ADVERTISEMENT

‘ಈಗ ಕೊರೊನಾ ವಿರುದ್ಧ ಹೋರಾಟ’

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2020, 6:03 IST
Last Updated 16 ಆಗಸ್ಟ್ 2020, 6:03 IST
ಆನೇಕಲ್‌ನಲ್ಲಿ ಆಯೋಜಿಸಿದ್ದ 74ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಗಾಂಧೀಜಿ ಮತ್ತು ಅಂಬೇಡ್ಕರ್‌ ಭಾವಚಿತ್ರಕ್ಕೆ ಶಾಸಕ ಬಿ.ಶಿವಣ್ಣ ನಮಿಸಿದರು
ಆನೇಕಲ್‌ನಲ್ಲಿ ಆಯೋಜಿಸಿದ್ದ 74ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಗಾಂಧೀಜಿ ಮತ್ತು ಅಂಬೇಡ್ಕರ್‌ ಭಾವಚಿತ್ರಕ್ಕೆ ಶಾಸಕ ಬಿ.ಶಿವಣ್ಣ ನಮಿಸಿದರು   

ಆನೇಕಲ್ : ಸ್ವಾತಂತ್ರ್ಯ ಹೋರಾಟದಂತೆ ಮಹಾಮಾರಿ ಕೊರೊನಾವನ್ನು ಹೋಗಲಾಡಿಸಲು ಹಗಲಿರುಳು ಹೋರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ದಿಟ್ಟತನದಿಂದ ಎದುರಿಸುವ ಮೂಲಕ ಆರೋಗ್ಯವನ್ನುಎಲ್ಲರು ಕಾಪಾಡಿಕೊಳ್ಳುವುದು ಬಹುಮುಖ್ಯ ಸವಾಲಾಗಿದೆ ಎಂದು ಶಾಸಕ ಬಿ.ಶಿವಣ್ಣ ತಿಳಿಸಿದರು.

ಪಟ್ಟಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿಅವರು ಮಾತನಾಡಿದರು.

ಕೊರೊನಾ ಸೋಂಕು ಹರಡದಂತೆ ತಡೆಯುವಲ್ಲಿ ಆಶಾ ಕಾರ್ಯಕರ್ತೆಯರು, ವೈದ್ಯರು, ಅಂಗನವಾಡಿ ಕಾರ್ಯಕರ್ತೆಯರು, ಪೊಲೀಸರು, ಪೌರಕಾರ್ಮಿಕರು ಸೇರಿದಂತೆ ನೂರಾರು ಮಂದಿ ಹಗಲಿರುಳೆನ್ನದೇ ಒಗ್ಗೂಡಿ ಕೆಲಸ ಮಾಡುತ್ತಿದ್ದಾರೆ. ಪ್ರಾಣದ ಹಂಗು ತೊರೆದು ಕೆಲಸ ಮಾಡಿದ ಪ್ರತಿಯೊಬ್ಬ ಕೊರೊನಾ ವಾರಿಯರ್‌ಗಳನ್ನು ಅಭಿನಂದಿಸುವುದು ಸಮಾಜದ ಜವಾಬ್ದಾರಿಯಾಗಿದೆ ಎಂದರು.

ADVERTISEMENT

ತಹಶೀಲ್ದಾರ್‌ ಸಿ.ಮಹಾದೇವಯ್ಯ ಮಾತನಾಡಿ, ತ್ಯಾಗ ಬಲಿದಾನದಿಂದ ದೊರೆತ ಸ್ವಾತಂತ್ರ್ಯವನ್ನು ಜೋಪಾನ ಮಾಡಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ. ಬ್ರಿಟಿಷರ ದಾಸ್ಯದಿಂದ ಬಿಡುಗಡೆಯಾಗುವಲ್ಲಿ ಶ್ರಮಿಸಿದ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿ ಅವರ ಆದರ್ಶಗಳನ್ನು ಪಾಲಿಸಬೇಕಾಗಿದೆ ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕವಿತಾ ಸಂಪತ್‌ಕುಮಾರ್‌, ಉಪಾಧ್ಯಕ್ಷೆ ಚಂದ್ರಕಲಾ.ಟಿ.ವಿ.ಬಾಬು, ಕಾರ್ಯನಿರ್ವಹಣಾಧಿಕಾರಿ ಕೆ.ಸಿ.ದೇವರಾಜೇಗೌಡ, ಸದಸ್ಯರಾದ ಶಂಕರರೆಡ್ಡಿ, ಮಂಜುನಾಥರೆಡ್ಡಿ, ಮುನಿರತ್ನಮ್ಮ ನಾರಾಯಣ್‌, ಪುಷ್ಪರಾಜು, ಪುರಸಭಾ ಸದಸ್ಯರಾದ ಎನ್‌.ಎಸ್‌.ಪದ್ಮನಾಭ್‌, ಕೃಷ್ಣ, ರಾಜಪ್ಪ, ಕೆ.ಶ್ರೀನಿವಾಸ್‌, ರವಿ, ಮಹಾಂತೇಶ್‌, ಶ್ರೀಕಾಂತ್‌, ಭಾರತಿ ವಿರೂಪಾಕ್ಷಪ್ಪ, ಭುವನ ದಿನೇಶ್‌, ಡಿವೈಎಸ್ಪಿ ಕೆ.ನಂಜುಂಡೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಆರ್‌.ರಾಮಮೂರ್ತಿ, ಆನೇಕಲ್‌ ಪುರಸಭಾ ಮುಖ್ಯಾಧಿಕಾರಿ ನಿಸಾರ್‌ ಅಹಮದ್‌, ಕಂಠೀರವ ನೃತ್ಯ ಸಭಾ ಅಧ್ಯಕ್ಷ ಪಿ.ಧನಂಜಯ ಹಾಜರಿದ್ದರು.

ಅಭಿನಂದನೆ : ಕೊರೊನಾ ವಾರಿಯರ್ಸ್‌ಗಳಾಗಿ ಸೇವೆ ಸಲ್ಲಿಸಿದ ಡಿವೈಎಸ್ಪಿ ನಂಜುಂಡೇಗೌಡ, ಸರ್ಕಲ್‌ ಇನ್‌ಸ್ಪೆಕ್ಟರ್‌ಗಳಾದ ಕೃಷ್ಣ, ಕೆ.ವಿಶ್ವನಾಥ್‌, ಸತೀಶ್, ಶೇಖರ್‌, ನಾಗರಾಜು, ವೈದ್ಯರಾದ ಡಾ.ವಿನಯ್‌, ಡಾ.ಲತಾ, ಡಾ.ಮೇಧಾವಿ, ಡಾ.ಸೀಮಾ, ಡಾ.ಅರವಿಂದ್‌, ಡಾ.ಅದ್ವೈತ್‌ ಚೇತನ್ ಸೇರಿದಂತೆ ಆಂಬುಲೆನ್ಸ್‌ ಚಾಲಕರು, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.