ADVERTISEMENT

ಧಾರವಾಡ ಆಸ್ಪತ್ರೆಗೆ ಪ್ರಕಾಶ್ ಬೆಳವಡಿ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2013, 9:52 IST
Last Updated 2 ಆಗಸ್ಟ್ 2013, 9:52 IST

ಸವದತ್ತಿ: ಗೃಹಬಂಧನದಿಂದ ಬಿಡು ಗಡೆಗೊಂಡ ತಾಲ್ಲೂಕಿನ ಹಿರೇಕುಂಬಿ ಗ್ರಾಮದ ಪ್ರಕಾಶ ಬೆಳವಡಿ ಅವರನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡದ ಮಾನಸಿಕ ಆಸ್ಪತ್ರೆಗೆ ಕಳಿಸಿಕೊಡಲಾಗಿದೆ ಎಂದು ತಹ ಶೀಲ್ದಾರ್ ಎಂ.ಎನ್. ಬನಸಿ  ತಿಳಿಸಿದರು.

ಜೂಜಾಟದ ಚಟಕ್ಕೆ ದಾಸನಾಗಿದ್ದ ಪ್ರಕಾಶ್, ಪ್ರತಿದಿನ ಕಂಡ ಕಂಡವರ ಹತ್ತಿರ ಹಣ ಕೇಳುವುದು, ಸಾಲ ಮಾಡುತ್ತಿದ್ದ. ಏಕೆ ಎಂದು ಪ್ರಶ್ನಿಸಿದರೆ ಮನ ಬಂದಂತೆ ಥಳಿಸುತ್ತಿದ್ದ ಎಂದು ಪ್ರಕಾಶನ ತಂದೆ ಈರಪ್ಪ ಬೆಳವಡಿ ಹೇಳಿದರು.

`ವಯಸ್ಸಾದ ತಂದೆ-ತಾಯಿ ಮೇಲೆ ಅಷ್ಟೇ ಅಲ್ಲ ತನ್ನ ಹೆಂಡತಿಗೂ ಬೇಕಾ ಬಿಟ್ಟಿ ತೊಂದರೆ ನೀಡುತ್ತಿದ್ದ, ಇದ ರಿಂದ ಅವಳು ಮನನೊಂದು ಮಗಳೊಂದಿಗೆ ತವರೂರಾದ ಹುಬ್ಬಳ್ಳಿ ತಾಲ್ಲೂಕಿನ ಬೊಮ್ಮ ಸಮುದ್ರಕ್ಕೆ ಹೋದಳು. ಅವರ ತಂದೆ ಶಿವಪ್ಪ ಮಲ್ಲನ್ನವರ ಮಗಳನ್ನು ಇರಿಸಿಕೊಂಡದ್ದಲ್ಲದೇ ಮೊಮ್ಮಗಳು ಲಕ್ಷ್ಮಿಯ ವಿವಾಹ ಮಾಡಿದ್ದರು ಎಂದು ಈರಪ್ಪ ತಿಳಿಸಿದರು. ಮಾನಸಿಕ ರೋಗಿಯಂತೆ ನಮ್ಮ ಮೇಲೆ ಆಗಾಗ ಹಲ್ಲೆ ಮಾಡು ತ್ತಿದ್ದ ಎಂಬ ಕಾರಣಕ್ಕಾಗಿ ಅವನನ್ನು ಕೊಠಡಿಯಲ್ಲಿ ಹಾಕಿದ್ದೆವು ಎಂದು ಅವರು ತಿಳಿಸಿದರು.

ಮನೆಯ ಗೋಡೆಯನ್ನು ಕನಿಷ್ಠ 4 ರಿಂದ 5 ಸಲ ಕೆಡವಿ ಹಾಕಿದ್ದರಿಂದ ಅನಿ ವಾರ್ಯವಾಗಿ ಕಬ್ಬಿಣದ ಸಲಾಕೆಯ ಸಣ್ಣದೊಂದು ಬಂದೀಖಾನೆ ಕಟ್ಟಿಸಿ ದೆವು ಎಂದು ಈರಪ್ಪ ವಿವರಿಸಿದರು.

`ಪ್ರತಿಷ್ಠಿತ ಬೆಳವಡಿ ಮನೆತನದ ಹಿರಿಯರಾದ ಗವಿಸಿದ್ಧಪ್ಪ (ಕಲ್ಲಪ್ಪ) ಬೆಳವಡಿ ಅವರು, ಎಂ.ಎಲ್.ಸಿ ಆಗಿದ್ದರು, ಮನೆಯ ಮಗ ಹೀಗಾ ದುದು ನೋಡಿ ನಮಗೂ ಬೇಸರ ಆಗೇತ್ರಿ ಎಂದು ಈರಪ್ಪ ಹೇಳಿದರು.

ಆದರೆ `ಪ್ರಕಾಶ ಒಬ್ಬ ಬುದ್ಧಿವಂತ ನಾಗಿದ್ದ, ಬಡವರ ಬಗ್ಗೆ ಕಾಳಜಿ ಹೊಂದಿದ್ದ, ಆತನನ್ನು ಅವರ ತಾತ ಕಲ್ಲಪ್ಪಜ್ಜ ಇದ್ದಾಂಗ ಅಂತಿದ್ದೆವು' ಎಂದು ಹೆಸರು ಹೇಳಬಯಸದ ಗ್ರಾಮದ ಕೆಲವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.