ADVERTISEMENT

ಕೆಎಲ್‌ಇ ಆಸ್ಪತ್ರೆ ನರ್ಸ್‌ಗಳ ಧರಣಿ ನಾಳೆಯಿಂದ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2012, 9:40 IST
Last Updated 7 ಅಕ್ಟೋಬರ್ 2012, 9:40 IST

ಬೆಳಗಾವಿ: ಕೆಎಲ್‌ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ನರ್ಸ್‌ಗಳ ವರ್ಗಾವಣೆಯನ್ನು ತಕ್ಷಣವೇ ರದ್ದುಗೊಳಿಸುವುದು ಸೇರಿದಂತೆ ಕೆಲವು ಬೇಡಿಕೆಗಳ ಈಡೇರಿಕೆಗಾಗಿ ಅಕ್ಟೋಬರ್ 8ರಿಂದ ಆಸ್ಪತ್ರೆಯ ಎದುರು ನರ್ಸ್‌ಗಳು ಧರಣಿ ನಡೆಸಲಿದ್ದಾರೆ ಎಂದು ಕೆಎಲ್‌ಇ ಆಸ್ಪತ್ರೆಯ ನೌಕರರ ಒಕ್ಕೂಟದ ಅಧ್ಯಕ್ಷ ವಿ.ಪಿ. ಕುಲಕರ್ಣಿ ತಿಳಿಸಿದರು.

ನಗರದಲ್ಲಿ ಶನಿವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, `ಕೆಎಲ್‌ಇ ಆಸ್ಪತ್ರೆಯಲ್ಲಿ ನರ್ಸ್‌ಗಳಾಗಿ ಸೇವೆ ಸಲ್ಲಿಸುತ್ತಿರುವವರಿಗೆ ವೇತನದಲ್ಲಿ ಅನ್ಯಾಯವಾಗುತ್ತಿದ್ದವು. ಹೀಗಾಗಿ ಇವುಗಳ ಬಗ್ಗೆ ಚರ್ಚಿಸುವ ಸಲುವಾಗಿ ಕೆಎಲ್‌ಇ ನೌಕರರ ಸಂಘಟನೆಯನ್ನು ರಚಿಸಲು ಮುಂದಾಗಿದ್ದರು. ಇದರಿಂದ ಸಿಟ್ಟಿಗೆದ್ದ ಆಡಳಿತ ಮಂಡಳಿಯು 10 ನರ್ಸ್‌ಗಳನ್ನು ಬೇರೆ ಕಡೆಗೆ ವರ್ಗಾವಣೆ ಮಾಡುವ ಮೂಲಕ ಸಂಘಟನೆಯನ್ನು ಹತ್ತಿಕ್ಕಲು ಯತ್ನಿಸಿದೆ.
 
ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ ವರ್ಗಾವಣೆಗೊಂಡ ನರ್ಸ್‌ಗಳು ಅನಿರ್ದಿಷ್ಟಾವಧಿ ಧರಣಿಯನ್ನು ನಡೆಸಲಿದ್ದಾರೆ. ಇವರಿಗೆ ಉಳಿದ ನರ್ಸ್‌ಗಳು ಬೆಂಬಲ ಸೂಚಿಸಿ ಕೆಲಸ ಮುಗಿದ ಬಳಿಕ ಧರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ~ ಎಂದು ತಿಳಿಸಿದರು.

`ಆಸ್ಪತ್ರೆಯಲ್ಲಿ ಕೌಶಲ ನೌಕರ ರಾಗಿರುವ ನರ್ಸ್‌ಗಳಿಗೆ ಇತರ ಪ್ರಮುಖ ಖಾಸಗಿ ಆಸ್ಪತ್ರೆಗಳಿಗೆ ಹೋಲಿಸಿದರೆ ವೇತನ ತೀರಾ ಕಡಿಮೆ ನೀಡಲಾಗುತ್ತಿದೆ. ಸರ್ಕಾರಿ ಆಸ್ಪ ತ್ರೆಗಳಲ್ಲಿ ನೀಡುತ್ತಿರುವಂತೆ ವೇತನ ಶ್ರೇಣಿ ಹಾಗೂ ಇತರ ಸೌಲಭ್ಯಗಳನ್ನು ಒದಗಿಸುವಂತೆ ಆಡಳಿತ ಮಂಡಳಿಯನ್ನು ಕೇಳಿಕೊಂಡಿದ್ದೆವು. ಎಂದು ಆರೋಪಿಸಿದರು.  ಸಿಐಟಿಯು ರಾಜ್ಯ ಕಾರ್ಯದರ್ಶಿ ಪ್ರಸನ್ನ ಕುಮಾರ, `ಸಂಘಟನೆ ರಚಿಸಿಕೊಳ್ಳಲು ಸಂವಿಧಾನವು ಪ್ರತಿ ಯೊಬ್ಬರಿಗೂ ಹಕ್ಕು ನೀಡಿದೆ.

ಹೀಗಿದ್ದಾಗ ಸಂಘಟನೆಯನ್ನು ನಿರ್ಮಿ ಸುತ್ತಿರುವ ನರ್ಸ್‌ಗಳನ್ನು ವರ್ಗಾವಣೆ ಮಾಡಿರುವುದು `ಕೈಗಾರಿಕಾ ವಿವಾದ ಕಾಯ್ದೆ-1947~ರ ಪ್ರಕಾರ ಶಿಕ್ಷಾರ್ಹ ಅಪರಾಧ. ಕಾನೂನು ರೂಪಿಸುವ ರಾಜ್ಯಸಭೆ ಸದಸ್ಯರಾದ ಪ್ರಭಾಕರ ಕೋರೆಯವರ ಆಸ್ಪತ್ರೆಯಲ್ಲೇ ಹೀಗೆ ನಡೆಯುತ್ತಿರುವುದು ವಿಷಾದಕರ ಸಂಗತಿ~ ಎಂದು ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.