ADVERTISEMENT

‘ಹಿರಿಯರಿಗೆ ಗೌರವ ನೀಡಿ’

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2019, 13:45 IST
Last Updated 22 ಆಗಸ್ಟ್ 2019, 13:45 IST
ವಿಜಯಪುರದ ರೋಟರಿ ಶಾಲಾಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅನಾಥ ಶವಸಂಸ್ಕಾರ ಮಾಡುವ ಸಮಾಜಸೇವಕ ಡೇನಿಯಲ್ ಅವರನ್ನು ಸನ್ಮಾನಿಸಿದರು
ವಿಜಯಪುರದ ರೋಟರಿ ಶಾಲಾಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅನಾಥ ಶವಸಂಸ್ಕಾರ ಮಾಡುವ ಸಮಾಜಸೇವಕ ಡೇನಿಯಲ್ ಅವರನ್ನು ಸನ್ಮಾನಿಸಿದರು   

ವಿಜಯಪುರ: ಹಿರಿಯರನ್ನು ಗೌರವಿಸುವ ಗುಣ ಬೆಳೆಸಿಕೊಳ್ಳಬೇಕು. ನಿರ್ಲಕ್ಷ್ಯ ಮಾಡದೆ ಎಲ್ಲ ರೀತಿ ಸ್ಥಾನಮಾನ ಕಲ್ಪಿಸಬೇಕೆಂದು ಸಮಾಜ ಸೇವಕ ಬೆಂಗಳೂರಿನ ಡೇನಿಯಲ್ ತಿಳಿಸಿದರು.

ಇಲ್ಲಿನ ರೋಟರಿ ಶಾಲಾ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಬಹಳ ಮಂದಿ ವಯಸ್ಸಾದವರು ಇಂದಿಗೂ ಊಟ, ಮಲಗಲು ಜಾಗ. ಹೊದಿಕೆ ಇಲ್ಲದೆ ಅನಾಥರಾಗಿ ಸಾಯುತ್ತಿದ್ದಾರೆ. ಜೀವನ ತ್ಯಾಗ ಮಾಡಿ ಮಕ್ಕಳನ್ನು ಪೋಷಿಸುವ ಹಿರಿಯರಿಗೆ ಜೀವನದ ಸಂಧ್ಯಾಕಾಲದಲ್ಲಿ ಅನಾಥ ಆಶ್ರಮ, ವೃದ್ಧಾಶ್ರಮಗಳಿಗೆ ಕಳುಹಿಸುವ ಪದ್ಧತಿ ದೂರವಾಗಬೇಕು ಎಂದರು.

ಅನಾಥಶವಗಳ ಸಂಸ್ಕಾರ: ‘ತಂದೆ ಕೊಂಡಯ್ಯ ಅವರಿಂದ ಬಳುವಳಿಯಾಗಿ ಬಂದ ಅನಾಥಶವಗಳ ಉಚಿತ ಸಂಸ್ಕಾರ ಕಾರ್ಯ 1991ರಿಂದ ನಡೆಸಿಕೊಂಡು ಬರಲಾಗುತ್ತಿದೆ. ಇಡೀ ಕುಟುಂಬವೇ ಈ ಕಾರ್ಯದಲ್ಲಿ ತೊಡಗಿದೆ. ಇದೊಂದು ನಿಸ್ವಾರ್ಥ ಸೇವೆ’ ಎಂದರು.

ADVERTISEMENT

ಡೇನಿಯಲ್ ಅವರಿಗೆ ರೋಟರಿ ಮತ್ತು ಸುಬ್ಬಮ್ಮ ಚನ್ನಪ್ಪ ಟ್ರಸ್ಟ್‌ಗಳ ವತಿಯಿಂದ ಧನಸಹಾಯ ನೀಡಿ ಗೌರವಿಸಲಾಯಿತು.

ರೋಟರಿ ಸಂಸ್ಥೆ ಅಧ್ಯಕ್ಷ ಬಿ.ನರೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಸೇವಕ ಕೊಂಡಯ್ಯ, ಪತ್ನಿ ಲಾವಣ್ಯ, ರೋಟರಿ ಕಾರ್ಯದರ್ಶಿ ಬಿ.ಕೆ.ರಾಜು, ಖಜಾಂಚಿ ಎನ್.ರುದ್ರಮೂರ್ತಿ. ಎ.ಎನ್.ರಾಮಬಸಪ್ಪ, ಕೆ.ಸದ್ಯೋಜಾತಪ್ಪ, ಜಿ.ವೀರಭದ್ರಪ್ಪ, ಸಿ.ಬಸಪ್ಪ, ಪಿ.ಚಂದ್ರಪ್ಪ, ಎಸ್.ಬಸವರಾಜು, ಸಿದ್ಧರಾಜು, ಎನ್.ವಿಜಯರಾಜು, ಬುಲೆಟಿನ್ ಎಡಿಟರ್ ಎಚ್.ಎಸ್.ರುದ್ರೇಶಮೂರ್ತಿ, ಎಸ್.ಪುನೀತ್‌ಕುಮಾರ್, ಸಂಘಸೇವೆ ನಿರ್ದೇಶಕಿ ಎ.ಎಂ.ಮಂಜುಳಾ, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.