ವಿಜಯಪುರ (ದೇವನಹಳ್ಳಿ): ಹೋಬಳಿಯಾದ್ಯಂತ ಭಾನುವಾರ ಬೆಳಗ್ಗೆಯಿಂದ ಸಂಜೆ ಕತ್ತಲಾಗುವರೆಗೂ ಬಿಟ್ಟುಬಿಟ್ಟು ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತವಾಯಿತು.
ಬೆಳಗ್ಗೆ 10 ಗಂಟೆವರೆಗೂ ಚುರುಕಾಗಿ ಬಿಸಿಲು ಕಾಯಿತು. ನಂತರ ಮೋಡ ಕವಿದ ವಾತಾವರಣ ಕಂಡು ಬಂದು ಆರಂಭಗೊಂಡ ಮಳೆ ಸ್ವಲ್ಪ ಹೊತ್ತು ಜೋರಾಗಿ ಸುರಿದರೆ, ಬಿಡುವಿನ ಸಂದರ್ಭದಲ್ಲಿ ಸೋನೆ ಮಳೆಯ ರೀತಿಯಲ್ಲಿ ಹನಿಯುತ್ತಲೇ ಇತ್ತು.
ಮಳೆಯಿಂದಾಗಿ ಜನಸಾಮಾನ್ಯರು ಓಡಾಟಕ್ಕೆ ತೊಂದರೆಯಾಯಿತು. ಮಳೆ ನಿಲ್ಲುವ ಲಕ್ಷಣ ಕಂಡು ಬರದೇ ಇದ್ದುದ್ದರಿಂದ ಜನರು ಛತ್ರಿ ಹಿಡಿದುಕೊಂಡು ಓಡಾಡಿದರು. ಚಳಿಯ ವಾತಾವರಣ ಇದ್ದುದ್ದರಿಂದ ಸ್ಪೆಟರ್, ಜಾಕೆಟ್‍ಗಳನ್ನು ಧರಿಸಿದ್ದು ಕಂಡು ಬಂತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.