ADVERTISEMENT

ಕಡಿಮೆ ಖರ್ಚಿನ ಬೆಳೆ ಬೆಳೆಯಿರಿ

​ಪ್ರಜಾವಾಣಿ ವಾರ್ತೆ
Published 13 ಜುಲೈ 2012, 9:15 IST
Last Updated 13 ಜುಲೈ 2012, 9:15 IST

ಚಿಕ್ಕೋಡಿ: ಕಡಿಮೆ ಆದಾಯ ನೀಡುವ ಬೆಳೆಗಳಿಗೆ ಪರ್ಯಾಯವಾಗಿ ಹೆಚ್ಚು ಇಳುವರಿ ಮತ್ತು ಆದಾಯ ನೀಡುವ ಬೆಳೆ ಬೆಳೆಯಬೇಕು ಎಂದು  ಎಂದು ತಹಸೀಲ್ದಾರ ರಾಜಶೇಖರ ಡಂಬಳ ಕರೆ ನೀಡಿದರು.

ಗುರುವಾರ ಪಟ್ಟಣದ ಪೊಲೀಸ್ ಸಮುದಾಯ ಭವನದಲ್ಲಿ ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾ ಖೆಗಳು ಜಂಟಿಯಾಗಿ ಹಮ್ಮಿಕೊಂಡಿದ್ದ ಸುವರ್ಣ ಭೂಮಿ ಯೋಜನೆಯಡಿ ಲಾಟರಿ ಮೂಲಕ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಹೆಚ್ಚಿನ ಇಳುವರಿ ನೀಡುವ ಬೆಳೆ ಯನ್ನು ಬೆಳೆಯುವಂತೆ ಕೃಷಿಕರನ್ನು ಉತ್ತೇಜಿಸಿ, ಉತ್ಪಾದಕತೆಯನ್ನು ಹೆಚ್ಚಿ ಸುವುದು ಮತ್ತು ಸುಧಾರಿತ ಕೃಷಿ ಯನ್ನು ಅಳವಡಿಸಿಕೊಂಡು ಜೀವನ ಮಟ್ಟವನ್ನು ಸುಧಾರಿಸಿಕೊಳ್ಳಲು ಪ್ರೇರಣೆ ನೀಡುವ ಉದ್ದೇಶದಿಂದ ಸರ್ಕಾರ ಜಾರಿಗೊಳಿಸಿರುವ ಸುವರ್ಣ ಭೂಮಿ ಯೋಜನೆಯನ್ನು ರೈತರು ಸದ್ವಿನಿಯೋಗ ಮಾಡಿಕೊಳ್ಳಬೇಕು ಎಂದರು.

ರೈತರು ಹೆಚ್ಚು ಇಳುವರಿ ನೀಡುವ ಎಣ್ಣೆಕಾಳು ಮತ್ತು ದ್ವಿದಳ ಧಾನ್ಯ ಗಳನ್ನು ಬೆಳೆಯುವಂತೆ ಹೇಳಿದರು.
ಸಹಾಯಕ ಕೃಷಿ ನಿರ್ದೇಶಕ ಡಾ.ಜಿ.ಬಿ.ಕಲ್ಯಾಣಿ ಮಾತನಾಡಿ, 2011-12ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿ ಆಯ್ಕೆಯಾಗದೇ ಉಳಿದಿರುವ ರೈತರನ್ನು 2012-13ನೇ ಸಾಲಿನಲ್ಲಿ ಆಯ್ಕೆ ಮಾಡಲಾಗುತ್ತಿದ್ದು, ಸಾಮಾನ್ಯ ವರ್ಗಕ್ಕೆ 1076, ಪರಿಶಿಷ್ಟ ವರ್ಗಕ್ಕೆ 262 ಮತ್ತು ಪರಿಶಿಷ್ಟ ಪಂಗಡದ 25 ಫಲಾನುಭವಿಗಳನ್ನು ಆಯ್ಕೆ ಮಾಡ ಲಾಗುತ್ತಿದೆ ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ      ಅಧಿಕಾರಿ ಎಂ.ಎಸ್.ಬಿರಾದಾರ ಪಾಟೀಲ, ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಟಿ.ಎಸ್.ಮೋರೆ, ತೋಟ ಗಾರಿಕೆ ಸಹಾಯಕ ನಿರ್ದೇಶಕ ಎಂ.ಎಸ್. ಹಿಂಡಿಹೊಳಿ, ಮೀನುಗಾರಿಕೆ ಸಹಾ ಯಕ ನಿರ್ದೇಶಕ ಸಂಜೀವ ಅರಕೇರಿ, ವಲಯ ಅರಣ್ಯ ಅಧಿಕಾರಿ ಆರ್.ಎಸ್. ಪಾಟೀಲ ಉಪಸ್ಥಿತರಿದ್ದರು.

ಅಧೀಕ್ಷಕ ಎಸ್.ಎಸ್.ಇನಾಮದಾರ ಸ್ವಾಗತಿಸಿ ದರು. ಕೃಷಿ ಅಧಿಕಾರಿ ಅಲ್ತಾಫ್ ಹುಸೇನ ನಿರೂಪಿಸಿದರು. ತಾಂತ್ರಿಕ ಅಧಿಕಾರಿ ಎಂ.ಸಿ.ಹಲ್ಯಾಳಕರ ವಂದಿಸಿದರು.

ಬೈಲಹೊಂಗಲ: ವಿಜಯೋತ್ಸವ
ಬೈಲಹೊಂಗಲ: ನೂತನ ಮುಖ್ಯ ಮಂತ್ರಿಯಾಗಿ ಜಗದೀಶ ಶೆಟ್ಟರ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆ ಯಲ್ಲಿ ಬಿಜೆಪಿ ಕಾರ್ಯಕರ್ತರು ಗುರು ವಾರ ವಿಜಯೋತ್ಸವ ಆಚರಿಸಿದರು.ತಾಲ್ಲೂಕು ಅಧ್ಯಕ್ಷ ನಿಂಗಪ್ಪ ಚೌಡಣ್ಣವರ, ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ಗುರುಪಾದ ಕಳ್ಳಿ, ಪುರಸಭೆ ಸದಸ್ಯ ಗುರು ಮೆಟಗುಡ್ಡ, ನಗರ ಅಧ್ಯಕ್ಷ ಮಹಾಂತೇಶ ಅಕ್ಕಿ, ರವಿ ಕಾಜಗಾರ, ಮಹಾಂತೇಶ ಹೊಸಮನಿ ಹಾಗೂ ಕಾರ್ಯಕರ್ತರು ಪಾಲ್ಗೊಂ ಡಿದ್ದರು.

ಉತ್ತರ ಕರ್ನಾಟಕದ ಅನು ಭವಿ ರಾಜಕಾರಣಿ ರಾಜ್ಯದ ನೂತನ ಮುಖ್ಯಮಂತ್ರಿಯಾಗಿದ್ದು, ಉತ್ತರ ಕರ್ನಾಟಕದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ಸಿಗಲಿದೆ ಎಂದು ಕಾರ್ಯಕರ್ತ ಸಾತಪ್ಪ ಫರಾಳಶೆಟ್ಟರ ಸಂತೋಷ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.