ADVERTISEMENT

ಕ್ಷುಲ್ಲಕ ಕಾರಣಕ್ಕೆ ದೊಣ್ಣೆಗಳಿಂದ ಬಡಿದಾಟ: ವಿಡಿಯೊ ವೈರಲ್‌

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2020, 6:24 IST
Last Updated 27 ನವೆಂಬರ್ 2020, 6:24 IST
ಜಗಳ ನಡೆಯುವ ವೇಳೆ ಬಂದೂಕು ಹಿಡಿದಿರುವ ಯುವಕ
ಜಗಳ ನಡೆಯುವ ವೇಳೆ ಬಂದೂಕು ಹಿಡಿದಿರುವ ಯುವಕ   

ದೊಡ್ಡಬಳ್ಳಾಪುರ: ತಾಲ್ಲೂಕಿನ ಗುಂಡಮಗೆರೆ ಗ್ರಾಮದಲ್ಲಿ ಬುಧವಾರ ಮನೆ ಮುಂದಿನ ಚರಂಡಿ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ದೊಣ್ಣೆಗಳಿಂದ ಬಡಿದಾಡಿಕೊಂಡಿರುವ ವಿಡಿಯೊ ವೈರಲ್‌ ಆಗಿದೆ.

ಸಿದ್ದಮ್ಮ ಮತ್ತು ಗಂಗಾಧರ್ ಕುಟುಂಬದ ನಡುವೆ ಚರಂಡಿ ನೀರು ಹರಿದು ಹೋಗುವ ವಿಚಾರಕ್ಕೆ ಜಗಳ ನಡೆದಿದೆ. ಸಿದ್ದಮ್ಮ ಹಾಗೂ ಅವರ ಪುತ್ರ ಅಶ್ವಥ್ ಅವರಿಗೆ ಗಂಭೀರ ಗಾಯಗಳಾಗಿದ್ದು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಎರಡು ಕುಟುಂಬದ ಪುರುಷರು, ಮಹಿಳೆಯರು ಬಡಿದಾಟದ ಸಂದರ್ಭದಲ್ಲಿ ಒಬ್ಬ ಯುವಕ ಮನೆಯಲ್ಲಿನ ಬಂದೂಕು ತಂದು ಎದುರಿಸುವ ದೃಶ್ಯವೂ ಮೊಬೈಲ್ನಲ್ಲಿ ಸೆರೆಯಾಗಿದೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿ ಜಾತಿ ಬಣ್ಣ ಬಳಿದು ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಳಿಸಲಾಗುತ್ತಿದೆ.

ADVERTISEMENT

ಈ ಘಟನೆ ಕುರಿತು ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಗಂಗಾಧರ್, ಅಂಬಿಕಾ, ಹರೀಶ್‌ಬಾಬು ಅವರನ್ನು ಬಂಧಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.