ಷಣೆಗೆ ದಯಾನಂದಪುರಿ ಮಹಾಸ್ವಾಮೀಜಿ ಸೋಮವಾರ ಚಾಲನೆ ನೀಡಿದರು   

ದೊಡ್ಡಬಳ್ಳಾಪುರ: ಆಷಾಢ ಮಾಸದ ಕೊನೆಯ ಸೋಮವಾರವಾದ ಇಂದು ನಡೆದ ನಂದಿ ಗಿರಿ ಪ್ರದಕ್ಷಿಣಗೆ ಹಂಪಿ ಗಾಯತ್ರಿ ಪೀಠ ಮಹಾ ಸಂಸ್ಥಾನದ ಪೀಠಾಧ್ಯಕ್ಷರಾದ ದಯಾನಂದಪುರಿ ಮಹಾಸ್ವಾಮೀಜಿ ಅವರು ಚಾಲನೆ ನೀಡಿದರು.

ಭೋಗ ನಂದೀಶ್ವರ ದೇವಾಲಯದಿಂದ ಆರಂಭವಾದ ಗಿರಿ ಪ್ರದಕ್ಷಣಯಲ್ಲಿ ಸಾವಿರಾರು ಜನ ಭಕ್ತರು ಬೆಳಿಗ್ಗೆ ಆರು ಗಂಟೆಯಿಂದಲೇ ದೇವರ ನಾಮ ಸ್ಮರಣೆಯೊಂದಿಗೆ ಪ್ರಕೃತಿ ರಮ್ಯತಾಣ ನಂದಿ ಪ್ರದಕ್ಷಣೆಯಲ್ಲಿ ಭಾಗವಹಿಸಿದ್ದರು.

ಶ್ರೀನಂದಿ ಗಿರಿ ಪ್ರದಕ್ಷಣಾ ಸೇವಾ ಟ್ರಸ್ಟ್‌ ಪ್ರತಿ ವರ್ಷವು ಗಿರಿ ಪ್ರದಕ್ಷಣೆ ಆಯೋಜಿಸುತ್ತದೆ. ನಂದಿ ಬೆಟ್ಟದ ಸುತ್ತಲು ಇರುವ ದಿಬ್ಬಗಿರಿ, ಬ್ರಹ್ಮಗಿರಿ, ಚೆನ್ನಗಿರಿ, ಸ್ಕಂದ ಗಿರಿ ಸೇರಿದಂತೆ ಪಂಚಗಿರಿಗಳನ್ನು ಭಕ್ತಿಯಿಂದ ಪ್ರದಕ್ಷಿಣೆ ಮಾಡಿದರೆ ಕೈಲಾಸ ಪರ್ವತವನ್ನೇ ಸುತ್ತಿದಂತೆ ಎನ್ನುವ ನಂಬಿಕೆ ಈ ಭಾಗದ ಜನರಲ್ಲಿದೆ.

ADVERTISEMENT

ನಂದಿಗಿರಿ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ಒ.ನಾಗಾರಾಜ್,ಮುಖಂಡರಾದ ಟಿ.ರಾಮಣ್ಣ,ಬಿ.ಮುನೇಗೌಡ, ಅಖಿಲೇಶ್, ಚಿಕ್ಕಣ್ಣ, ನಟರಾಜ್, ರಾಘವೇಂದ್ರ,ಶ್ರೀನಿವಾಸ್,ಮಧುಸೂಧನ್, ಕುಮಾರ್, ವೇಣು, ಪ್ರಭಾಕರ್, ಚಂದ್ರಶೇಖರ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.