ADVERTISEMENT

ಬೆಂಕಿ: 6 ಲಕ್ಷಕ್ಕೂ ಅಧಿಕ ಹಾನಿ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2011, 10:05 IST
Last Updated 27 ಮಾರ್ಚ್ 2011, 10:05 IST
ಬೆಂಕಿ: 6 ಲಕ್ಷಕ್ಕೂ ಅಧಿಕ ಹಾನಿ
ಬೆಂಕಿ: 6 ಲಕ್ಷಕ್ಕೂ ಅಧಿಕ ಹಾನಿ   

ಗೋಕಾಕ: ನಗರದ ಎಪಿಎಮ್‌ಸಿ ಮಾರ್ಗ ಸಮೀಪದ ವೃತ್ತದಲ್ಲಿರುವ ಖಾಸಗಿ ಒಡೆತನಕ್ಕೆ ಸೇರಿದ ಸೀಮಾ ಎಂಟರ್‌ಪ್ರೈಜಸ್ ಕಾಟನ್ ಮತ್ತು ಜಿನ್ನಿಂಗ್ ಇಂಡಸ್ಟ್ರೀಜ್‌ನಲ್ಲಿ ಶುಕ್ರವಾರ ತಡರಾತ್ರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಸಂಭವಿಸಿದ ಆಕಸ್ಮಿಕ ಬೆಂಕಿ ದುರಂತದಲ್ಲಿ ಅರಳೆ, ಹತ್ತಿ ಮತ್ತು ಹತ್ತಿಕಾಳುಗಳು ಭಸ್ಮವಾಗಿ ಅಂದಾಜು ರೂ. 6 ಲಕ್ಷ ಹಾನಿ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 

ಘಟನೆಯಲ್ಲಿ ಮೆ. ರಾಜಕುಮಾರ ಮಾಲಗಾಂವ ಪಾಲುದಾರಿಕೆ ಸಂಸ್ಥೆಯೊಂದರ ಒಡೆತನದ ಸಂಸ್ಥೆಯ ವಿಶ್ರಾಂತಿ ಗೃಹದಲ್ಲಿ ಬಳಸಲ್ಪಡುವ ಗಾದಿಗಳು ಹಾಗೂ ಹತ್ತಿಕಾಳು ಬೆಂಕಿಗಾಹುತಿಯಾಗಿವೆ.

ಬೆಂಕಿ ಹತ್ತಿದ ಸುದ್ದಿ ತಿಳಿದಾಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದವು ಎಂದು ಸಂಸ್ಥೆಯ ಪಾಲುದಾರರು ಘಟನೆಯ ವಿವರ ನೀಡಿದರು. ರಾತ್ರಿ ಸಮಯದಲ್ಲಿ ಈ ಅವಘಡ ಸಂಭವಿಸಿದ್ದರಿಂದ ಬೆಳಕಿನ ಕೊರತೆಯಿಂದಾಗಿ ಅಪಾರ ಪ್ರಮಾಣದ ಹತ್ತಿಕಾಳು ಸುಟ್ಟು ಹೋಗಿದೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.