ಪ್ರಜಾವಾಣಿ ವಾರ್ತೆ
ಅನುಗೊಂಡನಹಳ್ಳಿ(ಹೊಸಕೋಟೆ): ಹೋಬಳಿಯ ಮುತ್ಸಂದ್ರ ಬಳಿಯ ದಿ ಗ್ರೀನ್ ಸ್ಕೂಲ್ ಬೆಂಗಳೂರು (ಟಿಜಿಎಸ್‌ಬಿ) ಶಾಲೆಯ ವಿದ್ಯಾರ್ಥಿಗಳು ನವರಾತ್ರಿ ಉತ್ಸವ ಪ್ರಯುಕ್ತ ಹಳೆಯ ಬಟ್ಟೆಗಳಿಂದ ಗೊಂಬೆ ತಯಾರಿಸಿ ನವರಾತ್ರಿ ಗೊಂಬೆ ಪ್ರದರ್ಶನಕ್ಕೆ ಸಿದ್ಧರಾಗುತ್ತಿದ್ದಾರೆ.
ಶಾಲೆಯ ವಿದ್ಯಾರ್ಥಿಗಳು ನವರಾತ್ರಿ ಆಚರಣೆಗಾಗಿ ಹಳೆಯ ಬಟ್ಟೆಗಳಿಂದ ಗೊಂಬೆಗಳನ್ನು ಸಿದ್ಧಪಡಿಸುವ ಮೂಲಕ ಪರಿಸರ ಸ್ನೇಹಿ ಮತ್ತು ತಮ್ಮ ಕರಕುಶಲ ಸೃಜನಶೀಲತೆ ಪ್ರದರ್ಶಿಸಿದ್ದಾರೆ ಶಾಲೆಯ ಪ್ರಾಂಶುಪಾಲೆ ಉಷಾ ಅಯ್ಯರ್ ತಿಳಿಸಿದರು.
ಹಳೆಹತ್ತಿ, ಬಟ್ಟೆಗಳನ್ನು ಬಳಸಿ ಗೊಂಬೆಗಳನ್ನು ತಯಾರಿಸುತ್ತಿದ್ದಾರೆ. ಕಪ್, ತೆಂಗಿನ ಚಿಪ್ಪು, ಬಾಟಲಿ ಮೂಲಕ ಅವುಗಳಿಗೆ ಜೀವ ತುಂಬುತ್ತಿದ್ದಾರೆ.
ಪ್ರತಿ ವರ್ಷ ಟನ್‌ಗಳಷ್ಟು ಜವಳಿ ತ್ಯಾಜ್ಯ ಸೃಷ್ಟಿಯಾಗುತ್ತೆ. ಅದರಲ್ಲಿ ಹೆಚ್ಚಿನ ಪ್ರಮಾಣ ಮನೆಯ ಬಟ್ಟೆಯ ತ್ಯಾಜ್ಯ ಮತ್ತು ಉಡುಪು ಉದ್ಯಮದಿಂದಲೇ ಉತ್ಪಾದನೆಯಾಗುತ್ತಿದೆ. ಹೀಗಾಗಿ ಈ ವರ್ಷ ಶಾಲೆಯ ಮಕ್ಕಳಿಗೆ ಬಟ್ಟೆಯ ಮರುಬಳಕೆ ಮಾಡುವುದು ಹೇಗೆ ಎಂಬುದನ್ನು ಕಲಿಸಿಕೊಡುವ ಮೂಲಕ ಪರಿಸರ ಸ್ನೇಹಿ ವಾತಾವರಣ ರೂಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
Quote - ಪ್ಲಾಸ್ಟಿಕ್ ವಿಷಕಾರಕ ತ್ಯಾಜ್ಯ. ಅದನ್ನು ತಪ್ಪಿಸಲು ಶಾಲೆಯಲ್ಲಿ ನಾವು ಬಳಸಿ ಬೀಸಾಡುವ ಹಳೆಯ ಬಟ್ಟೆಗಳಿಂದ ಅಲಂಕಾರಿಕ ಗೊಂಬೆಗಳನ್ನು ತಯಾರಿಸಿ ಈ ಸಲ ನವರಾತ್ರಿ ಹಬ್ಬ ಮಾಡುತ್ತೇವೆ ದಿನೇಶ್ ಚೆಟ್ರಿ ವಿದ್ಯಾರ್ಥಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.