ADVERTISEMENT

ಕೊರೊನಾ ತಡೆಗೆ ಸ್ಯಾನಿಟೈಸರ್ ಸಿಂಪಡಣೆ: ಪುರಸಭಾ ಮುಖ್ಯಾಧಿಕಾರಿ ಎ.ಎಚ್.ನಾಗರಾಜ್

​ಪ್ರಜಾವಾಣಿ ವಾರ್ತೆ
Published 15 ಜುಲೈ 2020, 17:06 IST
Last Updated 15 ಜುಲೈ 2020, 17:06 IST

ದೇವನಹಳ್ಳಿ: ಕೊರೊನಾ ತಡೆಗಟ್ಟಲು ನಗರದ ವಿವಿಧ ವಾರ್ಡುಗಳಲ್ಲಿ ಸ್ಯಾನಿಟೈಸರ್ ಸಿಂಪಡಿಸಲಾಗುತ್ತಿದೆ ಎಂದು ಪುರಸಭಾ ಮುಖ್ಯಾಧಿಕಾರಿ ಎ.ಎಚ್.ನಾಗರಾಜ್ ತಿಳಿಸಿದರು.

ಪುರಸಭಾ ಕಾರ್ಯಾಲಯದಲ್ಲಿ ಪುರಸಭಾದಿಂದ ಆಟೊ ಮೂಲಕ ಸ್ಯಾನಿಟೈಸರ್‌ ಸಿಂಪಡಣೆ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

ನಗರದಲ್ಲಿ ಈಗಾಗಲೇ ಪ್ರಸ್ತುತ 6 ಕಡೆ ಕಂಟೈನ್‌ಮೆಂಟ್‌ ವಲಯಗಳನ್ನು ಗುರುತಿಸಲಾಗಿದೆ ಪ್ರಸ್ತುತ ದೇವನಹಳ್ಳಿ ನಗರದಲ್ಲಿ. 21 ಸೋಂಕಿತ ಪ್ರಕರಣಗಳು ಧೃಡಪಟ್ಟಿವೆ. ಸೋಂಕಿತರು ಇರುವ ಪ್ರದೇಶವನ್ನು ಈಗಾಗಲೇ ಸೀಲ್‌ಡೌನ್ ಮಾಡಲಾಗಿದೆ ಎಂದರು.

ADVERTISEMENT

ಮುಂಜಾಗ್ರತಾ ಕ್ರಮವಾಗಿ ಎರಡು ತ್ರಿಚಕ್ರ ಲಗೇಜ್ ಆಟೊಗಳಲ್ಲಿ 700 ಲೀಟರ್ ಸ್ಯಾನಿಟೈಜ್ ಮತ್ತು 300 ಲೀಟರ್ ರಾಸಾಯನಿಕ ಔಷಧಿಯ ದ್ರಾವಣದ ಮಿಶ್ರಣವನ್ನು ನಗರದ 23 ವಾರ್ಡು ವ್ಯಾಪ್ತಿಯಲ್ಲಿರುವ ಸರ್ಕಾರಿ ಕಚೇರಿಗಳು, ನ್ಯಾಯಾಲಯ ಆವರಣ, ಅಂಗಡಿ, ಜನವಸತಿ ಪ್ರದೇಶ, ಶೌಚಾಲಯಗಳಿಗೆ ಸಿಂಪಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಪುರಸಭಾ ಪರಿಸರ ಎಂಜಿನಿಯರ್‌ ನೇತ್ರಾವತಿ, ಆರೋಗ್ಯಾಧಿಕಾರಿ ಬಿಜಿ‌ಎಸ್, ಆರೋಗ್ಯ ನಿರೀಕ್ಷಕಿಯರಾದ ತೃಪ್ತಿ, ಶ್ರೀದೇವಿ, ಪುರಸಭಾ ಸಿಬ್ಬಂದಿ ಮಂಜುನಾಥ್, ಕೃಷ್ಣಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.