ADVERTISEMENT

ಛಲವಾದಿ ಸಮುದಾಯಕ್ಕೆ ಪ್ರತ್ಯೇಕ ನಿಗಮಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2020, 2:53 IST
Last Updated 1 ಡಿಸೆಂಬರ್ 2020, 2:53 IST

ದೇವನಹಳ್ಳಿ: ರಾಜ್ಯದಲ್ಲಿ ಪರಿಶಿಷ್ಟ ಜಾತಿಯಲ್ಲಿ ಪ್ರಬಲ ಬಹು ಸಂಖ್ಯಾತರಾಗಿರುವ ಛಲವಾದಿ ಸಮುದಾಯಕ್ಕೆ ಪ್ರತ್ಯೇಕ ನಿಗಮ ಮಂಡಳಿ ಘೋಷಣೆ ಮಾಡುವಂತೆ ತಾಲ್ಲೂಕು ಛಲವಾದಿ ಮಹಾಸಭಾ ಅಧ್ಯಕ್ಷ ಕೆ.ವಿ.ಸ್ವಾಮಿ ಸರ್ಕಾರವನ್ನು ಒತ್ತಾಯಿಸಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿ ನಿಗಮ ಮಂಡಳಿಗಳ ಘೋಷಣೆ ಪರ್ವ ಆರಂಭಗೊಂಡಿದೆ. ಮರಾಠ ನಿಗಮ ಮಂಡಳಿಗೆ ₹50ಕೋಟಿ, ವೀರಶೈವ –ಲಿಂಗಾಯುತ ನಿಗಮ ಮಂಡಳಿಗೆ ₹500 ಕೋಟಿ, ಸರ್ಕಾರ ಘೋಷಣೆ ಮಾಡಿದೆ. ಛಲವಾದಿ ಸಮುದಾಯಕ್ಕೆ ಯಾಕೆ ನಿಗಮ ಮಂಡಳಿ ನೀಡಬಾರದು ಎಂದು ಪ್ರಶ್ನಿಸಿದರು.

ಪರಿಶಿಷ್ಟ ಜಾತಿಯಲ್ಲಿ ಪ್ರಸ್ತುತ 101 ಜಾತಿಗಳಿವೆ. ಈ ಜಾತಿಗಳ ಪೈಕಿ ಮಾದಿಗ ಸಮುದಾಯಕ್ಕೆ ಅದಿಜಾಂಬವ ನಿಗಮ ಮಂಡಳಿ ಸ್ಥಾಪಿಸಿದರುವುದು ಒಳ್ಳೆಯ ಬೆಳೆವಣಿಗೆ. 101 ಜಾತಿಗಳಿಗೆ ಏಕೈಕ ಅಂಬೇಡ್ಕರ್ ಅಭಿವೃದ್ಧಿ ನಿಗಮ, ಬಂಜಾರ ಅಭಿವೃದ್ಧಿ ನಿಗಮ, ಅಸ್ತಿತ್ವಕ್ಕೆ ಬಂದಿದೆ. ಸರ್ಕಾರ ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ತಾಲ್ಲೂಕಿಗೆ ಕೇವಲ 2 ರಿಂದ 3 ಫಲಾನುಭವಿಗಳಿಗೆ ಮಾತ್ರ ಅವಕಾಶ ಸಿಗಲಿದೆ. ಅದು ಸಹ ಶಾಸಕರು ಶಿಫಾರಸು ಮಾಡಿದವರಿಗೆ ಮಾತ್ರ. ವಾರ್ಷಿಕ 200 ರಿಂದ 300 ಫಲಾನುಭವಿಗಳು ಅರ್ಜಿ ಸಲ್ಲಿಸಿದರೂ ಅವಕಾಶ ಸಿಗುತ್ತಿಲ್ಲ. ಸರ್ಕಾರ ಫಲಾನುಭವಿಗಳ ಸಂಖ್ಯೆ ಹೆಚ್ಚುತ್ತಿಲ್ಲ. ವಸತಿ ಯೋಜನೆಯಲ್ಲಿನ ಪರಿಸ್ಥಿತಿಯೂ ಇದೆ ಅಗಿದೆ. ಸರ್ಕಾರ ಛಲವಾದಿ ಸಮುದಾಯಕ್ಕೆ ನಿಗಮ ಮಂಡಳಿ ಸ್ಥಾಪಿಸದಿದ್ದರೆ ಹೋರಾಟ ಅನಿರ್ವಾಯವಾಗಲಿದೆ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.