ADVERTISEMENT

ವೆಂಕಟಮ್ಮಗೆ ನುಡಿ ನಮನ

​ಪ್ರಜಾವಾಣಿ ವಾರ್ತೆ
Published 7 ಜನವರಿ 2021, 3:25 IST
Last Updated 7 ಜನವರಿ 2021, 3:25 IST
ಬಲಿಜ ಭವನದಲ್ಲಿ ಚಿಂತಕಿ ವೆಂಕಟಮ್ಮ ಅವರಿಗೆ ನುಡಿ ನಮನ ಸಲ್ಲಿಸಲಾಯಿತು
ಬಲಿಜ ಭವನದಲ್ಲಿ ಚಿಂತಕಿ ವೆಂಕಟಮ್ಮ ಅವರಿಗೆ ನುಡಿ ನಮನ ಸಲ್ಲಿಸಲಾಯಿತು   

ವಿಜಯಪುರ: ‘ಯಾವುದೇ ಸಮುದಾಯಗಳು ಏಳಿಗೆಯಾಗಬೇಕಾದರೆ ಶಿಕ್ಷಣ ಮತ್ತು ಉತ್ತಮ ಸಂಸ್ಕಾರದಿಂದ ಮಾತ್ರ ಸಾಧ್ಯವೆಂದು ಪ್ರತಿಪಾದಿಸುತ್ತಿದ್ದ ವೆಂಕಟಮ್ಮ ಅವರ ಚಿಂತನೆಗಳು ಎಲ್ಲರಿಗೂ ಆದರ್ಶವಾಗಬೇಕು’ ಎಂದು ಬಲಿಜ ಸಂಘದ ಗೌರವಾಧ್ಯಕ್ಷ ಪಿ. ನಾರಾಯಣಪ್ಪ ತಿಳಿಸಿದರು.

ಪಟ್ಟಣದ ಬಲಿಜ ಭವನದಲ್ಲಿ ಚಿಂತಕಿ ವೆಂಕಟಮ್ಮ ಅವರಿಗೆ ಆಯೋಜಿಸಿದ್ದ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಕ್ಕಳು ಪ್ರಜ್ಞಾವಂತರಾಗಬೇಕು ಎನ್ನುವ ಆಶಯ ಇಟ್ಟುಕೊಂಡು ಸಾಹಿತ್ಯ ಲೋಕದ ಏಳಿಗೆಗಾಗಿ ಸದಾ ಚಿಂತಿಸುತ್ತಿದ್ದ ಅವರ ಕನಸುಗಳು ನನಸಾಗಬೇಕಾದರೆ ನಾವೆಲ್ಲರೂ ಶ್ರದ್ಧೆಯಿಂದ ಕೆಲಸ ಮಾಡಬೇಕು ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.