ADVERTISEMENT

ಅಗ್ನಿ ಕೊಂಡಕ್ಕೆ‌ ಬಿದ್ದ ಅರ್ಚಕಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 11 ಜನವರಿ 2023, 7:10 IST
Last Updated 11 ಜನವರಿ 2023, 7:10 IST
ದೊಡ್ಡಬಳ್ಳಾಪುರ ತಾಲ್ಲೂಕಿನ ದೊಡ್ಡಬೆಳವಂಗಲದಲ್ಲಿ ಅಗ್ನಿಕುಂಡ ಹಾಯುವಾಗ ಆಕಸ್ಮಿಕವಾಗಿ ಅಗ್ನಿಕುಂಡದಲ್ಲಿ ಕಾಲು ಜಾರಿಬಿದ್ದ ಅರ್ಚಕಿ
ದೊಡ್ಡಬಳ್ಳಾಪುರ ತಾಲ್ಲೂಕಿನ ದೊಡ್ಡಬೆಳವಂಗಲದಲ್ಲಿ ಅಗ್ನಿಕುಂಡ ಹಾಯುವಾಗ ಆಕಸ್ಮಿಕವಾಗಿ ಅಗ್ನಿಕುಂಡದಲ್ಲಿ ಕಾಲು ಜಾರಿಬಿದ್ದ ಅರ್ಚಕಿ   

ದೊಡ್ಡಬಳ್ಳಾಪುರ: ಅಗ್ನಿಕೊಂಡದಲ್ಲಿ ದೇವರನ್ನು ಹೊತ್ತು ಹಾದು ಹೋಗುವ ವೇಳೆ ಆಕಸ್ಮಿಕವಾಗಿ ಬಿದ್ದು ಅರ್ಚಕಿ ಗಾಯಗೊಂಡಿರುವ ಘಟನೆ ತಾಲ್ಲೂಕಿನ ದೊಡ್ಡಬೆಳವಂಗಲ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ.

ರೇಣುಕಾ ಯಲ್ಲಮ್ಮ ದೇವಸ್ಥಾನದ ಅರ್ಚಕಿ ಅನುಜೋಗತಿಯಮ್ಮ ಗಾಯಗೊಂಡವರು.

ದೊಡ್ಡಬೆಳವಂಗಲದ ಶಾಂತಿ ನಗರದಲ್ಲಿರುವ ಅಜ್ಜನಕಟ್ಟೆ ರೇಣುಕಾ ಯಲ್ಲಮ್ಮ ದೇವಸ್ಥಾನದದಲ್ಲಿ ಅಗ್ನಿಕೊಂಡ ಸೇವೆ ವೇಳೆ ಈ ಅವಘಡ ನಡೆದಿದೆ. ಕಳಶ ಹೊತ್ತಿದ್ದ ಅನುಜೋಗತಿಯಮ್ಮ ಅಗ್ನಿಕೊಂಡ
ಪ್ರವೇಶಿಸಿದರು. ಈ ವೇಳೆ ಆಕಸ್ಮಿಕವಾಗಿ ಕೊಂಡದಲ್ಲಿ ಬಿದ್ದು ಅಸ್ವಸ್ಥಗೊಂಡರು.

ADVERTISEMENT

ಕೂಡಲೇ‌ ಸ್ಥಳದಲ್ಲಿದ್ದ ಭಕ್ತರು ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ನಂತರ ದೇವಾಲಯಕ್ಕೆ
ಮರಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.