ದೊಡ್ಡಬಳ್ಳಾಪುರ: ತಾಲ್ಲೂಕು ಪಂಚಾಯಿತಿ ನೂತನ ಪ್ರಭಾರ ಅಧ್ಯಕ್ಷೆಯಾಗಿ ಯಶೋದಮ್ಮ ಶಿವಕುಮಾರ್ ಬುಧವಾರ ಅಧಿಕಾರ ಸ್ವೀಕರಿಸಿದರು.
ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಮುರುಡಯ್ಯ ಅವರು ಅಧಿಕಾರ ವಹಿಸಿಕೊಟ್ಟರು. ಸಕ್ಕರೆಗೊಲ್ಲಹಳ್ಳಿ ಕ್ಷೇತ್ರದಿಂದ ಯಶೋದಮ್ಮ ಶಿವಕುಮಾರ್ ಆಯ್ಕೆಯಾಗಿದ್ದಾರೆ.
ಯಶೋದಮ್ಮ ಮಾತನಾಡಿ, ‘ಶಾಸಕರು ಹಾಗೂ ವರಿಷ್ಠರು ನನ್ನ ಮೇಲೆ ನಂಬಿಕೆಯಿಟ್ಟು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ. ಅಧಿಕಾರ ಶಾಶ್ವತ ಅಲ್ಲ. ಇದ್ದಷ್ಟು ದಿನ ಪ್ರಾಮಾಣಿಕವಾಗಿ ಕೆಲಸ ಮಾಡಿ ಜನರ ನಂಬಿಕೆ ಉಳಿಸಿಕೊಳ್ಳುವಂತಹ ಕೆಲಸ ಮಾಡುತ್ತೇನೆ’ ಎಂದರು.
ಪ್ರಭಾರ ಅಧ್ಯಕ್ಷರನ್ನು ಸದಸ್ಯರಾದ ಹಸನಘಟ್ಟ ರವಿ, ನಾರಾಯಣಗೌಡ, ಮುಖಂಡರಾದ ರಮೇಶ್, ಹರೀಶ್‌ಕುಮಾರ್, ಅಬ್ದುಲ್ ವಹೀದ್, ಪ್ರೇಮ್‌ದಾಸ್ ಅಭಿನಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.