ADVERTISEMENT

ಆತ್ಮವಿಶ್ವಾಸ ಬೆಳೆಸಿಕೊಳ್ಳಲು ಸಲಹೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2011, 9:35 IST
Last Updated 7 ಫೆಬ್ರುವರಿ 2011, 9:35 IST

ರಾಮದುರ್ಗ: ವಿದ್ಯಾರ್ಥಿಗಳು ಸ್ವಾಭಿಮಾನ, ಆತ್ಮವಿಶ್ವಾಸದಂತಹ ಗುಣಗಳನ್ನು ಜೀವನದಲ್ಲಿ ಅಳವಡಿಸಿ ಕೊಂಡರೆ ಪ್ರತಿ ಹಂತದಲ್ಲೂ ಯಶಸ್ಸನ್ನು ಹೊಂದಲು ಸಾಧ್ಯ ಎಂದು ಬೆಳಗಾವಿ ವಿಭಾಗೀಯ ಉದ್ಯೋಗ ವಿನಿಮಯ ಕಾರ್ಯಾಲಯದ ನಿರ್ದೇಶಕಿ ಸಾಧನಾ ಪೋಟೆ ಹೇಳಿದರು.ಸಿ. ಎಸ್. ಬೆಂಬಳಗಿ   ಕಾಲೇಜಿನ ವಿದ್ಯಾರ್ಥಿನಿಯರ ಸಂಘದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ವಿದ್ಯಾರ್ಥಿಗಳು ಯಶಸ್ಸಿಗಾಗಿ ಅಡ್ಡದಾರಿ ಕೈಬಿಟ್ಟು ಸರಿಯಾದ ದಾರಿಯಲ್ಲಿ ಮುನ್ನಡೆದರೆ ಉತ್ತಮ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಅವರು ಅಭಿಪ್ರಾಯಪಟ್ಟರು.

ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಅರ್ಹತೆಯ ಜೊತೆಗೆ ಸಾಮಾನ್ಯ ಜ್ಞಾನ, ಭಾಷಾ ಜ್ಞಾನ, ಶಿಸ್ತು, ಸಮಯ ಪ್ರಜ್ಞೆ, ಸಂವಹನ ಕೌಶಲ, ನೈತಿಕ ಮೌಲ್ಯಗನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.ವಿದ್ಯಾರ್ಥಿಗಳು ಸತತ ಅಧ್ಯಯನ, ನಿರ್ದಿಷ್ಟವಾದ ಗುರಿ ಮತ್ತು ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳುತ್ತ ಜೀವನದಲ್ಲಿ ಉನ್ನತವಾದ ಯಶಸ್ಸನ್ನು ಹೊಂದಲು ಅಧ್ಯಕ್ಷತೆ ವಹಿಸಿದ್ದ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಪಿ. ಎಂ. ಜಗತಾಪ ಪ್ರೇರೇಪಿಸಿದರು.

ವಿದ್ಯಾ ಪ್ರಸಾರಕ ಸಮಿತಿ ಕಾರ್ಯದರ್ಶಿ ಪಿ. ಎಲ್. ದೊಡಮನಿ, ಪ್ರೊ. ವೆಂಕಟೇಶ ಹುಣಶೀಕಟ್ಟಿ, ಪ್ರೊ. ಎಸ್. ಬಿ. ಕಟ್ನೂರ ವೇದಿಕೆ ಮೇಲಿದ್ದರು.ಪ್ರಾಚಾರ್ಯೆ ವಿ.ಎಸ್. ಜೋಶಿ ಸ್ವಾಗತಿಸಿದರು. ಪ್ರೊ.ಸಪ್ನಾ ಹಲ್ಯಾಳ ಪರಿಚಯಿಸಿದರು. ರಾಖಿ ರಾಠಿ ಸಂದೇಶ ವಾಚಿಸಿದರು. ಮೀನಾಕ್ಷಿ ಕೊಣ್ಣೂರ ಮತ್ತು ದಾನೇಶ್ವರಿ ಮಲ್ಲಾಡದವರ  ನಿರೂಪಿಸಿದರು. ಗಾಯತ್ರಿ ಲಾಹೋಟಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.