ADVERTISEMENT

ಈ ಶತಮಾನ ಸಂಶೋಧನೆ ಯುಗ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2012, 10:45 IST
Last Updated 25 ಫೆಬ್ರುವರಿ 2012, 10:45 IST

ಬೆಳಗಾವಿ: “ಇಪ್ಪತ್ತೊಂದನೆಯ ಶತಮಾನ ಹೊಸ ಹೊಸ ಅನ್ವೇಷಣೆಗಳ ಶತಮಾನ. ನಮ್ಮಲ್ಲಿ ಹುಟ್ಟುವ ಕಲ್ಪನೆಗಳು, ಯೋಜನೆಗಳಿಗೆ ಒಂದು ವಸ್ತು ಅಥವಾ ಸೇವೆಯ ರೂಪ ನೀಡಲು ನಾವು ಮುಂದಾಗಬೇಕು” ಎಂದು ಬೆಂಗಳೂರಿನ ಕ್ಯಾಟಲೈನ್ ಇನ್ನೋವೇಶನ್ ಸಂಸ್ಥೆಯ ಅಧ್ಯಕ್ಷ ಡಾ. ವಿನಯ್ ಧಾಬೋಲ್ಕರ್ ಸಲಹೆ ನೀಡಿದರು.

ನಗರದ  ಕರ್ನಾಟಕ ಕಾನೂನು ಸಂಸ್ಥೆಯ ಗೋಗಟೆ ತಾಂತ್ರಿಕ ಕಾಲೇಜಿನ ಕಂಪ್ಯೂಟರ್ ಅಪ್ಲಿಕೇಶನ್ಸ್ ವಿಭಾಗದ ವತಿಯಿಂದ ಶುಕ್ರವಾರ ಆಯೋಜಿಸಿದ್ದ `ಕ್ವೆಸ್ಟರ್ಸ್‌-12~ ಮಾಹಿತಿ ತಂತ್ರಜ್ಞಾನ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

`ನಮ್ಮ ಮನಸ್ಸಿನಲ್ಲಿ ಪ್ರತಿದಿನ, ಪ್ರತಿಕ್ಷಣ ನೂರಾರು ಯೋಜನೆಗಳು ಮೂಡುತ್ತವೆ. ಅವುಗಳನ್ನು ಅಲ್ಲಿಗೆ ಬಿಡದೇ ಸಾಕಾರಗೊಳಿಸಲು ಚಿಂತಿಸಬೇಕು. ನಮ್ಮ ಯೋಜನೆಗಳನ್ನು ಜಾರಿಗೆ ತಂದರೆ ಅದರ ಗ್ರಾಹಕರು ಯಾರಾಗಬಹುದು ಎಂದು ಯೋಚಿಸುವ ಗಣ ಬೆಳೆಸಿಕೊಳ್ಳಬೇಕು~ ಎಂದು ಅವರು ಹೇಳಿದರು.

`ಅತಿ ಕಡಿಮೆ ವೆಚ್ಚದಲ್ಲಿ ನಮ್ಮ ಯೋಜನೆಗಳನ್ನು ಪ್ರಾಯೋಗಿಕ ರೂಪದಲ್ಲಿ ಜಾರಿಗೆ ತಂದು ಪರಿಣಾಮಗಳನ್ನು ಅಭ್ಯಸಿಸಬೇಕು. ಇದರಿಂದ ನಮಗೆ ಅನೇಕ ಮಹತ್ವದ ವಿಷಯಗಳ ಅರಿವು ಉಂಟಾಗುತ್ತದೆ. ಕಡಿಮೆ ವೆಚ್ಚದ ಪ್ರಯೋಗಗಳೇ ಹೊಸತನಕ್ಕೆ ನಾಂದಿ ಹಾಡುತ್ತವೆ~ ಎಂದು ಅವರು ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ಕೆಎಲ್‌ಎಸ್ ಚೇರಮನ್ ಎ.ಜಿ.ಕುಲಕರ್ಣಿ ಮಾತನಾಡಿ, ಇಂದು ಕೈಗಾರಿಕಾ ಕ್ಷೇತ್ರ ತನ್ನ ಉತ್ತುಂಗವನ್ನು ತಲುಪಿದೆ. ಹೊಸದನ್ನು ಅವಿಷ್ಕಾರ ಮಾಡಿ ಗ್ರಾಹಕರನ್ನು ಆರ್ಕಸುವವರೇ ಉದ್ಯಮದಲ್ಲಿ ಉಳಿಯಲು ಸಾಧ್ಯ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

`ಉತ್ತರ ಕರ್ನಾಟಕದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿ ಪ್ರಶಸ್ತಿ ಪಡೆದ `ಕಂಪ್ಯೂಎಡ್~ ಹಾಗು `ವಾಯವ್ಯ ಲ್ಯಾಬ್ಸ್~ ಸ್ಥಾಪಕರು ಜಿಐಟಿಯ ಹಳೆಯ ವಿದ್ಯಾರ್ಥಿಗಳು ಎಂಬುದು ನಮಗೆ ಹೆಮ್ಮೆಯ ವಿಷಯವಾಗಿದೆ~ ಎಂದರು.

ಎಂಸಿಎ ವಿಭಾಗದ ಮುಖ್ಯಸ್ಥ ಪ್ರೊ. ರಶ್ಮಿ ಜೋಗದಂಡ, ಎಂ.ಬಿ.ಕಪಿಲೇಶ್ವರಿ, ಪ್ರೊ. ಸ್ನೇಹಾ ಬಾಂದೇಕರ, ವಿದ್ಯಾರ್ಥಿ ಪ್ರತಿನಿಧಿ ಎನ್.ಆರ್.ದಲಾಲ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಗತಿ ಕುರಣೆ ಪ್ರಥಮ
ಬೆಂಗಳೂರಿನಲ್ಲಿ ಇತ್ತೀಚೆಗೆ ಜರುಗಿದ ಅಂತರರಾಷ್ಟ್ರೀಯ ಯೋಗಾಸನ ಮತ್ತು  ಟೈಟಲ್ ಚಾಂಪಿಯನ್‌ಷಿಪ್ ಸ್ಪರ್ಧೆಯಲ್ಲಿ ನಗರದ ಲವ್‌ಡೆಲ್ ಸೆಂಟ್ರಲ್ ಶಾಲೆಯ ವಿದ್ಯಾರ್ಥಿನಿ ಪ್ರಗತಿ ಕುರಣೆ ಪ್ರಥಮ ಸ್ಥಾನ ಪಡೆದಿದ್ದಾರೆ.
 ಅವರಿಗೆ ಬಂಗಾರದ ಪದಕ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.