ADVERTISEMENT

ದೇವನಹಳ್ಳಿ | ಸ್ವಚ್ಛತಾ ಅಭಿಯಾನ: ಜಿಲ್ಲಾಧಿಕಾರಿಯಿಂದ ಶ್ರಮದಾನ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2025, 1:53 IST
Last Updated 26 ಸೆಪ್ಟೆಂಬರ್ 2025, 1:53 IST
ದೇವನಹಳ್ಳಿ ಪಟ್ಟಣದ ಐತಿಹಾಸಿಕ ಕೋಟೆ ಪ್ರದೇಶದಲ್ಲಿ ‘ಸ್ವಚ್ಛತಾ ಹಿ ಸೇವಾ’ ಅಭಿಯಾನದ ಭಾಗವಾಗಿ ಹಮ್ಮಿಕೊಂಡಿದ್ದ ಶ್ರಮದಾನಕ್ಕೆ ಕೈ ಜೋಡಿಸಿದ ಜಿಲ್ಲಾಧಿಕಾರಿ ಎ.ಬಿ.ಬಸವರಾಜು 
ದೇವನಹಳ್ಳಿ ಪಟ್ಟಣದ ಐತಿಹಾಸಿಕ ಕೋಟೆ ಪ್ರದೇಶದಲ್ಲಿ ‘ಸ್ವಚ್ಛತಾ ಹಿ ಸೇವಾ’ ಅಭಿಯಾನದ ಭಾಗವಾಗಿ ಹಮ್ಮಿಕೊಂಡಿದ್ದ ಶ್ರಮದಾನಕ್ಕೆ ಕೈ ಜೋಡಿಸಿದ ಜಿಲ್ಲಾಧಿಕಾರಿ ಎ.ಬಿ.ಬಸವರಾಜು    

ದೇವನಹಳ್ಳಿ: ಜಿಲ್ಲಾಧಿಕಾರಿ ಎ.ಬಿ. ಬಸವರಾಜು ಅವರು ಕಸ ಹೆಕ್ಕಿಸಿದರೆ, ಜಿ.ಪಂ ಸಿಇಒ ಕೆ.ಎನ್‌. ಅನುರಾಧ ಕಸ ಗುಡಿಸುವ ಮೂಲಕ ‘ಸ್ವಚ್ಚತಾ ಹಿ ಸೇವಾ’ ಅಭಿಯಾನಕ್ಕೆ ಚಾಲನೆ ನೀಡಿದರು.

ಪಟ್ಟಣದ ಐತಿಹಾಸಿಕ ಕೋಟೆ ಪ್ರದೇಶದಲ್ಲಿ ಗುರುವಾರ ಕೇಂದ್ರ ಸಂಸ್ಕೃತಿ ಮತ್ತು ಪುರಾತತ್ವ ಸರ್ವೇಕ್ಷಣಾ ಸಚಿವಾಲಯ ಹಾಗೂ ದೇವನಹಳ್ಳಿ ಪುರಸಭೆಯಿಂದ ಹಮ್ಮಿಕೊಂಡಿದ್ದ ‘ಸ್ವಚ್ಚತಾ ಹಿ ಸೇವಾ’ ಅಭಿಯಾನ ಭಾಗವಾಗಿ ಶ್ರಮದಾನದಲ್ಲಿ ಜಿಲ್ಲಾಧಿಕಾರಿ ಎ.ಬಿ ಬಸವರಾಜು ಭಾಗವಹಸಿ ಸ್ವಚ್ಛತೆಗಾಗಿ ಶ್ರಮದಾನ ಮಾಡಿದರು.

ಕೋಟೆ ಆವರಣದಲ್ಲಿ ಸ್ವಚ್ಛಗೊಳಿಸಿ ಮಾತನಾಡಿದ ಜಿಲ್ಲಾಧಿಕಾರಿ ಎ.ಬಿ ಬಸವರಾಜು, ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ. ಯಾವುದೇ ಅಭಿವೃದ್ಧಿ ಕೆಲಸವನ್ನು ತಳಹದಿಯಿಂದ ಮಾಡಿದರೆ ಅದು ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಯಶಸ್ಸು ಸಿಗುತ್ತದೆ ಎಂದರು.

ADVERTISEMENT

ಸ್ವಚ್ಛತೆ  ಕಾರ್ಯದಲ್ಲಿ ಸಾರ್ವಜನಿಕರೊಂದಿಗೆ ಪ್ರತಿಜ್ಞಾ ವಿಧಿ ಭೋಧಿಸಿ, ಮತ್ತು ನಾಗರಿಕರಿಂದ ಮಾನವ ಸರಪಳಿ ಜಾಥಾ ನಡೆಸಲಾಯಿತು. ಸಾರ್ವಜನಿಕ ಸ್ಥಳಗಳು, ಶಾಲಾ ಆವರಣ, ಆರಳಿಕಟ್ಟೆ, ದೇವಸ್ಥಾನ, ಮುಖ್ಯರಸ್ತೆಗಳಲ್ಲಿ  ಶ್ರಮದಾನ ಹಮ್ಮಿಕೊಳ್ಳಲಾಗಿತ್ತು.

