ADVERTISEMENT

ವಾಯುಭಾರ ಕುಸಿತ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಾಳೆಯಿಂದ ಗಾಳಿ ಸಹಿತ ಮಳೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2025, 2:08 IST
Last Updated 28 ನವೆಂಬರ್ 2025, 2:08 IST
.
.   

ದೇವನಹಳ್ಳಿ:  ದೇಶದ ದಕ್ಷಿಣ ಭಾಗದಲ್ಲಿ ವಾಯುಭಾರ ಕುಸಿತವಾಗಿದ್ದು, ರಾಜ್ಯದ ದಕ್ಷಿಣ ಭಾಗದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನ.29ರಿಂದ ಡಿ.2 ರವರೆಗೆ ಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ, ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಸೂಚಿಸಿದೆ.

ನೀರು ಶೇಖರಣೆ ಯಾಗಿರುವ ತಗ್ಗು ಪ್ರದೇಶ, ಕೆರೆ, ಕಾಲುವೆಗಳಿಗೆ ಮಕ್ಕಳು ಸೇರಿದಂತೆ ಸಾರ್ವಜನಿಕರು ಹೋಗದಂತೆ ಜಾಗ್ರತೆವಹಿಸಬೇಕು. ಮಳೆಯಂತಹ ಸಂದರ್ಭದಲ್ಲಿ ಕೃಷಿ ಚಟುವಟಿಕೆಯಲ್ಲಿರು ರೈತರು ದೂರವಿರಬೇಕು. ಮಳೆ ಬೀಳುವ ಸಂದರ್ಭದಲ್ಲಿ ಹೆಚ್ಚು ತಿರುಗಾಡದಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.

ಅಪಾಯಕಾರಿ ಮರ, ವಿದ್ಯುತ್‌ ಕಂಡ ಹಾಗೂ ತುಂಡಾಗಿರುವ ವಿದ್ಯುತ್‌ ತಂತಿಗಳಿಂದ ದೂರವಿರಬೇಕು. ದುರ್ಬಲವಾಗಿರುವ ಹಳೆಯ ಕಟ್ಟಡಗಳು, ಮರಗಳು ಮಳೆ ಗಾಳಿ ಸಂದರ್ಭದಲ್ಲಿ ನೆಲಕುರುಳುವ ಸಾಧ್ಯತೆ ಇದ್ದು, ಅಂತಹ ಪ್ರದೇಶದಿಂದ ಅಂತರದಲ್ಲಿರಬೇಕು.

ADVERTISEMENT

ಶೀಥಿಲಾವಸ್ಥೆಯ ಕಟ್ಟಡಗಳಲ್ಲಿರುವ ಹಾಗೂ ತಗ್ಗು ಪ್ರದೇಶದಲ್ಲಿ ವಾಸವಾಗಿರುವವರು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತವಾಗಬೇಕು. ತುರ್ತ ಪರಿಸ್ಥಿತಿಯಲ್ಲಿ ವಿಪತ್ತು ನಿರ್ವಹಣಾ ಕಂಟ್ರೋಲ್‌ ರೂಂ. 080-28388005, ಅರಣ್ಯ ಇಲಾಖೆ: 1926, ಅಗ್ನಿಶಾಮಕ ಇಲಾಖೆ: 080-27681101 ಸಂಪರ್ಕಿಸಿ ಎಂದು ಪ್ರಕಟಣೆ ತಿಳಿಸಿದೆ.