ADVERTISEMENT

ಏಣಗಿ ಬಾಳಪ್ಪ ಹೆಸರಿನಲ್ಲಿ ಟ್ರಸ್ಟ್ ಸ್ಥಾಪನೆಗೆ ಸಾಹಿತಿಗಳ ಪಟ್ಟು

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2017, 4:23 IST
Last Updated 22 ಅಕ್ಟೋಬರ್ 2017, 4:23 IST
ಏಣಗಿ ಬಾಳಪ್ಪ
ಏಣಗಿ ಬಾಳಪ್ಪ   

ಬೆಳಗಾವಿ: ಕವಿ ಡಾ.ದ.ರಾ.ಬೇಂದ್ರೆ ಸ್ಮಾರಕ ಟ್ರಸ್ಟ್ ಮಾದರಿಯಲ್ಲಿ ರಂಗಭೂಮಿಯ ದಿಗ್ಗಜ ಏಣಗಿ ಬಾಳಪ್ಪ ಸ್ಮಾರಕ ಟ್ರಸ್ಟ್ ರಚಿಸಬೇಕೆಂದು ಜಿಲ್ಲೆಯ ಸಾಹಿತಿಗಳು, ಕಲಾವಿದರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಏಣಗಿ ಬಾಳಪ್ಪ ನಿಧನರಾಗಿ ಎರಡು ತಿಂಗಳು ಕಳೆದಿವೆ. ಇನ್ನೂ ಟ್ರಸ್ಟ್‌ ಸ್ಥಾಪನೆ ಸಂಬಂಧ ನಿರ್ಧರಿಸಿಲ್ಲ. ಹೀಗಾಗಿ ನಗರದಲ್ಲಿ ಇತ್ತೀಚೆಗೆ ಸಭೆ ಸೇರಿದ ಪ್ರಮುಖ ಸಾಹಿತಿಗಳು, ಕಲಾವಿದರು ಟ್ರಸ್ಟ್‌ ನಿರ್ಮಿಸುವಂತೆ ಮುಖ್ಯಮಂತ್ರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರನ್ನು ಕೋರಲು ತೀರ್ಮಾನಿಸಿದರು.

ಬಾಳಪ್ಪ ಅವರ ಹುಟ್ಟೂರು, ಸವದತ್ತಿ ತಾಲ್ಲೂಕಿನ ಏಣಗಿಯಲ್ಲಿ ವಸ್ತು ಸಂಗ್ರಹಾಲಯ ನಿರ್ಮಿಸಬೇಕು. ರಂಗಮಂದಿರ ನಿರ್ಮಾಣ ಮಾಡಬೇಕು, ಟಿಳಕವಾಡಿಯ ಕಲಾಮಂದಿರಕ್ಕೆ ‘ಏಣಗಿ ಬಾಳಪ್ಪ ಕಲಾಮಂದಿರ’ ಎಂದು ನಾಮಕರಣ ಮಾಡಬೇಕು. ಇದಲ್ಲದೇ, ನಗರದ ವೃತ್ತವೊಂದಕ್ಕೆ ಅವರ ಹೆಸರು ಇಡಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು.

ADVERTISEMENT

ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಸರ್ಕಾರ ಹಾಗೂ ಮಹಾನಗರ ಪಾಲಿಕೆಯ ಗಮನಕ್ಕೆ ತರಲಾಗುವುದು ಎಂದು ಲೇಖಕ ಬಿ.ಎಸ್. ಗವಿಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.