ADVERTISEMENT

ಕಿತ್ತೂರು ರಾಣಿ ಚನ್ನಮ್ಮ ಕನ್ನಡ ನಾಡಿನ ಹೆಮ್ಮೆ’

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2017, 5:23 IST
Last Updated 21 ಅಕ್ಟೋಬರ್ 2017, 5:23 IST

ರಾಯಬಾಗ: ‘ಬ್ರಿಟಿಷರ ವಿರುದ್ಧ ಪ್ರಾಣದ ಹಂಗು ತೊರೆದು ಹೋರಾಡಿ ಕನ್ನಡದ ಕಹಳೆ ಮೊಳಗಿಸಿದ ವೀರರಾಣಿ ಕಿತ್ತೂರು ಚನ್ನಮ್ಮ ಧೀಮಂತ ಮಹಿಳೆ ಹಾಗೂ ನಮ್ಮ ನಾಡಿನ ಕಣ್ಮಣಿ ಎಂಬುದು ಕನ್ನಡಿಗರಿಗೆ ಹೆಮ್ಮೆ’ ಎಂದು ವಿಧಾನ ಪರಿಷತ್ ಸದಸ್ಯ ಅಧ್ಯಕ್ಷ ವಿವೇಕರಾವ ಪಾಟೀಲ ಹೇಳಿದರು.

ಶುಕ್ರವಾರ ಕಿತ್ತೂರು ಚನ್ನಮ್ಮನ ವೀರ ಜ್ಯೋತಿ ಪಟ್ಟಣಕ್ಕೆ ಬಂದ ಸಂದರ್ಭದಲ್ಲಿ ಲೋಕೊಪಯೋಗಿ ಪ್ರವಾಸಿ ಮಂದಿರದ ಹತ್ತಿರ ವೀರ ಜ್ಯೋತಿಗೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

‘ಇಂದಿನ ಮಹಿಳೆಯರು ತಮ್ಮನ್ನು ತಾವು ಕಾಪಾಡಿಕೊಳ್ಳುವಷ್ಟರ ಮಟ್ಟಿಗಾದರೂ ಧೈರ್ಯವಂತರಾಬೇಕು. ಶೂರರು, ಧೀರರು, ನಾಡಿಗಾಗಿ ತಮ್ಮ ಜೀವ ಕಳೆದುಕೊಂಡವರು ಕೇವಲ ಚರಿತ್ರೆಯ ಪುಟಗಳಲ್ಲಿ ಮಾತ್ರ ಉಳಿಯಬಾರದು. ಆ ನಿಟ್ಟಿನಲ್ಲಿ ಕಿತ್ತೂರು ಚನ್ನಮ್ಮನ ಸಾಹಸಗಾಥೆಯನ್ನು ಸಾರಬೇಕು’ ಎಂದು ಅವರು ಹೇಳಿದರು.

ADVERTISEMENT

ಈ ಸಂದರ್ಭದಲ್ಲಿ ಗ್ರೇಡ್‌-2 ತಹಶೀಲ್‌ದಾರ್‌ ಡಿ.ಎಸ್.ಜಮಾದಾರ, ಡಿಸಿಸಿ ಬ್ಯಾಂಕ್ ನಿರ್ದೇಶಕ ಅಪ್ಪಾಸಾಹೇಬ ಕುಲಗುಡೆ, ಡಿ.ಎಸ್.ಡಿಗ್ರಜ, ಪಟ್ಟಣಪ ಂಚಾಯ್ತಿ ಸದಸ್ಯ ರಾದ ಗಣೇಶ ಕಾಂಬಳೆ, ಚಂದ್ರಕಾಂತ ನಾವಿ, ರವಿ ತ ರಾಳ, ಕಲ್ಲಪ್ಪ ಹಳಿಂಗಳಿ, ಜಾ ವೀದ ಮೋಮಿನ, ಹಣಮಂತ ಸಾನೆ, ಜುಬೇರ ಮುಲ್ಲಾ, ಬೀರಪ್ಪ ಕುರಿ, ರಾಜು ಪೂಜಾರಿ, ರಸೂಲ ಮೋಮಿನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.