ಬೈಲಹೊಂಗಲ: ವೀರರಾಣಿ ಚನ್ನಮ್ಮಾಜಿಯ ಶೂರತನ, ದೇಶಾಭಿಮಾನ ನಮಗೆಲ್ಲ ಸ್ಫೂರ್ತಿಯಾಗಿದೆ ಎಂದು ಶಿಕ್ಷಕಿ ಕಾಮತ ಹೇಳಿದರು. ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸಿದ ನಂತರ ಜಿಲ್ಲೆಯ ವಿವಿಧ ಸ್ಥಳಗಳ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಚನ್ನಮ್ಮಾ ಸಮಾಧಿಗೆ ಭೇಟಿ ನೀಡಿ ಹೂಮಾಲೆ ಅರ್ಪಿಸಿ ಮಾತನಾಡಿದರು.
ವಿಶ್ವ ಕನ್ನಡ ಸಮ್ಮೇಳನ ಬೇರೆ ಬೇರೆ ದೇಶಗಳಲ್ಲಿರುವ ಕನ್ನಡಿಗರು ಒಂದೇ ಕಡೆಗೆ ಸೇರಿ ಪರಸ್ಪರ ಸ್ನೇಹ ಸಂಬಂಧ ಬೆಳೆಸಿಕೊಳ್ಳಲು ಅನುಕೂಲವಾಗಿದ್ದು, ಕನ್ನಡ ನಾಡಿನ ಸಂಸ್ಕೃತಿಯ ಮೂಲಕ ಕನ್ನಡಿಗರ ಒಗ್ಗಟ್ಟಿಗೆ ಜೀವಂತ ಸಾಕ್ಷಿಯಾಗಿದ್ದು, ಚನ್ನಮ್ಮ, ಸಂಗೊಳ್ಳಿ ರಾಯಣ್ಣನ ಆದರ್ಶಗಳ ಸ್ಮರಣೆ ಹಾಗೂ ಪಾಲನೆ ಮಾಡುವ ಅಗತ್ಯವಿದೆ ಎಂದರು.
ಈ ಸಂದರ್ಭದಲ್ಲಿ ಚಿತ್ರಕಲಾ ಶಿಕ್ಷಕ ಶಿವಯೋಗಿ ಸಣ್ಣಮನಿ, ಶಂಕರ ಗಾವಡೆ, ಗಣೇಶ ದೇವಾಡಿಗ, ಸುನೀಲ ಕಾಂಬಳೆ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.