ಅಣೇಶ್ವರ ಗ್ರಾಮಪಂಚಾಯಿತಿಯ ಬೈಚಾರಪುರ ಗ್ರಾಮದಲ್ಲಿ ಸ್ವಚ್ಛತೆಯೇ ಸೇವೆ ಅಭಿಯಾನದಲ್ಲಿ ‘ಒಂದು ದಿನ ಒಂದು ಗಂಟೆ ಎಲ್ಲಾರು ಸೇರಿ’ ಎಂಬ ಘೋಷ ವಾಕ್ಯದೊಂದಿಗೆ ಸ್ವಚ್ಛತಾ ಶ್ರಮದಾನಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಎನ್.ಅನುರಾಧ ಅವರು ಕಸ ಗೂಡಿಸುವ ಮೂಲಕ ಚಾಲನೆ ನೀಡಿದರು.

ಕೇಂದ್ರ ಸಂಸ್ಕೃತಿ ಮತ್ತು ಪುರಾತತ್ವ ಸರ್ವೇಕ್ಷಣಾ ಸಚಿವಾಲಯದ ಪ್ರಾದೇಶಿಕ ನಿರ್ದೇಶಕ ಡಾ.ಎನ್.ಕೆ ಪಾಠಕ್, ದೇವನಹಳ್ಳಿ ತಹಶೀಲ್ದಾರ್ ಎಂ.ಅನಿಲ್‌, ಪುರಸಭೆಯ ಮುಖ್ಯಾಧಿಕಾರಿ ಶಿವಮೂರ್ತಿ, ಅಣ್ಣೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಮಾ, ಉಪಾದ್ಯಾಕ್ಷ ಮುನಿರಾಜಪ್ಪ, ಪಿಡಿಒ ಗಂಗರಾಜು ಇದ್ದರು.

‘ಸ್ವಚ್ಚತಾ ಹಿ ಸೇವಾ’ ಅಭಿಯಾನದ ಭಾಗವಾಗಿ ಅಣ್ಣೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೈಚಾಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನಕ್ಕೆ ಪಂಚಾಯಿತಿ ಸಿಇಒ ಕೆ.ಎನ್‌.ಅನುರಾಧ ಚಾಲನೆ ನೀಡಿದರು
ನಿಮ್ಮ ಮನೆಯ ಅಂಗಳ ಮತ್ತು ಸುತ್ತಮುತ್ತಲಿನ ಪ್ರದೇಶದ ಸ್ವಚ್ಛತೆ ಮಾಡಿದರೆ ಒಳ್ಳೆಯದು. ಪ್ಲಾಸ್ಟಿಕ್ ಬಳಸುವುದನ್ನು ನಿಲ್ಲಿಸಿ ಹಸಿರು ಸಮಾಜ ನಿರ್ಮಾಣಕ್ಕೆ ನಾವು ಸಾಕ್ಷಿ ಆಗಬೇಕಿದೆ
ಎ.ಬಿ. ಬಸವರಾಜು ಜಿಲ್ಲಾಧಿಕಾರಿ

ಎಲ್ಲೆಂದರಲ್ಲಿ ಕಸ ಸುರಿದರೆ ದಂಡ

ಪ್ರತಿಯೊಬ್ಬರು ಮನೆಯ ಕಸವನ್ನು ಎಲ್ಲೆಂದರಲ್ಲಿ ಸುರಿಯದೇ ಗ್ರಾಮಗಳಿಗೆ ಬರುವ ಸ್ವಚ್ಛತಾ ವಾಹಿನಿಗೆ ಕಸವನ್ನು ನೀಡಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಕಸ ಸುರಿಯುವುದನ್ನು ತಡೆಗಟ್ಟಲು ಸಿಸಿಟಿವಿ ಕ್ಯಾಮೆರಾ ಮತ್ತು ಸೂಚನೆ ಫಲಕ ಅಳವಡಿಸಲಾಗಿದೆ. ಕಸವನ್ನು ಸಾರ್ವಜನಿಕ ಸ್ಥಳಗಳಲ್ಲಿ ಸುರಿದವರಿಗೆ ದಂಡ ವಿಧಿಸಲಾಗುತ್ತಿದೆ ಎಂದು ಜಿ.ಪಂ ಸಿಇಒ ಕೆ.ಎನ್.ಅನುರಾಧ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.