ADVERTISEMENT

ಸುವರ್ಣಮುಖಿ ಕೊಳದಲ್ಲಿ ಮುಳುಗಿ ಮೂವರ ಸಾವು

​ಪ್ರಜಾವಾಣಿ ವಾರ್ತೆ
Published 21 ಜೂನ್ 2020, 3:35 IST
Last Updated 21 ಜೂನ್ 2020, 3:35 IST
   

ಆನೇಕಲ್: ತಾಲ್ಲೂಕಿನ ಬನ್ನೇರುಘಟ್ಟ ಪೊಲೀಸ್‌ ಠಾಣೆ ವ್ಯಾಪ್ತಿಯ ಸುವರ್ಣಮುಖಿ ಕೊಳದಲ್ಲಿ ಮುಳುಗಿ ಒಬ್ಬ ಯುವತಿ ಸೇರಿದಂತೆ ಮೂವರು ಶುಕ್ರವಾರ ಸಂಜೆ ಮೃತಪಟ್ಟಿದ್ದಾರೆ.

ಮೃತಪಟ್ಟವರನ್ನು ಜೆಸ್ಸಿಕಾ (25), ಡ್ಯಾನಿಷ್ ‌(25) ಮತ್ತು ಮೋಷಸ್ ‌(21) ಎಂದು ಗುರುತಿ
ಸಲಾಗಿದೆ. ಬೆಂಗಳೂರಿನ ವಿಲ್ಸನ್‌ ಗಾರ್ಡನ್‌ನಿಂದ ಇಬ್ಬರು ಯುವತಿ
ಯರು ಮತ್ತು ಮೂವರು ಯುವಕರು ಬನ್ನೇರುಘಟ್ಟ ಅರಣ್ಯದ
ಲ್ಲಿರುವ ಸುವರ್ಣಮುಖಿ ಕೊಳದ ಬಳಿಗೆ ಬಂದು ಕೊಳದಲ್ಲಿ ಇಳಿದಿದ್ದರು. ಈಜು ಬಾರದೇ ಮೂವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT