ADVERTISEMENT

ಹೆಜ್ಜೇನು ದಾಳಿ ವ್ಯಕ್ತಿ ಸಾವು

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2021, 4:24 IST
Last Updated 17 ಸೆಪ್ಟೆಂಬರ್ 2021, 4:24 IST
ಪಿಳ್ಳೇಗೌಡ
ಪಿಳ್ಳೇಗೌಡ   

ವಿಜಯಪುರ: ಹೋಬಳಿ ಯ ಕೋರ ಮಂಗಲ ಗ್ರಾಮ ಸಮೀಪದ ಕುರುಲುಕುಂಟೆ ರಸ್ತೆಯಲ್ಲಿ ಗುರುವಾರ ಹಿಪ್ಪುನೇರಳೆ ಸೊಪ್ಪು ಕೊಯ್ಯಲು ಹೋಗಿದ್ದ ಪಿಳ್ಳೇಗೌಡ(65) ಅವರ ಮೇಲೆ ಹೆಜ್ಜೇನು ದಾಳಿ ನಡೆಸಿದ್ದು, ತೀವ್ರವಾಗಿ ಅಸ್ವಸ್ಥರಾಗಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.

ಮೃತರಿಗೆ ಪತ್ನಿ, ಮೂವರು ಪುತ್ರರು ಹಾಗೂ ಪುತ್ರಿ ಇದ್ದಾರೆ. ವಿಜಯಪುರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಕೋರಮಂಗಲ ಗ್ರಾಮದಲ್ಲಿ ಮೃತರ ಅಂತ್ಯಕ್ರಿಯೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT