ADVERTISEMENT

ಆನೇಕಲ್ | ಸಂಕ್ರಾಂತಿ ಸುಗ್ಗಿ ಸಂಭ್ರಮ; ರಾಸು ಮೆರವಣಿಗೆ ಆಕರ್ಷಣೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2026, 8:06 IST
Last Updated 14 ಜನವರಿ 2026, 8:06 IST
ಆನೇಕಲ್ ತಾಲ್ಲೂಕಿನ ಅತ್ತಿಬೆಲೆ-ಮಂಚನಹಳ್ಳಿ ರಸ್ತೆಯ ರೈನ್‌ ಬೋ ಪಬ್ಲಿಕ್‌ ಶಾಲೆಯಲ್ಲಿ ಸಂಕ್ರಾಂತಿ ಸುಗ್ಗಿ ಸಂಭ್ರಮ
ಆನೇಕಲ್ ತಾಲ್ಲೂಕಿನ ಅತ್ತಿಬೆಲೆ-ಮಂಚನಹಳ್ಳಿ ರಸ್ತೆಯ ರೈನ್‌ ಬೋ ಪಬ್ಲಿಕ್‌ ಶಾಲೆಯಲ್ಲಿ ಸಂಕ್ರಾಂತಿ ಸುಗ್ಗಿ ಸಂಭ್ರಮ   

ಆನೇಕಲ್: ತಾಲ್ಲೂಕಿನ ಅತ್ತಿಬೆಲೆ-ಮಂಚನಹಳ್ಳಿ ರಸ್ತೆಯ ರೈನ್‌ ಬೋ ಪಬ್ಲಿಕ್‌ ಶಾಲೆಯಲ್ಲಿ ಸಂಕ್ರಾಂತಿ ಸುಗ್ಗಿ ಸಂಭ್ರಮ ಮಂಗಳವಾರ ನಡೆಯಿತು. ಶಾಲೆಯಿಂದ ಮೂರು ಕಿ.ಮೀ. ಹೆಚ್ಚು ದೂರ ರಾಸುಗಳ ಮೆರವಣಿಗೆ ನಡೆಸಿ, ಗ್ರಾಮಗಳಲ್ಲಿ ಎಳ್ಳು-ಬೆಲ್ಲ ವಿತರಿಸಲಾಯಿತು.

ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆಯಲ್ಲಿ ಸಂಭ್ರಮಕ್ಕೆ ಸಾಕ್ಷಿಯಾದರು. ವಿದ್ಯಾರ್ಥಿಗಳು ರಾಶಿ ಮತ್ತು ಕೃಷಿ ಸಲಕರಣೆಗಳನ್ನು ಪೂಜಿಸಿದರು. ಸಂಕ್ರಾಂತಿ ಬಂತು.. ಗೀತೆ ಸೇರಿದಂತೆ ವಿವಿಧ ಜಾನಪದ ಗೀತೆಗಳಿಗೆ ವಿದ್ಯಾರ್ಥಿಗಳು ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತ ಪಡಿಸಿದರು.

10ಕ್ಕೂ ಹೆಚ್ಚು ಅಲಂಕೃತ ರಾಸುಗಳೊಂದಿಗೆ ವಿದ್ಯಾರ್ಥಿಗಳು ಮಂಚನಹಳ್ಳಿ, ಅತ್ತಿಬೆಲೆ ರಸ್ತೆಯಲ್ಲಿ ಮೆರವಣಿಗೆಯಲ್ಲಿ ಸಾಗಿದರು. ತಮಟೆಯ ಸದ್ದಿಯ ವಿದ್ಯಾರ್ಥಿಗಳು ನೃತ್ಯ ಮಾಡುತ್ತಾ ಸಂಭ್ರಮಿಸಿದರು. ವಿದ್ಯಾರ್ಥಿಗಳು, ಪೋಷಕರು, ಶಾಲೆಯ ಶಿಕ್ಷಕರು ತಮಟೆಯ ಸದ್ದಿಗೆ ಎಜ್ಜೆ ಹಾಕಿ ಸುಗ್ಗಿ ಸಂಭ್ರಮದಲ್ಲಿ ಭಾಗಿಯಾದರು. ರಂಗೋಲಿ ಸ್ಪರ್ಧೆ ವಿದ್ಯಾರ್ಥಿಗಳು ಮತ್ತು ಪೋಷಕರು ಬಿಡಿಸಿದ ರಂಗೋಲಿ ಚಿತ್ತಾರ ಗಮನ ಸೆಳೆಯಿತ.

ADVERTISEMENT

ಪ್ರಗತಿಪರ ರೈತರಾದ ಮೇಡಹಳ್ಳಿ ವೆಂಕಟಸ್ವಾಮಿ, ಹಾಲ್ದೇನಹಳ್ಳಿ ನಾರಾಯಣಪ್ಪ, ಹೊಸಕೋಟೆ ವಿನೋದ್, ಲಕ್ಷ್ಮಣ್‌, ಮಂಜುನಾಥ್‌ ಅವರನ್ನು ಸನ್ಮಾನಿಸಲಾಯಿತು.

ರಾಸುಗಳೊಂದಿಗೆ ರೈತ ಮುರುಗೇಶ್‌ ಅವರ ಕುರಿ ‘ಪಟೇಲ’  ಕಾರ್ಯಕ್ರಮದ ಕೇಂದ್ರ ಬಿಂದುವಾಗಿತ್ತು. ಕಾರ್ಯಕ್ರಮ ನಡೆಯುತ್ತಿದ್ದ ಮೈದಾನ ಸುತ್ತಲೂ ಕುರಿ ಹೆಜ್ಜೆ ಹಾಕುತ್ತಿದ್ದರೆ ಪಟೇಲ..ಪಟೇಲ.. ಎಂದು ವಿದ್ಯಾರ್ಥಿಗಳು ಕೂಗುತ್ತಿದ್ದರು. 

ರೈನ್‌ ಬೋ ಪಬ್ಲಿಕ್‌ ಶಾಲೆ ಕಾರ್ಯದರ್ಶಿ ವಿಜಯ್‌ ಕುಮಾರ್‌ ಗೌಡ, ಮುಖಂಡ ಸಂಪಂಗಿರಾಮಯ್ಯ ಮಾತನಾಡಿದರು.

ಸಂಕ್ರಾಂತಿ ಸುಗ್ಗಿ ಸಂಭ್ರಮದಲ್ಲಿ ವಿದ್ಯಾರ್ಥಿಗಳು ಆಕರ್ಷಕ ನೃತ್ಯ
ಸಂಕ್ರಾಂತಿ ಸುಗ್ಗಿ ಸಂಭ್ರಮದಲ್ಲಿ ಅಲಂಕೃತ ರಾಸುಗಳ ಮೆರವಣಿಗೆ
ಸಂಕ್ರಾಂತಿ ಸುಗ್ಗಿ ಸಂಭ್ರಮದಲ್ಲಿ ಪ್ರಗತಿ ಪರ ರೈತರನ್ನು ಸನ್ಮಾನಿಸಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.