ADVERTISEMENT

ದೊಡ್ಡಬಳ್ಳಾಪುರ: ರೈತರ ಭೂಮಿಯಲ್ಲಿ ಸಸಿ ನೆಡಲು ವಿರೋಧ

​ಪ್ರಜಾವಾಣಿ ವಾರ್ತೆ
Published 10 ಜನವರಿ 2022, 5:50 IST
Last Updated 10 ಜನವರಿ 2022, 5:50 IST
ದೊಡ್ಡಬಳ್ಳಾಪುರ ತಾಲ್ಲೂಕಿನ ಕೆಳಗನನಾಯಕಂಡರ ಹಳ್ಳಿಯಲ್ಲಿ ಭಾನುವಾರ ರೈತರು ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು
ದೊಡ್ಡಬಳ್ಳಾಪುರ ತಾಲ್ಲೂಕಿನ ಕೆಳಗನನಾಯಕಂಡರ ಹಳ್ಳಿಯಲ್ಲಿ ಭಾನುವಾರ ರೈತರು ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು   

ದೊಡ್ಡಬಳ್ಳಾಪುರ: ತಾಲ್ಲೂಕಿನ ಘಾಟಿ ಸುಬ್ರಹ್ಮಣ್ಯ ಸಮೀಪದ ಮೀಸಲು ಅರಣ್ಯ ಪ್ರದೇಶದ ಸರಹದ್ದಿನ ಕೆಳಗನನಾಯಕಂಡರಹಳ್ಳಿ ಗ್ರಾಮದ ರೈತರು ಅನುಭೋಗದಲ್ಲಿರುವ ಭೂಮಿಯನ್ನು ಅರಣ್ಯ ಇಲಾಖೆ ವಶಪಡಿಸಿಕೊಂಡಿದೆ. ಭಾನುವಾರ ರೈತರು ಅರಣ್ಯ ಇಲಾಖೆ ಅಧಿಕಾರಿಗಳ ಈ ಕ್ರಮವನ್ನು ವಿರೋಧಿಸಿದರು.

ದಶಕಗಳಿಂದಲು ಕೃಷಿ ಮಾಡಿಕೊಂಡು ಬರುತ್ತಿದ್ದೇವೆ. ಅರಣ್ಯ ಇಲಾಖೆ ನಮ್ಮ ಭೂಮಿಗಳಲ್ಲಿ ಸಸಿಗಳನ್ನು ನಡೆಲು ಜೆಸಿಬಿ ಮೂಲಕ ಕೆಲಸ ಮಾಡಲು ಮುಂದಾಗುತ್ತಿದ್ದಾರೆ. ನಮ್ಮ ಭೂಮಿಗೆ ಸಂಬಂಧಿಸಿದ ದಾಖಲೆಗಳು ಇದ್ದರೂ ಭೂಮಿ ವಶಪಡಿಸಿಕೊಳ್ಳಲು ಮುಂದಾಗಿದ್ದಾರೆ. ಈ ಕುರಿತು ತಹಶೀಲ್ದಾರ್ ಅವರಿಗೆ ನಮ್ಮ ಭೂಮಿಯನ್ನು ನಮಗೆ ನೀಡುವಂತೆ ದಾಖಲೆಗಳನ್ನು ನೀಡಿ ಮನವಿ ಮಾಡುತ್ತೇವೆ. ಅಲ್ಲಿಯವರೆಗೂ ಅರಣ್ಯ ಇಲಾಖೆ ಸಸಿಯನ್ನು ನೆಡಬಾರದು ಎಂದು ರೈತ ಮಹಿಳೆ ಜಯಬಾಯಿ ಮನವಿ ಮಾಡಿದರು.

ಇಲ್ಲಿನ ಮೀಸಲು ಅರಣ್ಯ ಪ್ರದೇಶದಲ್ಲಿ ಸುಮಾರು 1,036 ಎಕರೆ ಭೂಮಿ ಇದೆ. ಇದರಲ್ಲಿ ಕಂದಾಯ ಇಲಾಖೆ ಬಗರ್‌ಹುಕುಂ ಅಡಿಯಲ್ಲಿ ಭೂಮಿ ನೀಡಿರುವ ದಾಖಲೆ ಇರುವವರ ಭೂಮಿಯನ್ನು ಬಿಟ್ಟಿದ್ದೇವೆ. ದಾಖಲೆ ಇದ್ದರು ಭೂಮಿ ಎಲ್ಲಿದೆ ಎಂದು ಕಂದಾಯ ಇಲಾಖೆ ಗುರುತಿಸಿಕೊಟ್ಟಿಲ್ಲ. ಇದಕ್ಕೆ ಕಂದಾಯ ಇಲಾಖೆ ಪೋಡಿ ಮಾಡಿಕೊಟ್ಟರೆನಾವು ಬಿಡಲು ಸಿದ್ದರಿದ್ದೇವೆ. ಸರ್ವೆ ನಂಬರ್ 8ರಲ್ಲಿ 200 ಎಕರೆಗೂ ಹೆಚ್ಚು ಭೂಮಿ ಇದೆ. ಇದರಲ್ಲಿ ಅವರ ಭೂಮಿ ಎಲ್ಲಿದೆ ಎಂದು ನಮಗೆ ತಿಳಿದಿಲ್ಲ ಎಂದು ತಾಲ್ಲೂಕಿನ ವಲಯ ಅರಣ್ಯಾಧಿಕಾರಿ ವಿ.ಮುನಿರಾಜುತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.