ADVERTISEMENT

ಅಂಗವಿಕಲರು ಸಂಘಟಿತರಾದರೆ ಸೌಲಭ್ಯ- ಮಂಜುಳಾ

​ಪ್ರಜಾವಾಣಿ ವಾರ್ತೆ
Published 19 ಜನವರಿ 2012, 8:25 IST
Last Updated 19 ಜನವರಿ 2012, 8:25 IST

ಶಿರಸಿ: ರಾಜ್ಯದಲ್ಲಿರುವ ಅಂಗವಿಕಲರು ಸಂಘಟನೆಯಾದರೆ ಮಾತ್ರ ಸರಕಾರದ ಯೋಜನೆಗಳ ಸಂಪೂರ್ಣ ಸವಲತ್ತು ಪಡೆಯಲು ಸಾಧ್ಯವಾಗುತ್ತದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ  ಮಂಜುಳಾ ಹೇಳಿದರು.

ಅವರು ಬುಧವಾರ ನಗರದ ಅಜಿತ ಮನೋಚೇತನ ಟ್ರಸ್ಟ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಂಗವಿಕಲರಿಗೆ ಗುರುತಿನ ಚೀಟಿ ವಿತರಿಸಿ ಮಾತನಾಡಿ ದರು.

ಉತ್ತರ ಕನ್ನಡ ಜಿಲ್ಲೆಯಲ್ಲಿ 23 ಸಾವಿರ ಅಂಗವಿಕಲರು ಇರುವುದು ಸರ್ಕಾರಕ್ಕೆ ಹಾಗೂ ಸಮಾಜಕ್ಕೆ ಒಂದು ಸವಾಲಾಗಿದೆ. ರಾಜ್ಯದಲ್ಲಿರುವ ವಿಕಲ ಚೇತನರು ಸಂಘಟನಾತ್ಮಕವಾಗಿ ಸರ್ಕಾ ರದ ಮೇಲೆ ಒತ್ತಡ ಹಾಕಿ ಯೋಜನೆ ರಚಿಸುವಾಗ ಅಂಗವಿಕಲರಿಗೆ ಆದ್ಯತೆ ದೊರೆಯುವಂತೆ ಆಗಬೇಕು ಎಂದರು.

ಅಂಗವಿಕಲರ ಕಾರ್ಯ ದೇವರ ಕಾರ್ಯ ಎಂದು ತಿಳಿಯಬೇಕು. ಸಾಮಾ ಜಿಕ ಮಾನವೀಯ ಬಾಂಧವ್ಯ ಅಂಗವಿಕ ಲರಿಗೆ ದೊರೆಯಬೇಕು ಮತ್ತು ಪೋಷಕ ರಿಗೆ ಮನೋಬಲ ಕೊಡುವ ವಾತಾ ವರಣ ಇರಬೇಕು ಎಂದು ಅವರು ಹೇಳಿದರು.

`ಕಾಲೇಜ್ ಕ್ಯಾಂಪಸ್‌ನಲ್ಲಿ ಜಾಗೃತಿ ಮೂಡಿಸಲು ಆಯೋಗ ಯೋಜನೆ ಹಾಕಿಕೊಂಡಿದ್ದು, ಬೆಂಗಳೂರಿನಲ್ಲಿ ಮೊದಲ ಕಾರ್ಯಾ ಗಾರ ನಡೆಸಲಾ ಗಿದೆ. ನಾವು ನಾಗರಿಕತೆ ಯಲ್ಲಿ ಬೆಳೆಯು ತ್ತಿದ್ದೇವೆ. ಜೊತೆಗೆ ಸಾಮಾಜಿಕ ಸಮಸ್ಯೆ ಸಹ ಬೆಳೆಯುತ್ತಿದೆ. ಸಮಾಜ ಸೇವೆ ಮಾಡುವವರ ಸಂಖ್ಯೆ ಹೆಚ್ಚಳವಾಗ ಬೇಕಾಗಿದೆ~ ಎಂದು ಅವರು ಹೇಳಿದರು.  

ಕಾರ್ಯಕ್ರಮದಲ್ಲಿ ಅಂಗವಿಕಲರಿಗೆ ಸಾಧನ ಸಲಕರಣೆ ವಿತರಿಸಿ ಮಾತ ನಾಡಿದ ಹಿಂದು ಸೇವಾ ಪ್ರತಿಷ್ಠಾನದ ನಿರ್ದೇಶಕ ಶ್ರೀಧರ ಸಾಗರ, ` ಅಂಗವಿಕಲರು ಸಾಮಾನ್ಯರಂತೆ ಸಾಧನೆ ಮಾಡುತ್ತಿದ್ದಾರೆ. ಆದರೆ ಅವರಿಗೆ ಕೆಲವು ಸೇವೆಯ ಅಗತ್ಯ ಇರುತ್ತದೆ. ಸೇವೆ ಯನ್ನು ವೃತ್ತಿಯಾಗಿ ಮಾಡುವುದಕ್ಕಿಂತ ವ್ರತವಾಗಿ ಮಾಡಬೇಕು. ನಿಸ್ಪಹ ಹಾಗೂ ನಿಸ್ವಾರ್ಥ ಭಾವದಿಂದ ಮಾಡ ಬೇಕು. ಸೇವೆಗಾಗಿ ಬದುಕು ಆಗಬೇಕು ಆದರೆ ಇಂದು ಬದುಕಿಗಾಗಿ ಸೇವೆ ಎಂಬಂತಾ ಗಿದೆ~ ಎಂದರು.

ಕಾರ್ಯಕ್ರಮದಲ್ಲಿ  ಅಂಗವಿಕಲರಿಗೆ ಸಾಧನ ಸಲಕರಣೆ ವಿತರಿಸಲಾಯಿತು.
ಈ ಸಂದರ್ಭದಲ್ಲಿ 15 ವರ್ಷ ಗಳಿಂದ  ಅಂಗವಿಕಲರ ಸೇವೆ ಮಾಡುತ್ತಿ ರುವ ಪದ್ಮಾ ಆಚಾರಿ ಅವರನ್ನು ಸನ್ಮಾನಿಸಲಾಯಿತು.

   ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷ ಅನಂತ ಅಶೀಸರ, ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಹೆಗಡೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಆರ್.ಜೆ.ಜೋಶಿ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಸಿ.ಎನ್.ಹೊಳೆ ಹೊಸೂರು, ಮಹಿಳಾ ಆಯೋಗದ ಸದಸ್ಯೆ ಗಾಯತ್ರಿ,  ತಾಲ್ಲೂಕು ಪಂಚಾ ಯಿತಿ ಅಧ್ಯಕ್ಷೆ ಸುಮಂಗಲಾ ಭಟ್ಟ, ನಗರಸಭೆ ಅಧ್ಯಕ್ಷ ರವಿ ಚಂದಾವರ, ಉಪಾಧ್ಯಕ್ಷೆ  ಸಂಧ್ಯಾ ಕುರ್ಡೇಕರ, ಮಾಜಿ ಶಾಸಕ ವಿವೇಕಾನಂದ ವೈದ್ಯ ಉಪಸ್ಥಿತರಿದ್ದರು. ಟ್ರಸ್ಟ್ ಅಧ್ಯಕ್ಷ ಉದಯ ಸ್ವಾದಿ ಸ್ವಾಗತಿಸಿದರು. ಪ್ರೊ. ರವಿ ನಾಯಕ  ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.