ADVERTISEMENT

ದೊಡ್ಡಬಳ್ಳಾಪುರ: ಪದವಿ ಕಾಲೇಜಿಗೆ ಪರಿವೀಕ್ಷಣಾ ತಂಡ ಭೇಟಿ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2021, 5:00 IST
Last Updated 7 ಅಕ್ಟೋಬರ್ 2021, 5:00 IST
ದೊಡ್ಡಬಳ್ಳಾಪುರದ ಸರ್ಕಾರಿ ಪ್ರಥಮದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರಕ್ಕೆ ಬೆಂಗಳೂರು ಉತ್ತರ ವಿವಿಯ ಸ್ಥಳೀಯ ಪರಿವೀಕ್ಷಣಾ ತಂಡ (ಎಲ್‌ಐಸಿ) ಭೇಟಿ ನೀಡಿ ಪರಿಶೀಲಿಸಿತು. ತಂಡದ ಅಧ್ಯಕ್ಷ ಡಾ.ದಿಲೀಪ್‌ ಕೃಷ್ಣ, ಸದಸ್ಯರಾದ ಪ್ರೊ.ಎಂ.ಜಿ. ಚಂದ್ರಶೇಖರಯ್ಯ, ಡಾ.ಸುಮಿತಾ ಹಾಗೂ ಪ್ರಾಧ್ಯಾಪಕರು ಇದ್ದರು

ದೊಡ್ಡಬಳ್ಳಾಪುರ:ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರಕ್ಕೆ ಬೆಂಗಳೂರು ಉತ್ತರ ವಿವಿ ಸ್ಥಳೀಯ ಪರಿವೀಕ್ಷಣಾ ತಂಡ (ಎಲ್‌ಐಸಿ) ಭೇಟಿ ನೀಡಿ ಪರಿಶೀಲನೆ ನಡೆಸಿತು.

ಪರಿವೀಕ್ಷಣಾ ತಂಡದಲ್ಲಿ ಅಧ್ಯಕ್ಷ ಡಾ.ದಿಲೀಪ್‌ ಕೃಷ್ಣ, ಸದಸ್ಯರಾದ ಪ್ರೊ.ಎಂ.ಜಿ. ಚಂದ್ರಶೇಖರಯ್ಯ, ಡಾ.ಸುಮಿತಾ ಇದ್ದರು. ಕಾಲೇಜಿನಲ್ಲಿನ ಮೂಲಸೌಕರ್ಯ, ಬೋಧನಾ ವ್ಯವಸ್ಥೆಯನ್ನು ಪರಿಶೀಲಿಸಿದರು.

ಈ ಕುರಿತು ಮಾಹಿತಿ ನೀಡಿದ ಪ್ರಾಂಶುಪಾಲ ಪ್ರೊ.ಎನ್. ಶ್ರೀನಿವಾಸಯ್ಯ, ‘ಸ್ಥಳೀಯ ಪರಿವೀಕ್ಷಣಾ ತಂಡದಿಂದ ಕಾಲೇಜಿಗೆ ಭೇಟಿ ನೀಡಿ ಮೆಚ್ಚುಗೆ ಸೂಚಿಸಿದೆ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರಗತಿಗೆ ಪೂರಕ ವ್ಯವಸ್ಥೆ, ಮೂಲ ಸೌಕರ್ಯಗಳಿವೆ. ಉತ್ತಮ ಗ್ರಂಥಾಲಯ ವ್ಯವಸ್ಥೆಯಿದೆ. ಉತ್ತಮ ಬೋಧಕ ವರ್ಗವಿದ್ದು, ಸ್ನಾತಕೋತ್ತರ ಕೇಂದ್ರದಿಂದ (ಗ್ರಾಮೀಣ) ವಿದ್ಯಾರ್ಥಿಗಳಿಗೆ ಹೆಚ್ಚಿನ ಉಪಯೋಗವಾಗುತ್ತಿದೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ’ ಎಂದರು.

ADVERTISEMENT

‘ಇದು ಕಾಲೇಜಿನ ಘನತೆ ಮತ್ತು ಗೌರವವನ್ನು ಹೆಚ್ಚಿಸಿದೆ. ನಮ್ಮ ಪರಿಶ್ರಮಕ್ಕೆ ಪ್ರತಿಫಲ ದೊರೆತಂತಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.