ADVERTISEMENT

ಇಂಡಿಯಾ ಬುಕ್ನಲ್ಲಿ ಮೊಯಿನ್ ಸಾಧನೆ ದಾಖಲು

​ಪ್ರಜಾವಾಣಿ ವಾರ್ತೆ
Published 21 ಜುಲೈ 2012, 7:35 IST
Last Updated 21 ಜುಲೈ 2012, 7:35 IST

ಬೆಳಗಾವಿ: ಬೆಳಗಾವಿ ಸ್ವಿಮ್ಮರ್ಸ್‌ ಕ್ಲಬ್ ಹಾಗೂ ಅಕ್ವೇರಿಯಸ್ ಸ್ವಿಮ್ ಕ್ಲಬ್‌ನ ಅಂಗವಿಕಲ ಈಜುಪಟು ಮೊಯಿನ್ ಜುನ್ನೀದಿ ಅವರ ಸಾಧನೆಯು `ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್~ ನಲ್ಲಿ ದಾಖಲಾಗಿದೆ.

ದೇಹದ ಎಲುಬುಗಳಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚು ಮುರಿತದ ಸಮಸ್ಯೆಯಿಂದ ಬಳಲುತ್ತಿರುವ ಮೊಯಿನ್ ಅವರು ದೇಶದ ವಿವಿಧೆಡೆ ಅಂಗವಿಕಲರಿಗಾಗಿ ನಡೆದ ರಾಷ್ಟ್ರ ಮಟ್ಟದ ಸ್ವಿಮ್ಮಿಂಗ್ ಚಾಂಪಿಯನ್‌ಷಿಪ್‌ನಲ್ಲಿ 4 ಚಿನ್ನದ ಪಕದ ಹಾಗೂ ಒಂದು ಬೆಳ್ಳಿ ಪದಕವನ್ನು ಗೆದ್ದು ಕೊಂಡಿದ್ದಾರೆ. ಇದೀಗ ಮೊಯಿಸ್‌ನ ಸಾಧನೆಯನ್ನು ಗುರುತಿಸಿ, ಇಂಡಿಯಾ ಬುಕ್ ಆಫ್ ರೆಕಾಡ್ಸ್ ಪ್ರಮಾಣ ಪತ್ರವನ್ನು ನೀಡಿ ಗೌರವಿಸಲಾಗಿದೆ.

`ಮೊಯಿನ್ ಅವರು ನೀರಿನಲ್ಲಿ ಸುಮಾರು ಒಂದು ಗಂಟೆಗಿಂತಲೂ ಹೆಚ್ಚು ಸಮಯ ತೇಲುವ ಸಾಮರ್ಥ್ಯ ವನ್ನು ಹೊಂದಿದ್ದಾರೆ. ಸುಮಾರು 250 ಮೀಟರ್ ದೂರ ಈಜುತ್ತಾರೆ. ಇವರ ಎಲುಬುಗಳು ಅತಿ ಮೃದುವಾಗಿದ್ದು, ಅಲ್ಲಲ್ಲಿ ಮುರಿತಕ್ಕೆ ಒಳಗಾಗಿದೆ~ ಎಂದು ತರಬೇತುದಾರ ಉಮೇಶ ಕಲಘಟಗಿ ತಿಳಿಸಿದರು.

ಹದಿನಾಲ್ಕು ವರ್ಷದ ಮೊಯಿನ್ ಅವರು ಮುಸ್ತಾಕ್ ಹಾಗೂ ಕೌಸರ್ ಅವರ ಪುತ್ರರಾಗಿದ್ದಾರೆ. ಬೆಳಗಾವಿಯ ರೋಟರಿ ಕಾರ್ಪೊರೇಶನ್ ಸ್ಪೋರ್ಟ್ಸ್ ಅಕಾಡೆಮಿಯ ಈಜುಕೊಳದಲ್ಲಿ ಉಮೇಶ ಕಲಘಟಗಿ, ಸುಧೀರ ಕುಸಾನೆ, ಪ್ರಸಾದ ತೆಂಡೊಲ್ಕರ್, ಆನಂದ ಪಾಟೀಲ, ಕಲ್ಲಪ್ಪ ಪಾಟೀಲ ಅವರಿಂದ ಮೊಯಿನ್ ತರಬೇತಿ ಪಡೆದುಕೊಂಡಿದ್ದಾರೆ.

ಮೊಯಿನ್‌ಗೆ ಅವಿನಾಶ ಪೋತದಾರ, ಸುರೇಶ ಹುಂದ್ರೆ, ಮಾನೆಕ್ ಕಪಾಡಿಯಾ, ಲತಾ ಕಿತ್ತೂರ, ಬಸವರಾಜ ವಿಭೂತಿ ಅವರು ಸಹಕಾರ ನೀಡಿದ್ದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.