ADVERTISEMENT

‘ದೇಶದ ಪರಂಪರೆಗೆ ವಿಶ್ವಕರ್ಮರ ಕೊಡುಗೆ ಅಪಾರ ‌’

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2019, 13:24 IST
Last Updated 17 ಸೆಪ್ಟೆಂಬರ್ 2019, 13:24 IST
ವಿಶ್ವಕರ್ಮ ಜಯಂತಿಯಲ್ಲಿ ಶಾಸಕ ಟಿ.ವೆಂಕಟರಮಣಯ್ಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು
ವಿಶ್ವಕರ್ಮ ಜಯಂತಿಯಲ್ಲಿ ಶಾಸಕ ಟಿ.ವೆಂಕಟರಮಣಯ್ಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು   

ದೊಡ್ಡಬಳ್ಳಾಪುರ: ದೇಶದ ಶ್ರೀಮಂತ ಪರಂಪರೆಗೆ ವಿಶ್ವಕರ್ಮರ ಕೊಡುಗೆ ಅಪಾರ. ವಿಶ್ವಕರ್ಮರು ಸಂಘಟಿತರಾಗುವ ಮೂಲಕ ಸೌಲಭ್ಯ ಪಡೆಯಬೇಕೆಂದು ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ನಡೆದ ಜಯಂತ್ಯುತ್ಸವದಲ್ಲಿ ಮಾತನಾಡಿದರು. ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ವಿಶ್ವಕರ್ಮ ಅಭಿವೃದ್ಧಿ ನಿಗಮ ಸ್ಥಾಪಿಸಲಾಗಿದೆ. ಇದರ ಮೂಲಕ ಸಮುದಾಯಕ್ಕೆ ಸೌಲಭ್ಯ ಕಲ್ಪಿಸಲಾಗುತ್ತಿದೆ. ಸಮುದಾಯಕ್ಕೆ ನಿವೇಶನ ಕಲ್ಪಿಸುವಂತೆ ಮನವಿ ಸಲ್ಲಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಎಂ.ಕೆ.ರಮೇಶ್, ವಿಶ್ವಕರ್ಮ ಸಮಾಜದ ಮುಖಂಡರಾದ ಎಚ್.ಪಿ. ಷಣ್ಮುಖಾಚಾರ್, ಜಗನ್ನಾಥಾಚಾರ್, ನಾಗರತ್ನಮ್ಮ, ಎಲ್‍ಐಸಿ ಸೋಮಶೇಖರ್, ಪಾರ್ಥಸಾರಾಥಿ ಆಚಾರ್, ಬಿ.ಜೆ.ಸೋಮಶೇಖರ್,ಟಿ.ಕೇಶವ ಆಚಾರ್ ಸೇರಿದಂತೆ ವಿಶ್ವಕರ್ಮ ಮುಖಂಡರು ‍ಪಾಲ್ಗೊಂಡಿದ್ದರು.

ADVERTISEMENT

ಕಾಳಮ್ಮ ದೇವಾಲಯದಲ್ಲಿ ಪೂಜೆ: ತಾಲ್ಲೂಕು ವಿಶ್ವಕರ್ಮ ಮಹಾಮಂಡಳ ಹಾಗೂ ವಿಶ್ವಕರ್ಮ ಮಹಾಸಭಾ ವತಿಯಿಂದ ಕಾಳಿಕಾ ಕಮಟೇಶ್ವರ ದೇವಸ್ಥಾನದಲ್ಲಿ ಪೂಜೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.