ADVERTISEMENT

ಗೋಕಾಕ: ಸಾಯಿ ಮಂದಿರ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2012, 6:00 IST
Last Updated 1 ಅಕ್ಟೋಬರ್ 2012, 6:00 IST

ಗೋಕಾಕ: `ಧಾರ್ಮಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರಿಂದ ಮಾನಸಿಕ ನೆಮ್ಮದಿಯೊಂದಿಗೆ ಶಾಂತಿಯುತವಾದ ಸುಂದರ ಸಮಾಜ ನಿರ್ಮಾಣವಾಗುತ್ತದೆ ಎಂದು ಪೌರಾಡಳಿತ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ಗುರುವಾರ ಇಲ್ಲಿಯ ಎಲ್.ಇ.ಟಿ. ಕಾಲೇಜ್ ಹತ್ತಿರ ನೂತನವಾಗಿ ನಿರ್ಮಿಸಿರುವ ಸಾಯಿ ಮಂದಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಧಾರ್ಮಿಕ ಕ್ಷೇತ್ರದಲ್ಲಿ ತನ್ನದೇಯಾದ ವಿಶಿಷ್ಟ ಕೊಡುಗೆ ನೀಡಿರುವ ಭಾರತ ದೇಶದಲ್ಲಿ 17 ಶಕ್ತಿ ಪೀಠಗಳಿವೆ. ಕರ್ನಾಟಕದಲ್ಲಿ ಚಾಮುಂಡಿ ಪೀಠವಿದೆ. ದೇವರಿಂದಲೇ ಸುಖ, ಶಾಂತಿ, ನೆಮ್ಮದಿಯಿಂದ ಬದುಕುತ್ತಿದ್ದೇವೆ. ದೇವರನ್ನು ನಂಬಿ ಬದುಕಿದರೆ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದರು.

ಸಾಯಿಬಾಬಾ ನಂಬಿದವರನ್ನು ಕೈಬಿಡುವುದಿಲ್ಲ. ಶ್ರದ್ಧೆ, ಭಕ್ತಿ ಪೂರ್ವಕವಾಗಿ ನಾವು ದೇವರಿಗೆ ಪೂಜೆ ಸಲ್ಲಿಸುವ ಮೂಲಕ ನಮ್ಮ ಧಾರ್ಮಿಕ ಪರಂಪರೆ ಹಾಗೂ ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯಬೇಕಾದ ಅಗತ್ಯವಿದೆ. ಪವಾಡಗಳಿಗೆ ಹೆಸರುವಾಸಿಯಾದ ಶಿರಡಿ ಸಾಯಿಬಾಬಾ ಅವರ ದೇವಸ್ಥಾನವನ್ನು ನಗರದಲ್ಲಿ ಸುಂದರವಾದ ನಿರ್ಮಿಸುವ ಮೂಲಕ ಸೇವಾ ಟ್ರಸ್ಟದವರು ಉತ್ತಮ ಧಾರ್ಮಿಕ ಕಾರ್ಯ ಮಾಡಿದ್ದಾರೆ ಎಂದು ಶ್ಲಾಘಿಸಿದರು.

ಬೆಳಗಾವಿ ಸಂಸದ ಸುರೇಶ ಅಂಗಡಿ ಸಾಯಿ ಮೂರ್ತಿಯ ಅನಾವರಣಗೊಳಿಸಿದರು. ಪ್ರಭಾಶುಗರ ಚೇರಮನ್ ಲಖನ್ ಜಾರಕಿಹೊಳಿ ಅಧ್ಯಕ್ಷತೆ ವಹಿಸಿದ್ದರು.  ಸಾಯಿದಾಸ ಶಿರಡಿಯ ಗುರುನಾಥಜಿ ಮಹಾರಾಜ ಸಾನ್ನಿಧ್ಯ ವಹಿಸಿದ್ದರು. ನಗರಾಧ್ಯಕ್ಷೆ ಸಾವಿತ್ರಿ ಕಂಬಳಿ, ಕಮಿಟಿ ಅಧ್ಯಕ್ಷ ಬಸವರಾಜ ಉಣ್ಣಿ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.